ದೇವಸ್ಥಾನಗಳ ಸಂರಕ್ಷಣೆಗಾಗಿ ಜಾತಿ ಭೇದ ಮರೆತು ಎಲ್ಲರೂ ಒಂದಾಗಬೇಕಾಗಿದೆ ! – ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠಮ್, ದಿವ್ಯಕ್ಷೇತ್ರ ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ

ಕರ್ನಾಟಕ ರಾಜ್ಯ ಮಂದಿರ ಅಧಿವೇಶನದಲ್ಲಿ ಅನೇಕ ಠರಾವುಗಳಿಗೆ ಒಮ್ಮತದ ಅಂಗೀಕಾರ !

ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠಮ್, ದಿವ್ಯಕ್ಷೇತ್ರ ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ

ಬೆಂಗಳೂರು : ಅರ್ಚಕರು ದೇವಸ್ಥಾನಗಳಲ್ಲಿ ಜಾತಿ ಭೇದ, ರಾಜಕೀಯ ಪಕ್ಷ ಬೇಧವನ್ನು ಮಾಡದೆ ಪ್ರತಿಯೊಬ್ಬರೂ ಭಗವಂತನ ದ್ವಾರಕ್ಕೆ ಬರುವ ಭಕ್ತರೆಂಬ ಭಾವನೆಯನ್ನು ಇಡಬೇಕು. ಅರ್ಚಕರು ಸಮಾಜದಲ್ಲಿ ಸರ್ವೋಚ್ಚ ಸ್ಥಾನದ್ಲಲಿ ಇರುವರು ; ಹಾಗಾಗಿ ಅವರ ಆಚಾರ- ವಿಚಾರಗಳು ಮಾರ್ಗದರ್ಶಕವಾಗಿರಬೇಕು. ದೇವಸ್ಥಾನದ ವಿಶ್ವಸ್ಥರ ಜವಾಬ್ದಾರಿ ದೊಡ್ಡದಿದ್ದು; ಸುತ್ತಮುತ್ತಲಿನ ಜನರಿಗೆ ದೇವಸ್ಥಾನದ ಮೇಲೆ ಶ್ರದ್ಧೆಯನ್ನು ಹೆಚ್ಚಿಸುವುದು ಅವರ ಕರ್ತವ್ಯವಾಗಿದೆ. ಭಿನ್ನಾಭಿಪ್ರಾಯ, ವಯಕ್ತಿಕ ಪ್ರತಿಷ್ಠೆ, ದುರಾಸೆಯಿಂದಾಗಿ ದೇವಸ್ಥಾನಗಳನ್ನು ವಿಶ್ವಸ್ಥರು ಸರಕಾರದ ಅಧೀನವಾಗಲು ಬಿಡಬಾರದು. ದೇವಾಸ್ಥಾನದ ರಕ್ಷಣೆಯೆಂದರೆ ಭಾರತದ ಸಂಸ್ಕೃತಿಯ ರಕ್ಷಣೆಯಾಗಿದೆ ; ಇದರ ಕಾರ್ಯವನ್ನು ವೃದ್ಧಿಸಲು ಉಪಸ್ಥಿತರಿಗೆ ಸ್ವಾಮೀಜಿಯವರು ಆಶೀರ್ವಾದವನ್ನು ನೀಡಿದರು. ಈ ಅಧಿವೇಶನದಲ್ಲಿ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠಮ್, ದಿವ್ಯಕ್ಷೇತ್ರ ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಇವರ ದಿವ್ಯ ಉಪಸ್ಥಿತಿಯಿಂದ ವಾತಾವರಣ ತೇಜೋಮಯವಾಯಿತು.

ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದಿನಾಂಕ ಜನವರಿ 4 ಮತ್ತು 5 ರಂದು ಬಸವೇಶ್ವರ ನಗರದದಲ್ಲಿ ನಡೆದ ದೇವಸ್ಥಾನಗಳ ಅಧಿವೇಶನದಲ್ಲಿ ದೇವಸ್ಥಾನಗಳ ರಕ್ಷಣೆಗೆ ಈ ಕೆಳಗಿನ ನಿರ್ಣಯವನ್ನು 100 ಕ್ಕೂ ಅಧಿಕ ದೇವಸ್ಥಾನಗಳ ವಿಶ್ವಸ್ಥರು ಅನುಮೋದನೆ ಮಾಡಿದರು.

