ಕೆನಡಾದಲ್ಲಿ ಜಿಹಾದಿ ಭಯೋತ್ಪಾದಕ ಸಂಘಟನೆ ‘ಹಿಜಿಬುಲ್ ತಹರೀರ್’ಯಿಂದ ಖಲೀಫಾ ಪರಿಷತ್ತು !

ಕೆನಡಾದ ಸಂಸದರಿಂದ ವಿರೋಧ

(‘ಖಾಲಿಫಾ’ ಎಂದರೆ ‘ಉತ್ತರಾಧಿಕಾರಿ’, ‘ಶಾಸಕ’ ಅಥವಾ ‘ನಾಯಕ’. ಶರಿಯಾದ ಮೂಲಕ ಆಡಳಿತ ನಡೆಸುವವನು)

ಓಟಾವಾ (ಕೆನಡಾ) – ಜಿಹಾದಿ ಭಯೋತ್ಪಾದಕ ಸಂಘಟನೆ ‘ಹಿಜಬುಲ್ ತಹರೀರ್’ ಕೆನಡಾದಲ್ಲಿ ‘ಖಲೀಫಾ ಪರಿಷತ್ತು’ ಆಯೋಜಿಸುತ್ತಿದೆ. ಇದು ಕೆನಡಾದಲ್ಲಿನ ಮಿಸಿಸಾಗ ಇಲ್ಲಿ ಜನವರಿ ೧೮ ರಂದು ನಡೆಯುವುದಿತ್ತು; ಆದರೆ ಇಲ್ಲಿಯ ಮೇಯರ್ ಈ ಕಾರ್ಯಕ್ರಮಕ್ಕೆ ವಿರೋಧಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಅದರ ನಂತರ ಈ ಪರಿಷತ್ತು ಹ್ಯಾಮಿಲ್ಟನ್ ನಗರದಲ್ಲಿ ಆಯೋಜಿಸಲಾಗುತ್ತಿದೆ. ‘ಖಲೀಫಾ ವಾಪಸ್ ಬರಲು ವಿಳಂಬವಾಲು ಬರುತ್ತಿರುವ ಅಡಚಣೆಗಳು ದೂರಗೊಳಿಸುವುದು’, ಇದೇ ಈ ಪರಿಷತ್ತಿನ ವಿಷಯವಾಗಿದೆ. ಹಾಗೂ ಈ ಸಭೆಯಲ್ಲಿ ‘ಪ್ಯಾಲೆಸ್ಟೈನ್’ನ ಸ್ವಾತಂತ್ರ್ಯಕ್ಕಾಗಿ ಖಲೀಫಾನ ಆಡಳಿತ ಹೇಗೆ ಆವಶ್ಯಕವಾಗಿದೆ’, ಇದರ ಕುರಿತು ಚರ್ಚೆ ನಡೆಯುವುದು.

ಖಲೀಫಾನ ಆಡಳಿತ ತರುವುದಕ್ಕೆ ಪರಿಷತ್ತಿನ ಆಯೋಜನೆ

ಈ ಬಗ್ಗೆ ಒಂದು ಫೇಸ್ಬುಕ್ ಪೋಸ್ಟ್ ಪ್ರಸಾರ ಮಾಡಿ ಇದರಲ್ಲಿ, ‘ಹಿಜಬುತ್ ತಹರೀರ್ ಕೆನಡಾ’ ನಿಮಗೆ ಈ ವರ್ಷದ ಪರಿಷತ್ತಿಗಾಗಿ ಆಮಂತ್ರಿಸುತ್ತೇವೆ. ಮುಸಲ್ಮಾನರ ಮೇಲೆ ಬಂದೊದಗಿರುವ ಶೋಕದ ಕುರಿತು ಜಗತ್ತಿನಾದ್ಯಂತ ಅಸಮಾಧಾನ ಇದೆ; ಆದರೆ ಅಲ್ಲ ಮತ್ತು ಪ್ರೇಷಿತ ಇವರು ಮೊದಲೇ ವಿಜಯಕ್ಕಾಗಿ ಯೋಗ್ಯ ಪದ್ಧತಿ ಪ್ರಕಟಿಸಿದ್ದಾರೆ. ಇಸ್ಲಾಂನ ಸಂಪೂರ್ಣ ಕಾರ್ಯಾಚರಣೆ ನಡೆಸಿ ಮತ್ತು ಖಲೀಫಾನ ಸ್ಥಾಪನೆಯಿಂದ ಮುಸಲ್ಮಾನರು ಮತ್ತೊಮ್ಮೆ ಜಗತ್ತಿನಲ್ಲಿ ತಮ್ಮ ಯೋಗ್ಯ ಸ್ಥಾನ ಪಡೆಯಬಹುದು’, ಎಂದು ಬರೆದಿದೆ.

