ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಲ್ಲಿ ಬರುವ ಧಾರ್ಮಿಕ ಸ್ಥಳಗಳ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಕೇರಳ ಉಚ್ಚ ನ್ಯಾಯಾಲಯ !

ದೇವರು ನಮ್ಮನ್ನು ಕ್ಷಮಿಸುವನು ! – ಕೇರಳ ಉಚ್ಚ ನ್ಯಾಯಾಲಯ

ಕೇರಳ ಉಚ್ಚ ನ್ಯಾಯಾಲಯ

ತಿರುವನಂತಪುರಮ್(ಕೇರಳ) – ಕೇರಳದ ಕೊಲ್ಲಮ್ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ೬೬ ರ ಅಗಲೀಕರಣದ ಕೆಲಸ ನಡೆಯುತ್ತಿರುವಾಗ ನಡುವೆ ಬರುತ್ತಿರುವ ಧಾರ್ಮಿಕ ಸ್ಥಳಗಳನ್ನು ರಕ್ಷಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಉಚ್ಚನ್ಯಾಯಾಲಯವು ತಿರಸ್ಕರಿಸಿದೆ. ‘ಒಂದುವೇಳೆ ಕೆಲಸದ ನಡುವೆ ಧಾರ್ಮಿಕ ಸ್ಥಳಗಳು ಬರುತ್ತಿದ್ದರೆ, ದೇವರು ನಮ್ಮನ್ನು ಕ್ಷಮಿಸುವನು’, ಎಂದು ಈ ಸಮಯದಲ್ಲಿ ನ್ಯಾಯಾಲಯವು ತಿಳಿಸಿದೆ. ಈ ಅರ್ಜಿಯ ಮೂಲಕ ಈ ಹೆದ್ದಾರಿಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಾಗ ಹಗರಣಗಳಾಗುವ, ಅದೇರೀತಿ ರಾಜ್ಯ ಸರಕಾರವು ನಾವು ನೀಡಿದ ಆದೇಶದ ಪಾಲನೆ ಮಾಡುತ್ತಿಲ್ಲ, ಎಂದು ಹೇಳುತ್ತಾ ಈ ಕೆಲಸದಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡುವಂತೆ ಅರ್ಜಿದಾರರು ಕೋರಿದ್ದರು. ಈ ಹೆದ್ದಾರಿಯ ಅಗಲೀಕರಣದಲ್ಲಿ ೨ ದೇವಸ್ಥಾನಗಳು ಮತ್ತು ೧ ಸಾರ್ವಜನಿಕ ಹಾಗೂ ೧ ಖಾಸಗಿ ಮಸೀದಿ ಬರುತ್ತದೆ.

ಕೇರಳ ಸರಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಣವು ಮಾತ್ರ ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಹೇಳಿದೆ. ಹೆದ್ದಾರಿಯ ಅಗಲೀಕರಣ ಮಾಡುತ್ತಿರುವಾಗ ಪಕ್ಕದ ಧಾರ್ಮಿಕ ಸ್ಥಳಗಳನ್ನು ಕಾಪಾಡಲು ನಿಯಮಗಳ ಆಧಾರದಲ್ಲಿ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಪ್ರಾಧಿಕರಣವು ತಿಳಿಸಿದೆ.

ಸರ್ವಶಕ್ತಿವಂತನಾದ ಭಗವಂತನು ಎಲ್ಲಾಕಡೆ ಇದ್ದಾನೆ !

ಉಚ್ಚ ನ್ಯಾಯಾಲಯವು, ಸರ್ವಶಕ್ತಿವಂತನಾದ ಭಗವಂತನು ಎಲ್ಲಾಕಡೆ ಇದ್ದಾನೆ. ಆತ ಪೃಥ್ವಿಯ ಮೇಲೆ, ಆಕಾಶದಲ್ಲಿ, ಕಂಬಗಳಲ್ಲಿ ಹಾಗೂ ಯುದ್ಧದ ರಣಭೂಮಿಯಲ್ಲಿ ಹೀಗೆ ಎಲ್ಲಾಕಡೆಗಳಲ್ಲಿ ಇದ್ದಾರೆ. ಆತ ದಯೆಯ ಒಂದು ರೂಪವಾಗಿದೆ ಹಾಗೂ ಪ್ರಕಾಶದ ಸ್ವರೂಪದಲ್ಲಿ ಎಲ್ಲರ ಹೃದಯದಲ್ಲಿ ವಾಸಿಸುತ್ತಾನೆ. ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಗಾಗಿ ಧಾರ್ಮಿಕ ಸ್ಥಳಗಳ ಮೇಲೆ ಪರಿಣಾಮ ಆಗುತ್ತಿದ್ದರೆ, ದೇವರು ನಮ್ಮನ್ನು ಕ್ಷಮಿಸುವನು. ಪರಮೇಶ್ವರ ಅರ್ಜಿದಾರ, ಅಧಿಕಾರಿ ಹಾಗೂ ನಿರ್ಧಾರ ತೆಗೆದುಕೊಳ್ಳುವವರನ್ನು ರಕ್ಷಣೆ ಮಾಡುವನು, ದೇವರು ನಮ್ಮೊಂದಿಗೆ ಇದ್ದಾನೆ ಎಂದು ಹೇಳಿದೆ.