ಈ ಅಧಿವೇಶನದಲ್ಲಿ ನೀಡಿದ ನಿರ್ಣಯಗಳನ್ನು ಮುಂದೆ ನೀಡಲಾಗಿದೆ :

1. ಕರ್ನಾಟಕದಲ್ಲಿ ಪ್ರಾಚೀನ ಅಥವಾ ಐತಿಹಾಸಿಕ ಮಹತ್ವವಿರುವ ಆದರೆ ಆಡಳಿತ ಹಾಗೂ ಪುರಾತತ್ವ ವಿಭಾಗದಿಂದ ದುರ್ಲಕ್ಷಿಸಲ್ಪಟ್ಟಿರುವ ದೇವಸ್ಥಾನಗಳನ್ನು ತಕ್ಷಣ ಜೀರ್ಣೋದ್ಧಾರ ಮಾಡಲು ಕರ್ನಾಟಕ ಸರಕಾರವು ಮುಂಗಡ ಪತ್ರದಲ್ಲಿ ಸಾಕಷ್ಟು ಅನುದಾನವನ್ನು ನೀಡಬೇಕು.

2. ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳಿಂದ ಸಂಗ್ರಹವಾದ ಕಾಮನ್ ಪೂಲ್ ನಿಧಿಯನ್ನು ಅನ್ಯ ಯಾವುದೇ ಉದ್ದೇಶಕ್ಕೆ ಬಳಸದೇ ಕೇವಲ ಹಿಂದೂ ಧಾರ್ಮಿಕ ಉದ್ದೇಶಕ್ಕೆ ಮಾತ್ರ ಬಳಸಬೇಕು.

3. ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ದೇವಸ್ಥಾನಗಳ ಮೂಲಕ ಭಕ್ತರಿಗೆ, ಮಕ್ಕಳಿಗೆ ಸಂಸ್ಕಾರ ನೀಡುವುದು ಮತ್ತು ಹಿಂದೂ ಧರ್ಮ ಶಿಕ್ಷಣವನ್ನು ನೀಡಲು ವ್ಯವಸ್ಥೆ ಮಾಡಬೇಕು.

4. ಕರ್ನಾಟಕದಲ್ಲಿ ಧಾರ್ಮಿಕ ಮಹತ್ವವಿರುವ ತೀರ್ಥಕ್ಷೇತ್ರಗಳು, ಶ್ರೀಕ್ಷೇತ್ರ, ಕೋಟೆಗಳಲ್ಲಿನ ದೇವಸ್ಥಾನಗಳ ಜಮೀನಿನ ಮೇಲೆ ಖಾಸಗಿಯವರ ಅತಿಕ್ರಮಣ, ಅನ್ಯ ಮತೀಯರ ಅತಿಕ್ರಮಣಗಳನ್ನು ಕರ್ನಾಟಕ ಸರಕಾರ ಸಮೀಕ್ಷೆ ಮಾಡಿ ತಕ್ಷಣ ಆ ಅತಿಕ್ರಮಣಗಳನ್ನು ತೆರವುಗೊಳಿಸಬೇಕು. ಈ ವಿಷಯದಲ್ಲಿ ನಡೆಯುತ್ತಿರುವ ನ್ಯಾಯಾಂಗ ಖಟ್ಲೆಗಳಿಗಾಗಿ ತ್ವರಿತಗತಿ (Fast track court) ನ್ಯಾಯಾಲಯಗಳನ್ನು ನಿರ್ಮಾಣ ಮಾಡಬೇಕು.

5. ದೇವಸ್ಥಾನಗಳ ಪರಿಸರದಲ್ಲಿ ಹಾಗೂ ತೀರ್ಥಕ್ಷೇತ್ರದ ಸ್ಥಳಗಳ ಪಾವಿತ್ರ್ಯ ರಕ್ಷಣೆಗಾಗಿ ಮದ್ಯ ಹಾಗೂ ಮಾಂಸ ನಿಷೇಧ ಮಾಡಬೇಕೆಂದು ಕರ್ನಾಟಕ ಸರಕಾರ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

6. ಮಾನ್ಯ ಸರ್ವೋಚ್ಚ ನ್ಯಾಯಾಲಯವು ಯಾವುದೇ ಖಾಸಗಿ ದೇವಸ್ಥಾನಗಳನ್ನು ಸರಕಾರವು ವಶಪಡಿಸಿಕೊಂಡಿದ್ದರೆ, ಅದರ ಸಮಸ್ಯೆ ಮತ್ತು ಖಟ್ಲೆಗಳನ್ನು ಬಗೆಹರಿಸಿ, 6 ತಿಂಗಳ ಒಳಗೆ ವಾಪಾಸು ಅದರ ಮೂಲ ವಾರಸುದಾರರಿಗೆ ನೀಡಬೇಕೆಂದು ಆದೇಶ ನೀಡಿದೆ. ಈ ಆದೇಶದ ಅನ್ವಯ ಕರ್ನಾಟಕ ಕೆಲವು ಖಾಸಗಿ ದೇವಸ್ಥಾನಗಳ ವಿಷಯದಲ್ಲಿ ಸರಕಾರವು ವಶಪಡಿಸಿಕೊಂಡು ಹಲವು ವರ್ಷಗಳು ಸಂದಿದೆ ಮತ್ತು ನಿರಂತರ ಕಾನೂನು ಹೋರಾಟದ ನಂತರ ಮಾನ್ಯ ನ್ಯಾಯಾಲಯವು ಸಂಬಂದಿತ ಖಾಸಗಿ ದೇವಸ್ಥಾನಗಳ ಪರವಾಗಿ ಆದೇಶ ನೀಡಿದರೂ ಸಹ, ಇಂದಿಗೂ ಸಹ ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಯಲ್ಲಿ ಇದೆ. ಈ ಸಮಸ್ಯೆಗೆ ಕೂಡಲೇ ಪರಿಹಾರ ಮಾಡಬೇಕು.

