ಜಸಪುರ (ಛತ್ತೀಸಗಢ) ಇಲ್ಲಿನ ಘಟನೆ
ಜಸಪುರ (ಛತ್ತೀಸಗಡ) – ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ನಾಸಿರ ಅಲಿ ಖಾನ್ ಅವನನ್ನು ಪೊಲೀಸರು ಬಂಧಿಸಿದ್ದಾರೆ. ಅವನು ಜಸಪುರ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷನಾಗಿದ್ದಾನೆ.
ಜನವರಿ 3, 2025 ರಂದು ಬೆಳಿಗ್ಗೆ 6 ರಿಂದ 7 ರ ಗಂಟೆಯ ಸಮಯದಲ್ಲಿ ಇಲ್ಲಿನ ಶ್ರೀ ದುರ್ಗಾದೇವಿಯ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿರುವಾಗ ನಾಸಿರ್ ಅಲಿ ಅಲ್ಲಿಗೆ ಹೋಗಿ ಪೂಜೆಯನ್ನು ನಿಲ್ಲಿಸುವಂತೆ ಹೇಳಿದನು. ಅರ್ಚಕರಾದ ಭೂಪೇಂದ್ರ ಪಾಠಕ ಅವನನ್ನು ತಡೆಯಲು ಪ್ರಯತ್ನಿಸಿದಾಗ ನಾಸಿರ ಅರ್ಚಕರನ್ನು ನಿಂದಿಸಿ ಥಳಿಸಿದನು. ದೇವಸ್ಥಾನದಲ್ಲಿ ಉಪಸ್ಥಿತರಿದ್ದ ಭಕ್ತರು ನಾಸಿರನ ಮನವೊಲಿಸಲು ಪ್ರಯತ್ನಿಸಿದರು; ಆದರೆ ಅವನು ಭಕ್ತರನ್ನು ನಿಂದಿಸತೊಡಗಿದನು. ಭಜನೆ, ಕೀರ್ತನೆ ಮತ್ತು ಆರತಿ ನಡೆಯುವಾಗ ಹಚ್ಚುವ ಧ್ವನಿವರ್ಧಕಗಳನ್ನು ಸ್ಥಗಿತಗೊಳಿಸುವಂತೆ ಹೇಳಿದನು. ತದನಂತರ ಅವನು ಅಲ್ಲಿಂದ ಹೊರಟು ಹೋದನು. ಈ ಪ್ರಕರಣದಲ್ಲಿ ಅರ್ಚಕರು ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ನಾಸೀರ್‍ನನ್ನು ಬಂಧಿಸಿದ್ದಾರೆ.
ಸಂಪಾದಕೀಯ ನಿಲುವು
|