ಮಹಾಕುಂಭಕ್ಷೇತ್ರದಲ್ಲಿ ಭದ್ರತಾ ವ್ಯವಸ್ಥೆಯಲ್ಲಿ ಭಾರೀ ಏರಿಕೆ : ಆಡಳಿತದಿಂದ ಎಲ್ಲಾ ಧರ್ಮಛತ್ರದ ಚಿತ್ರೀಕರಣ!

ಪ್ರಯಾಗರಾಜ್, ೬ ಜನವರಿ (ವಾರ್ತೆ.) – ಹಿಂಸಾಚಾರ ಮಾಡುವ ಬಗ್ಗೆ ಸಾಮಾಜಿಕ ಮಾಧ್ಯಮಗಳಿಂದ ಬರುತ್ತಿರುವ ಬೆದರಿಕೆಗಳ ಹಿನ್ನೆಲೆಯಲ್ಲಿ ಮಹಾಕುಂಭಕ್ಷೇತ್ರದಲ್ಲಿ ಭದ್ರತೆ ವ್ಯವಸ್ಥೆಯನ್ನು ಹೆಚ್ಚಿನ ಪ್ರಮಾಣದಲ್ಲಿ ವೃದ್ಧಿ ಮಾಡಲಾಗಿದೆ. ಪ್ರತಿಯೊಂದು ಆಖಾಡದ ಪ್ರದೇಶದಲ್ಲಿ ಪೊಲೀಸರು ನಿಯೋಜಿಸಲಾಗಿದ್ದಾರೆ, ಹಾಗೆಯೇ ಭದ್ರತೆಗಾಗಿ ಎಲ್ಲಾ ಧರ್ಮಛತ್ರಗಳಲ್ಲಿ ಆಗಮಿಸುವ ನಾಗರಿಕರ ಚಿತ್ರೀಕರಣ ಪ್ರಾರಂಭಿಸಲಾಗಿದೆ.

ಕುಂಭಮೇಳದ ಪ್ರಮುಖ ಕಾರ್ಯಕ್ರಮಗಳನ್ನು ಡ್ರೋನ್ ಕ್ಯಾಮೆರಾ ಮೂಲಕ ಚಿತ್ರೀಕರಿಸಲಾಗುತ್ತಿದೆ. ಮಹಾಕುಂಭದ ಪ್ರತಿಯೊಂದು ಮಹಾದ್ವಾರದ ಬಳಿ ಹೆಚ್ಚಿನ ಪ್ರಮಾಣದಲ್ಲಿ ಪೋಲೀಸರ ರಕ್ಷಣೆಯ ವ್ಯವಸ್ಥೆ ಮಾಡಲಾಗಿದೆ. ಪೋಲಿಸರಿಂದ ಕುಂಭಕ್ಷೇತ್ರಕ್ಕೆ ಪ್ರವೇಶಿಸುವ ವಾಹನಗಳ ಪರಿಶೀಲನೆ ಮಾಡಲಾಗುತ್ತಿದೆ. ಮಹಾದ್ವಾರಗಳ ಜೊತೆಗೆ ಅಕ್ಷಯವಟ, ಲೇಟೆ ಮಾರುತಿ ದೇವಾಲಯ, ನಾಗವಸುಕಿ ದೇವಾಲಯ, ತ್ರಿವೇಣಿ ಸಂಗಮ ಇತ್ಯಾದಿ ಪ್ರಮುಖ ಧಾರ್ಮಿಕ ಸ್ಥಳಗಳ ಬಳಿ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಎಲ್ಲಾ ಸೇತುವೆಗಳು, ಆಖಾಡಗಳ ಮಂಟಪಗಳು, ಅಂಗಡಿಗಳು ಇತ್ಯಾದಿ ಸ್ಥಳಗಳಲ್ಲಿ ಪೋಲೀಸರಿಂದ ಪರಿಶೀಲನೆ ನಡೆಯುತ್ತಿದೆ. ಪ್ರತಿಯೊಂದು ಆಖಾಡದಲ್ಲಿ ಶಸ್ತ್ರಸಜ್ಜಿತ ಪೋಲೀಸರ ನೇಮಕ ಮಾಡಲಾಗಿದೆ. ಅಪತ್ಕಾಲ ಭದ್ರತೆಯ ದೃಷ್ಟಿಯಿಂದ ದುರಂತ ಸಂಭವಿಸಿದಾಗ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಪೋಲೀಸರು ಪ್ರಸಂಗದ ತರಬೇತಿ ನಡೆಸುತ್ತಿದ್ದಾರೆ.