7. ಧಾರ್ಮಿಕ ದತ್ತಿ ಇಲಾಖೆಯ ಸಿ ಗ್ರೇಡ್ ದೇವಸ್ಥಾನಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲು ಇರುವ ಕಾನೂನು ಸಮಸ್ಯೆಗಳನ್ನು ಬಗೆಹರಿಸಬೇಕು ಮತ್ತು ದೇವಸ್ಥಾನಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು.

8. ದೇವಸ್ಥಾನಗಳಲ್ಲಿ ಭಕ್ತರು ಶ್ರದ್ಧೆಯಿಂದ ಅರ್ಪಣೆ ಮಾಡಿದ ನಿಧಿಯನ್ನು ಅನ್ಯ ಅಭಿವೃದ್ಧಿ ಕಾರ್ಯಕ್ಕಾಗಿ ಉಪಯೋಗಿಸಬಾರದು ಮತ್ತು ದೇವಸ್ಥಾನಗಳ ಸಂಪತ್ತನ್ನು ದೇವಸ್ಥಾನಗಳ ಅಭಿವೃದ್ಧಿ, ಜೀರ್ಣೋದ್ಧಾರಕ್ಕಾಗಿ ಮಾತ್ರ ಸರಕಾರವು ಉಪಯೋಗಿಸಬೇಕು.

9. ದೇವಸ್ಥಾನದ ಜಾತ್ರೆ ಉತ್ಸವ ಇತ್ಯಾದಿ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ದೇವರ ಮೇಲೆ ಶ್ರದ್ಧೆ ಇರುವವರಿಗೆ ಮಾತ್ರ ನೀಡಬೇಕು ಮತ್ತು ಅನ್ಯ ಮತೀಯರಿಗೆ ವ್ಯಾಪಾರ ವಹಿವಾಟು ಮಾಡುವುದಕ್ಕೆ ಅವಕಾಶ ನೀಡಬಾರದು.

10. ರಾಜ್ಯದ ಅನೇಕ ಸ್ಥಳಗಳಲ್ಲಿ ಕಳೆದ ನೂರಾರು ವರ್ಷಗಳಿಂದ ಪ್ರಾಚೀನ ದೇವಸ್ಥಾನ, ವನದೇವತೆಗಳನ್ನು ಭಕ್ತರು ಪೂಜೆ ಮಾಡಿಕೊಂಡು ಬಂದಿದ್ದು, ಇತ್ತೀಚೆಗೆ ಅರಣ್ಯ ಇಲಾಖೆ, ವಿವಿಧ ಇಲಾಖೆಗಳು ಮಾಲಿಕತ್ವದ ವಿಚಾರದಲ್ಲಿ ನಿತ್ಯ ಪೂಜೆಯನ್ನು, ದೇವಸ್ಥಾಗಳ ಅಭಿವೃದ್ದಿ ಮಾಡಲು ಅಡಚಣೆ ಮಾಡುತ್ತಿದ್ದು, ಇದಕ್ಕೆ ಇರುವ ಕಾನೂನು ಅಡಚಣೆಗಳನ್ನು ದೂರ ಮಾಡಬೇಕು ಮತ್ತು ದೇವಸ್ಥಾನಗಳನ್ನು ಕಾನೂನು ಬದ್ದವಾಗಿ ದೇವಸ್ಥಾನಗಳ ಹೆಸರಿಗೆ ಅದನ್ನು ಅಧಿಕೃತ ಮಾಡಬೇಕು.

11. ದೇವಸ್ಥಾನಗಳನ್ನು ಶಂಕರಾಚಾರ್ಯರು ಮತ್ತು ಹಿಂದೂ ಧರ್ಮಾಚಾರ್ಯರ ನೇತೃತ್ವದಲ್ಲಿ ನಿರ್ವಹಣೆ ಮಾಡುವ ಸನಾತನ ಹಿಂದೂ ಬೋರ್ಡ ಸ್ಥಾಪನೆಗೆ ಸಹಕಾರ ನೇಡಬೆಕು.