ಜ್ಞಾನವಾಪಿ ಮಸೀದಿಗೆ ತಾಗಿರುವ ಭೂಮಿಯನ್ನು ಶ್ರೀ ಕಾಶಿ ವಿಶ್ವನಾಥ ದೇವಾಲಯದ ಆಡಳಿತಕ್ಕೆ ಹಸ್ತಾಂತರಿಸಲು ನಿರ್ಧಾರ !

ಇದರ ಬದಲಿಗೆ ಕಾಶಿ ವಿಶ್ವನಾಥ ದೇವಾಲಯ ಆಡಳಿತವು ಜ್ಞಾನವಾಪಿ ಮಸೀದಿಗೆ ೧ ಸಾವಿರ ಸ್ವೆಯರ್ ಫೂಟ್ ಭೂಮಿ ನೀಡಲಿದೆ !

ಶ್ರೀ ಕಾಶಿ ವಿಶ್ವನಾಥ ದೇವಾಲಯ ಮತ್ತು ಜ್ಞಾನವಾಪಿ ಮಸೀದಿ

ವಾರಣಾಸಿ – ಇಲ್ಲಿಯ ಜ್ಞಾನವಾಪಿ ಮಸೀದಿಯ ಪಕ್ಷವಾದ ‘ಅಂಜುಮಾನ ಇಂತೆಜಾಮಿಯಾ ಕಮೀಟಿ’ಯು ಜ್ಞಾನವಾಪಿ ಮಸೀದಿಗೆ ತಾಗಿರುವ ೧ ಸಾವಿರದ ೭೦೦ ಚದರ ಅಡಿ ಭೂಮಿಯನ್ನು ಶ್ರೀ ಕಾಶಿ ವಿಶ್ವನಾಥ ದೇವಾಲಯದ ಆಡಳಿತಕ್ಕೆ ಹಸ್ತಾಂತರಿಸಲು ನಿರ್ಧಾರ ಕೈಗೊಂಡಿದೆ. ಇದರ ಬದಲಿಗೆ ಕಾಶಿ ವಿಶ್ವನಾಥ ದೇವಾಲಯದ ಆಡಳಿತವು ಮುಸಲ್ಮಾನ ಪಕ್ಷಕ್ಕೆ ೧ ಸಾವಿರ ಚದರ ಅಡಿ ಭೂಮಿಯನ್ನು ನೀಡಲು ನಿರ್ಧರಿಸಿದೆ. ಶ್ರೀ ಕಾಶಿ ವಿಶ್ವನಾಥ ದೇವಾಲಯದ ಆಡಳಿತಕ್ಕೆ ಸಿಕ್ಕಿದ ಹೊಸ ಭೂಮಿಯನ್ನು ‘ಶ್ರೀ ಕಾಶಿ ವಿಶ್ವನಾಥ ಧಾಮ ಕಾರಿಡಾರ್ (ಹೆದ್ದಾರಿ)’ ನಿರ್ಮಾಣಕ್ಕಾಗಿ ನೀಡಲಾಗುವುದು. ಸದ್ಯ ಈ ಭೂಮಿಯ ಮೇಲೆ ಜಿಲ್ಲಾಡಳಿತದ ‘ನಿಯಂತ್ರಣ ಕಕ್ಷೆ’ಯು ಕಾರ್ಯನಿರತವಾಗಿದೆ.

ಶ್ರೀ ಕಾಶಿ ವಿಶ್ವನಾಥ ದೇವಾಲಯದ ಪರಿಸರದಲ್ಲಿರುವ ಈ ಭೂಮಿಯಿಂದ ದೇವಸ್ಥಾನ ಹಾಗೂ ಪರಿಸರದ ವಿಸ್ತಾರಕ್ಕಾಗಿ ಅಡಚಣೆ ಆಗುತ್ತಿತ್ತು. ಈ ಬಗ್ಗೆ ಶ್ರೀ ಕಾಶಿ ವಿಶ್ವನಾಥ ದೇವಾಲಯದ ಆಡಳಿತ ಹಾಗೂ ಜ್ಞಾನವಾಪಿ ಮಸೀದಿ ಪಕ್ಷ ಇವುಗಳ ಮಧ್ಯೆ ಹಲವಾರು ಬಾರಿ ಚರ್ಚೆ ಆಗಿತ್ತು. ಇತ್ತೀಚೆಗೆ ನಡೆದ ಚರ್ಚೆಯಲ್ಲಿ ಪರಸ್ಪರರಲ್ಲಿ ಭೂಮಿ ಹಂಚಿಕೆಗೆ ಒಮ್ಮತ ಆಯಿತು. ಅದಕ್ಕನುಸಾರ ಪರಸ್ಪರರಲ್ಲಿ ಭೂಮಿಯ ಹಸ್ತಾಂತರವಾಯಿತು.

ಸದ್ಯ ವಾರಣಾಸಿ ನ್ಯಾಯಾಲಯದಲ್ಲಿ ಶ್ರೀ ಕಾಶಿ ವಿಶ್ವನಾಥ ದೇವಾಲಯದ ವತಿಯಿಂದ ‘ಸ್ವಯಂಭೂ ಭಗವಾನ್ ವಿಶ್ವೇಶ್ವರ ಮಹಾದೇವ’ನ ಹೆಸರಿನಲ್ಲಿ ಹಿಂದೂ ಪಕ್ಷವು ಹಾಗೂ ಜ್ಞಾನವಾಪಿ ಮಸೀದಿಯ ವತಿಯಿಂದ ‘ಅಂಜುಮಾನ ಇಂತೆಜಾಮಿಯಾ ಕಮಿಟಿ’ ಹಾಗೂ ‘ಸುನ್ನಿ ಸೆಂಟ್ರಲ್ ವಕ್ಫ ಬೋರ್ಡ್’ ಈ ಪಕ್ಷವು ಮೊಕದ್ದಮೆ ಹೋರಾಡುತ್ತಿವೆ.