‘ಹಿಜಬುತ್ ತಹರೀರ್’ ಮೇಲೆ ಭಾರತದ ಸಹಿತ ಅನೇಕ ದೇಶಗಳಲ್ಲಿ ನಿಷೇಧ !

ಹಿಜಬುತ್ ತಹರೀರ್ ದ ಸ್ಥಾಪನೆ ೧೯೫೩ ರಲ್ಲಿ ಆಗಿದೆ ಮತ್ತು ಅದು ಈಗ ಜಗತ್ತಿನಾದ್ಯಂತ ಇಸ್ಲಾಂನ ಆಡಳಿತವನ್ನು ಬೆಂಬಲಿಸುತ್ತದೆ. ಹಿಜಬುತ್ ತಹರೀರ್ ಭಾರತ, ಇಸ್ರೇಲ್, ಇಂಗ್ಲೆಂಡ್, ಜರ್ಮನಿ, ಚೀನಾ, ರಷ್ಯಾ, ಟರ್ಕಿ ಮತ್ತು ಬಾಂಗ್ಲಾದೇಶದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯಾಗಿದೆ. ಕೆನಡಾದಲ್ಲಿ ಅದನ್ನು ನಿಷೇಧಿಸಿಲ್ಲ ಹಾಗಗಾಇ ಅದು ಇಲ್ಲಿ ಕಾರ್ಯನಿರತವಾಗಿದೆ.

ಕೆನಡಾದಲ್ಲಿ ಹಿಜಬುತ್ ಮೇಲೆ ನಿಷೇದ ಹೇರಲು ಆಗ್ರಹ

ಅಮೇರಿಕಾದ ಉದ್ಯಮಿ ಇಲಾನ್ ಮಸ್ಕ್ ಇವರು ಕೂಡ ಕೆನಡಾದಲ್ಲಿ ಈ ಪರಿಷತ್ತನ್ನು ಆಯೋಜಿಸಿರುವುದರ ಕುರಿತು ಪ್ರಶ್ನಿಸಿದ್ದಾರೆ. ‘ಜಸ್ಟಿನ್ ಟ್ರೂಡೋ ಇವರ ಆಡಳಿತದಲ್ಲಿ ಅವರ ದೇಶ ಭಯೋತ್ಪಾದಕರ ಆಶ್ರಯ ಸ್ಥಾನವಾಗಿದೆ’, ಎಂದು ಕೆನಡಾದ ಸಂಸದ ಮತ್ತು ಇತರರು ಕೂಡ ಹೇಳಿದ್ದಾರೆ. ಈ ಕಾರ್ಯಕ್ರಮದ ಸಹಿತ ಹಿಜಬುತ್ ತಹರೀರ್ ನನ್ನು ನಿಷೇಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದಕ ಸಂಘಟನೆಯ ಮೇಲೆ ಇತರ ದೇಶದಲ್ಲಿ ನಿಷೇಧ ಇರುವಾಗ ಕೆನಡಾದಲ್ಲಿ ಅದರ ಮೇಲೆ ನಿಷೇಧವಿಲ್ಲ. ಇದರಿಂದ ಕೆನಡಾ ಭಯೋತ್ಪಾದಕರನ್ನು ಪೋಷಿಸುವ ಪಾಕಿಸ್ತಾನದ ನಂತರ ಇದು ಎರಡನೆಯ ದೇಶವಾಗಿದೆ. ಇಂತಹ ದೇಶದ ಮೇಲೆ ಈಗ ಜಗತ್ತಿನಾದ್ಯಂತ ಒತ್ತಡ ಹೇರುವುದು ಆವಶ್ಯಕವಾಗಿದೆ !