‘ಬ್ರೈನ್ ಟ್ಯೂಮರ್’ನ ಶಸ್ತ್ರ ಚಿಕಿತ್ಸೆ ನಡೆಯುತ್ತಿರುವಾಗ ಯುವತಿಯಿಂದ ಶ್ರೀ ಹನುಮಾನ ಚಾಲಿಸಾ ಪಠಣ !

೩ ಗಂಟೆಗಳ ಕಾಲ ನಡೆದ ಯಶಸ್ವೀ ಶಸ್ತ್ರಚಿಕಿತ್ಸೆ

ಧರ್ಮ, ಅಧ್ಯಾತ್ಮ, ಸಾಧನೆ, ಉಪಾಸನೆ ಇತ್ಯಾದಿ ಎಲ್ಲವೂ ಸುಳ್ಳು ಎಂದು ಕೂಗಾಡುವ ನಾಸ್ತಿಕರು, ತಥಾಕಥಿತ ವಿಜ್ಞಾನಿಗಳು, ಬುದ್ಧಿಜೀವಿಗಳಿಗೆ ಕಪಾಳಮೋಕ್ಷ !

ನವ ದೆಹಲಿ – ಅಖಿಲ ಭಾರತೀಯ ಆಯುರ್ವಿಜ್ಞಾನ ಸಂಸ್ಥೆಯಲ್ಲಿ (`ಏಮ್ಸ್’ನಲ್ಲಿ) ೨೪ ವರ್ಷದ ಯುವತಿಗೆ ‘ಬ್ರೇನ್ ಟ್ಯೂಮರ್’ನ ಶಸ್ತ್ರ ಚಿಕಿತ್ಸೆ ನಡೆಯುತ್ತಿರುವಾಗ ಆಕೆಯು ಶ್ರೀ ಹನುಮಾನ ಚಾಲಿಸಾ ಪಠಿಸುತ್ತಿದ್ದ ಬಗ್ಗೆ ಶಸ್ತ್ರಕ್ರಿಯೆ ಮಾಡಿದ ತಂಡದ ಆಧುನಿಕ ವೈದ್ಯ ದೀಪಕ ಗುಪ್ತಾ ಇವರು ಮಾಹಿತಿಯನ್ನು ನೀಡಿದರು. ಆಸ್ಪತ್ರೆಯಲ್ಲಿ ಅನುಭವೀ ಆಧುನಿಕ ವೈದ್ಯರ ತಂಡವು ಆಕೆಯ ಮೇಲೆ `ನ್ಯೂರೋ ಸರ್ಜರಿ’ ಮಾಡಿದರು. ಸುಮಾರು ೩ ಗಂಟೆಗಳ ಕಾಲ ನಡೆದ ಈ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಈ ಯುವತಿಯು ಎಚ್ಚರವಾಗಿದ್ದಳು. ಆಕೆಯ ಮೇಲೆ ನಡೆದ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದೆ.

ಡಾ. ದೀಪಕ ಗುಪ್ತಾ ಇವರು ಈ ಬಗ್ಗೆ ಮಾಹಿತಿ ನೀಡುವಾಗ, ಈ ಯುವತಿಯು ದೆಹಲಿಯ ಶಾಹದರಾ ಪರಿಸರದಲ್ಲಿ ವಾಸಿಸುತ್ತಾರೆ. ಆಕೆಯ ತಲೆಯ ಅನೇಕ ಕಡೆಗಳಲ್ಲಿ ‘ಟ್ಯೂಮರ್’ ಇತ್ತು. ಅದಕ್ಕಾಗಿ ಆಕೆಯ ಮೇಲೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಮೊದಲು ಆಕೆಯ ತಲೆಯ ಮೇಲ್ಭಾಗವನ್ನು ನಿಸ್ತೇಜಗೊಳಿಸಲು ‘ಚುಚ್ಚು ಮದ್ದು’ ನೀಡಲಾಯಿತು, ಅದೇ ರೀತಿ ನೋವು ನಿವಾರಣಾ ಔಷಧಿಯನ್ನೂ ನೀಡಲಾಯಿತು. ಈ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿಸಲು ಆಕೆಯ ತಲೆಯಲ್ಲಿದ್ದ ನರಗಳನ್ನು ಬೇರೆ ಬೇರೆ ಬಣ್ಣಗಳಲ್ಲಿ ಕೋಡಿಂಗ್ ಮಾಡಲಾಯಿತು, ಅದನ್ನು ವೈದ್ಯಕೀಯ ಭಾಷೆಯಲ್ಲಿ ‘ಟ್ರಾಕ್ಟ್ಟೊಗ್ರಾಫಿ’ ಎಂದು ಹೇಳುತ್ತಾರೆ. ಈ ರೀತಿಯ ಶಸ್ತ್ರಚಿಕಿತ್ಸೆಯಿಂದ ಮೆದುಳಿಗೆ ಕಡಿಮೆ ಹಾನಿಯಾಗುತ್ತದೆ. ಜೊತೆಗೆ ಮೆದುಳಿನ ಮಹತ್ವವಾದ ಭಾಗ ಹಾಳಾಗಬಾರದೆಂದು ರೋಗಿಯನ್ನು ಎಚ್ಚರದಲ್ಲಿಡಲಾಗುತ್ತದೆ” ಎಂದರು. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಹನುಮಾನ ಚಾಲಿಸಾ ಅಥವಾ ಇತರ ಯಾವುದೇ ಧಾರ್ಮಿಕ ಉಪಾಸನೆ ಮಾಡಿದರೆ ಅನೇಕ ಲಾಭಗಳು ಆಗುತ್ತವೆ ಎಂದು ಹೇಳಿದರು.