ದಾನ ಭಾರತೀಯ ಸಂಸ್ಕೃತಿಯ ಅಭಿವ್ಯಕ್ತಿ ! – ಸ್ವಾಮಿ ಅವಧೇಶಾನಂದ ಗಿರಿ

ಮಹಾಕುಂಭಕ್ಷೇತ್ರದಲ್ಲಿ ‘ನೇತ್ರ ಕುಂಭ’ ಉದ್ಘಾಟನೆ

ಮಾರ್ಗದರ್ಶನ ಮಾಡುತ್ತಿರುವಾಗ ಆಚಾರ್ಯ ಮಹಾಮಂಡಳೇಶ್ವರ ಸ್ವಾಮಿ ಅವಧೇಶಾನಂದ ಗಿರಿ

ಪ್ರಯಾಗರಾಜ್, ಜನವರಿ 5 (ಸುದ್ದಿ) – ಪರಮಾರ್ಥ ಸನಾತನ ಸಂಸ್ಕೃತಿಯ ಸಾರವಾಗಿದ್ದರೆ ದಾನವು ಭಾರತೀಯ ಸಂಸ್ಕೃತಿಯ ಅಭಿವ್ಯಕ್ತಿಯಾಗಿದೆ, ಎಂದು ಜುನಾ ಅಖಾಡಾದ ಆಚಾರ್ಯ ಮಹಾಮಂಡಳೇಶ್ವರ ಸ್ವಾಮಿ ಅವಧೇಶಾನಂದ ಗಿರಿ ಇಲ್ಲಿ ಪ್ರತಿಪಾದಿಸಿದರು. ಮಹಾಕುಂಭ ಮೇಳದ ನಿಮಿತ್ತ ಸೆಕ್ಟರ್ 6ರಲ್ಲಿ ಆಯೋಜಿಸಿದ್ದ ‘ನೇತ್ರ ಕುಂಭ’ ಅಂದರೆ ನೇತ್ರ ಚಿಕಿತ್ಸಾ ಉಪಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಡಾ. ಕೃಷ್ಣ ಗೋಪಾಲ್, ಇಸ್ಕಾನ್ ಅಧ್ಯಕ್ಷ ಸ್ವಾಮಿ ಗೌರಾಂಗ್ ದಾಸ್ ಪ್ರಭು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಸ್ವಾಮಿ ಅವಧೇಶಾನಂದ ಗಿರಿ ಅವರು ಮಾತು ಮುಂದುವರೆಸಿ, “ಕಣ್ಣುಗಳು ಮಾನವ ದೇಹದ ಅತ್ಯಂತ ಸೂಕ್ಷ್ಮ ಅಂಗವಾಗಿದೆ. ಇದರಿಂದಾಗಿ ನಾವು ಈ ಜಗತ್ತನ್ನು ನೋಡಬಹುದು. ಈ ಉಪಕ್ರಮ ‘ನೇತ್ರ ಕುಂಭ’ದ ಮೂಲಕ ಲಕ್ಷಾಂತರ ಜನರ ಬದುಕು ಹಸನಾಗಲಿದೆ. ಅವರು ಕಾಮನಬಿಲ್ಲು ವಿಶ್ವವನ್ನು ನೋಡಬಹುದು.” ಎಂದು ಹೇಳಿದರು.

ಇಂತಹ ಉಪಕ್ರಮವನ್ನು ಆಯೋಜಿಸುವುದು ಸೇವೆಯ ಉತ್ತಮ ಉದಾಹರಣೆ ! – ಸ್ವಾಮಿ ಗೌರಾಂಗ ದಾಸ್ ಪ್ರಭು

ಸ್ವಾಮಿ ಗೌರಾಂಗ ದಾಸ್ ಪ್ರಭು ಇವರು ಮಾತನಾಡಿ, “ನಾವು ವಿವಿಧ ಇಂದ್ರಿಯಗಳ ಮೂಲಕ ವಿಭಿನ್ನ ವಸ್ತುಗಳನ್ನು ಗುರುತಿಸಬಹುದು. ಇಂದ್ರಿಯಗಳು ನಿರಂತರವಾಗಿ ವಿವಿಧ ವಸ್ತುಗಳನ್ನು ಹುಡುಕುತ್ತಿರುತ್ತವೆ. ಕಣ್ಣುಗಳಿಲ್ಲದಿದ್ದರೆ, ಮನುಷ್ಯನು ಪ್ರಕಾಶಮಾನ ಜಗತ್ತನ್ನು ನೋಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಉಪಕ್ರಮವನ್ನು ಆಯೋಜಿಸುವುದು ಸೇವಾ ಮನೋಭಾವಕ್ಕೆ ಉತ್ತಮ ಉದಾಹರಣೆಯಾಗಿದೆ.’ ಎಂದು ಹೇಳಿದರು.

