ಬಾಂಗ್ಲಾದೇಶದ ಸರಕಾರದಿಂದ ಭಾರತದಲ್ಲಿ ತರಬೇತಿಗೆ ಹೋಗುತ್ತಿದ್ದ 50 ನ್ಯಾಯಾಧೀಶರ ಪ್ರಯಾಣ ರದ್ದು !

ಸಾಂದರ್ಭಿಕ ಚಿತ್ರ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮಧ್ಯಂತರ ಸರಕಾರವು ಭಾರತದಲ್ಲಿ ತರಬೇತಿಗಾಗಿ ಹೋಗುವ 50 ನ್ಯಾಯಾಧೀಶರ ಪ್ರವಾಸವನ್ನು ರದ್ದುಗೊಳಿಸಿದೆ. ಬಾಂಗ್ಲಾದೇಶದ ಸುಪ್ರೀಂ ಕೋರ್ಟ್‌ನ ಆದೇಶದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಎಲ್ಲಾ ನ್ಯಾಯಾಧೀಶರು ಫೆಬ್ರವರಿ 10 ರಿಂದ ಭಾರತಕ್ಕೆ ತರಬೇತಿಗಾಗಿ ಹೋಗುವವರಿದ್ದರು.

ಸರಕಾರದ ಪರವಾಗಿ ‘ಬಾಂಗ್ಲಾದೇಶ ಸಂವಾದ್ ಸಂಸ್ಥೆ’ಯು ಒಮದು ಪ್ರಕಟಣೆ ಹೊರಡಿಸಿ, ಮಧ್ಯಪ್ರದೇಶದ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಮತ್ತು ರಾಜ್ಯ ನ್ಯಾಯಾಂಗ ಅಕಾಡೆಮಿಯಿಂದ ಕೆಳ ನ್ಯಾಯಾಲಯದ 50 ನ್ಯಾಯಾಧೀಶರು ಒಂದು ದಿನದ ತರಬೇತಿಗಾಗಿ ಭಾಗವಹಿಸಲಿದ್ದರು. ತರಬೇತಿ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಭಾರತ ಸರಕಾರವೇ ವಹಿಸಿಕೊಳ್ಳಲಿತ್ತು. (ಬಾಂಗ್ಲಾದೇಶದ ನ್ಯಾಯಾಧೀಶರಿಗೆ ತರಬೇತಿ ನೀಡುವದಾಗಿದ್ದರೆ, ಅವರ ವೆಚ್ಚವನ್ನು ಭಾರತ ಸರಕಾರವು ಏಕೆ ಪಾವತಿಸುತ್ತದೆ ? – ಸಂಪಾದಕ) ಈ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಯಾದ ತರಬೇತಿ ನ್ಯಾಯಾಧೀಶರಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಅಥವಾ ಅವರ ಸಮಾನ ನ್ಯಾಯಾಂಗ ಅಧಿಕಾರಿಗಳು, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಸಹಾಯಕ ಜಿಲ್ಲಾ ನ್ಯಾಯಾಧೀಶರು, ಹಿರಿಯ ಸಹಾಯಕ ನ್ಯಾಯಾಧೀಶರು ಮತ್ತು ಸಹಾಯಕ ನ್ಯಾಯಾಧೀಶರ ಸಮಾವೇಶ ಇತ್ತು.

ಸಂಪಾದಕೀಯ ನಿಲುವು

ಬಾಂಗ್ಲಾದೇಶ ಭಾರತಕ್ಕೆ ಸಂಬಂಧಿಸಿದಂತೆ ಪ್ರತಿದಿನ ವಿಭಿನ್ನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಅಲ್ಲಿ ಹಿಂದೂಗಳ ಮೇಲಿನ ದಾಳಿಗಳು ನಡೆಯುತ್ತಲೇ ಇವೆ. ಹೀಗಿರುವಾಗ ಭಾರತದ ತೋರುತ್ತಿರುವ ನಿಷ್ಕ್ರಿಯತೆ ಆಘಾತಕಾರಿಯಾಗಿದೆ !