ಮೋಹನ್ ದಾಸ್ ಗಾಂಧಿಯನ್ನು ಪಾಕಿಸ್ತಾನದ ಪಿತಾಮಹ ಎಂದು ಕರೆದ ಗಾಯಕ ಅಭಿಜಿತ್ ಭಟ್ಟಾಚಾರ್ಯಗೆ ಲೀಗಲ್ ನೋಟಿಸ್!

ಪುಣೆ – ಮಹಾತ್ಮ ಗಾಂಧಿ ಭಾರತಕ್ಕಾಗಿ ಅಲ್ಲ, ಅವರು ಪಾಕಿಸ್ತಾನಕ್ಕಾಗಿ ಇದ್ದರು. ಭಾರತವು ಮೊದಲನಿಂದಲೂ ಭಾರತವಾಗಿತ್ತು, ನಂತರ ಪಾಕಿಸ್ತಾನ ನಿರ್ಮಾಣವಾಯಿತು. ಅವರನ್ನು ‘ರಾಷ್ಟ್ರಪಿತ ಮಹಾತ್ಮ ಗಾಂಧಿ’ ಎಂದು ತಪ್ಪಾಗಿ ಕರೆಯಲಾಗಿದೆ. ಅವರು ಪಾಕಿಸ್ತಾನದ ಸೃಷ್ಟಿದವ. ಅವರು ಪಾಕಿಸ್ತಾನದ ಪಿತಾಮಹಾ ಆಗಿದ್ದರು, ತಾತಾ ಆಗಿದ್ದರು ಎಲ್ಲವೂ ಆಗಿದ್ದರು, ಎಂದು ಗಾಯಕ ಅಭಿಜಿತ ಭಟ್ಟಾಚಾರ್ಯ ಇವರು ಶುಭಂಕರ್ ಮಿಶ್ರಾ ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಈ ವಿಚಾರದಲ್ಲಿ ವಕೀಲ ಅಸೀಮ್ ಸರೋದೆ ಇವರು ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಅಭಿಜಿತ್ ಭಟ್ಟಾಚಾರ್ಯ ‘ಅವರು ತಮ್ಮ ಹೇಳಿಕೆಗೆ ಲಿಖಿತವಾಗಿ ಕ್ಷಮೆಯಾಚಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು’, ಎಂದು ವಕೀಲ ಅಸಿಂ ಸರೋದೆ ಹೇಳಿದ್ದಾರೆ.

ಇಂತಹ ಹೇಳಿಕೆ ನೀಡುವ ಮೂಲಕ ಗಾಯಕ ತನ್ನ ಮಿತಿಯನ್ನು ಮೀರಿದ್ದಾರೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. 150ಕ್ಕೂ ಹೆಚ್ಚು ದೇಶಗಳು ಮಹಾತ್ಮಾ ಗಾಂಧಿಯವರ ಹೆಸರಿನಲ್ಲಿ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿರುವುದರಿಂದ ಅವರ ಹೇಳಿಕೆಯ ನೈಜಸ್ಥಿತಿಯನ್ನು ಗಾಯಕ ಪರಿಶೀಲಿಸಬೇಕು ಎಂದು ವಕೀಲ ಸರೋದೆ ಹೇಳಿದರು.

ಸಂಪಾದಕೀಯ ನಿಲುವು

ತಮಿಳುನಾಡಿನ ದ್ರಮುಕನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಕರ್ನಾಟಕದ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ನಂತಹ ಸಚಿವರು ಸನಾತನ ಧರ್ಮವನ್ನು ಕೊನೆಗೊಳಿಸುವ ಬಗ್ಗೆ ಮಾತನಾಡುತ್ತಾರೆ, ನಿಖಿಲ್ ವಾಗಳೆ, ಎನ್‌ಸಿಪಿಯ ಶರದ್ ಪವಾರ್ ಪಕ್ಷದ ಶಾಸಕ ಜಿತೇಂದ್ರ ಅವಾಡ್ ಸಹ ಸನಾತನ ಧರ್ಮ ಮುಗಿಸುವ ನಿಲುವಿಗೆ ಬೆಂಬಲ ಘೋಷಿಸುವ ಮೂಲಕ ಸನಾತನ ಧರ್ಮದ ಬಗ್ಗೆ ವಿಷ ಕಕ್ಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೋಹನ್‌ದಾಸ್‌ ಗಾಂಧಿ ಅವರನ್ನು ಟೀಕಿಸುವವರಿಗೆ ನೋಟಿಸ್‌ ಜಾರಿ ಮಾಡುವ ವಕೀಲರು, ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧವೂ ಕ್ರಮ ಕೈಗೊಳ್ಳುವರೇ ?