ದೃಷ್ಟಿ ವಿಕಲಚೇತನರ ಬಾಳಿನಲ್ಲಿ ಬೆಳಕು ಮೂಡಲಿದೆ ! – ಡಾ. ಕೃಷ್ಣ ಗೋಪಾಲ

ಡಾ. ಕೃಷ್ಣ ಗೋಪಾಲ ಮಾತನಾಡಿ, ನೇತ್ರ ಕುಂಭದ ಮೂಲಕ ಸಮಾಜಕ್ಕೆ ಇನ್ನು ಮುಂದೆ ಯಾರಿಗೂ ದೃಷ್ಟಿದೋಷ ಆಗಬಾರದು ಎಂಬ ಉತ್ತಮ ಸಂದೇಶ ರವಾನೆಯಾಗುತ್ತದೆ. ಅಂತಹ ವ್ಯಕ್ತಿಗಳ ಜೀವನದಲ್ಲಿ ಬೆಳಕು ಬರಬಹುದು.

ಈ ಸಂದರ್ಭದಲ್ಲಿ ‘ಶ್ರೀ ರಣಛೊಡದಾಸ್ ಬಾಪೂಜಿ ಟ್ರಸ್ಟ್’ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ. ಪ್ರವೀಣ್ ಬಸಾನಿ ಹಾಗೂ ‘ಸಕ್ಷಮ’ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಗೋವಿಂದ ರಾಜ್ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಆಯೋಜಾನ ಸಮಿತಿಯ ಪ್ರಧಾನ ವ್ಯವಸ್ಥಾಪಕ ಸತ್ಯ ವಿಜಯ ಸಿಂಗ್, ಪ್ರಧಾನ ಕಾರ್ಯದರ್ಶಿ ಸರ್ವಜ್ಞ ರಾಮ ಮಿಶ್ರಾ, ಪ್ರಸಾರಮಾಧ್ಯಮ ಸಂಯೋಜಕ ಡಾ. ಕೃತಿಕಾ ಅಗರ್ವಾಲ್, ಡಾ. ಕಮಲಾಕರ ಸಿಂಗ್, ಸತ್ಪಾಲ್ ಗುಲಾಟಿ, ಸತ್ಯವೀರ್ ಸಿಂಗ್ ಮೊದಲಾದವರು ಅತಿಥಿಗಳನ್ನು ಸ್ವಾಗತಿಸಿದರು. ಪ್ರಾಸ್ತಾವಿಕವನ್ನು ‘ಸಕ್ಷಮ್‌’ನ ರಾಷ್ಟ್ರೀಯ ಸಂಘಟಕ ಸಚಿವರಾದ ಚಂದ್ರಶೇಖರ ಮತ್ತು ಆಭಾರಮನ್ನಣೆಯನ್ನು ಕವೀಂದ್ರ ಪ್ರತಾಪ ಸಿಂಗ್ ಅವರು ನೀಡಿದರು.

5 ಲಕ್ಷಕ್ಕೂ ಹೆಚ್ಚು ಜನರ ನೇತ್ರ ತಪಾಸಣೆ !

‘ನೇತ್ರ ಕುಂಭ’ದಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿಗೆ ನೇತ್ರ ತಪಾಸಣೆ ನಡೆಸಿ, 3 ಲಕ್ಷಕ್ಕೂ ಹೆಚ್ಚು ಕನ್ನಡಕ ವಿತರಿಸಲಾಗುವುದು. ಇದರೊಂದಿಗೆ ಭಕ್ತಾದಿಗಳಿಗೆ ಉಚಿತ ಔಷಧೋಪಚಾರ, ಶಸ್ತ್ರ ಚಿಕಿತ್ಸೆ ಸೌಲಭ್ಯವನ್ನೂ ಒದಗಿಸಲಾಗುವುದು.