ಪ್ರಯಾಗರಾಜ (ಉತ್ತರಪ್ರದೇಶ) – ಮಹಾಕುಂಭಮೇಳದಲ್ಲಿ ರಕ್ತಪಾತ ನಡೆಸುವ ಬೆದರಿಕೆ ನೀಡಿದ ಪ್ರಕರಣದಲ್ಲಿ ಪ್ರಯಾಗರಾಜ ಪೊಲೀಸರು ಬಿಹಾರ ರಾಜ್ಯದಲ್ಲಿನ ಪೂರ್ಣಿಯ ಇಲ್ಲಿಯ ಶಾಹಿದಗಂಜ ಇಲ್ಲಿಂದ ೧೧ ನೇ ತರಗತಿಯ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಅವನು ತನ್ನ ನಾಸರ ಪಠಾಣ ಎಂಬ ಸ್ನೇಹಿತನನ್ನು ವಂಚಿಸುವುದಕ್ಕಾಗಿ ಅವನ ಹೆಸರಿನ ನಕಲಿ ಇನ್ಸ್ಟಾಗ್ರಾಮ್ ಖಾತೆ ತಯಾರಿಸಿ ಈ ಬೆದರಿಕೆ ನೀಡಿರುವುದು ಎಂದೂ ಪೊಲೀಸ ವಿಚಾರಣೆಯಲ್ಲಿ ತಿಳಿದು ಬಂದಿದೆ. ಆರೋಪಿಯನ್ನು ಪ್ರಯಾಗರಾಜಗೆ ಕರೆತಂದು ಅವನ ವಿಸ್ತೃತ ವಿಚಾರಣೆ ನಡೆಸಲಾಗುವುದು, ಎಂದು ಪೊಲೀಸ ಅಧಿಕಾರಿ ರಾಜೇಶ ಕುಮಾರ ದ್ವಿವೇದಿ ಇವರು ಮಾಹಿತಿ ನೀಡಿದರು.