ಕೇರಳದಲ್ಲಿ ಮುಸಲ್ಮಾನ ಹಾಗೂ ಕ್ರೈಸ್ತರಿಗೆ ನೀಡಿದ ಅಲ್ಪಸಂಖ್ಯಾತ ಸ್ಥಾನದ ಬಗ್ಗೆ ಮರುಪರಿಶೀಲಿಸಬೇಕು ! – ಕೇರಳ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ಇಂತಹ ಅರ್ಜಿಯನ್ನು ಏಕೆ ಸಲ್ಲಿಸಬೇಕಾಗುತ್ತದೆ, ಸರಕಾರವು ಸ್ವತಃ ಅದನ್ನು ಏಕೆ ಮಾಡುವುದಿಲ್ಲ ?

ಕೊಚ್ಚಿ(ಕೇರಳ) – ಕೇರಳದಲ್ಲಿ ಮುಸಲ್ಮಾನ ಮತ್ತು ಕ್ರೈಸ್ತರಿಗೆ ನೀಡಲಾಗಿರುವ ‘ಅಲ್ಪಸಂಖ್ಯಾತ’ ಸ್ಥಾನಮಾನದ ಬಗ್ಗೆ ಮರುಪರಿಶೀಲಿಸುವಂತೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ಆದೇಶ ನೀಡಬೇಕು, ಎಂದು ಅರ್ಜಿಯೊಂದನ್ನು ಕೇರಳ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ. ‘ಸಿಟಿಜನ ಅಸೋಸಿಯೇಶನ್ ಫಾರ್ ಡೆಮಾಕ್ರಸಿ, ಇಕ್ವಾಲಿಟಿ, ಟ್ರಕ್ವಿಲಿಟಿ ಅಂಡ್ ಸೆಕುಲರಿಜಮ್(ಕಾಡೆಟ್ಸ್)’ ಈ ಸಂಘಟನೆಯು ಈ ಅರ್ಜಿಯನ್ನು ಸಲ್ಲಿಸಿದೆ.

ಈ ಸಂಘಟನೆಯ ಹೇಳಿಕೆಗನುಸಾರ, ಕೇರಳದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ವ್ಯಾಪಕವಾಗಿ ಮುಸಲ್ಮಾನ ಹಾಗೂ ಕ್ರೈಸ್ತರು ಬಹಳ ಪ್ರಗತಿಯನ್ನು ಸಾಧಿಸಿದ್ದಾರೆ. ಆದ್ದರಿಂದ ಅವರ ಅಲ್ಪಸಂಖ್ಯಾತ ಸ್ಥಾನಮಾನದ ಬಗ್ಗೆ ಮರುಪರಿಶೀಲನೆ ಮಾಡುವುದು ಅಗತ್ಯವಿದೆ. ಅವರಿಗೆ ಯಾವುದೇ ರೀತಿಯ ವಿಶೇಷ ಸೌಲಭ್ಯ ನೀಡಬಾರದು. ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ರಾಜ್ಯದ ಈ ಎರಡೂ ಧರ್ಮದ ನಾಗರಿಕರ ಪ್ರಗತಿಯ ಮೌಲ್ಯಮಾಪನವನ್ನು ನೀಡುವಂತೆ ಆದೇಶ ನೀಡಬೇಕು ಎಂದು ಹೇಳಿದೆ.