ದೇಶದಲ್ಲೇ ಮೊದಲ ಘಟನೆ!
* ಅನೇಕ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನರಾಗಿದ್ದ ಮಹಿಳೆಯರು ಅಪರಾಧದಲ್ಲೂ ಪುರುಷರಿಗಿಂತ ಹಿಂದೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! * ಚುನಾವಣೆಯಲ್ಲಿ ಗೆದ್ದು ಬರಬೇಕಾದರೆ ಮತದಾರರಿಗೆ ಹಣ ನೀಡಬೇಕಾಗುತ್ತದೆ, ಅಂದರೆ ತಮ್ಮ ಅಸಮರ್ಥತೆಯನ್ನು ಅಂಗೀಕರಿಸುವುದಾಗಿದೆ ! ಇಂತಹ ಭ್ರಷ್ಟ ಅಭ್ಯರ್ಥಿಗಳು ಆಯ್ಕೆಯಾದ ನಂತರ ಭ್ರಷ್ಟಾಚಾರ ಹೆಚ್ಚಾಗದೇ ಇದ್ದರೆ ಆಶ್ಚರ್ಯವೆನ್ನಬಹುದು ! * ಎಲ್ಲಿ ಎಲ್ಲಾ ರೀತಿಯಲ್ಲೂ ಆದರ್ಶ ರಾಜ್ಯ ವ್ಯವಸ್ಥೆಯನ್ನು ನೀಡುವ ಭಗವಾನ ಶ್ರೀರಾಮ, ಮತ್ತು ಸ್ವತಃ ಭ್ರಷ್ಟಾಚಾರ ಮಾಡುವ ಮತ್ತು ಹಾಗೆ ಮಾಡಲು ಜನರಿಗೂ ಕಲಿಸುವ ಇತ್ತೀಚಿನ ಸಮಾಜದ್ರೋಹಿ ಜನಪ್ರತಿನಿಧಿಗಳು ! * ಭಾರತದಲ್ಲಿನ ನಡೆಯುವ ಚುನಾವಣೆಗಳು ಅಂದರೆ ಗೂಂಡಾ ಮತ್ತು ಭ್ರಷ್ಟ ರಾಜಕಾರಣಿಗಳು ದುರಾಸೆಯ ಮತದಾರರಿಗೆ ಹಣವನ್ನು ನೀಡುವ ಮೂಲಕ ಅಥವಾ ಕಡಿಮೆ ಬೆಲೆಗೆ ಆಹಾರಧಾನ್ಯವನ್ನು ನೀಡುವ ಆಮಿಷವನ್ನು ತೋರಿಸುವುದರ ಮೂಲಕ ಅವರ ಮತ ಹಾಗೂ ಸ್ವಾಭಿಮಾನವನ್ನು ಖರೀದಿಸುವುದೇ ಆಗಿದೆ ! ಈ ಚಿತ್ರಣ ಜನರಿಗೆ ನಾಚಿಕೆಯ ವಿಷಯವಾಗಿದೆ ! ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು! |
ಭಾಗ್ಯನಗರ : ೨೦೧೯ ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಹಣ ಹಂಚಿದ ಪ್ರಕರಣದಲ್ಲಿ, ತೆಲಂಗಾಣದ ಮಹಬೂಬಾಬಾದ್‍ನ ವಿದ್ಯಮಾನ ಸಂಸದೆ ಮತ್ತು ರಾಜ್ಯದ ಆಡಳಿತಾರೂಢ ತೆಲಂಗಾಣಾ ರಾಷ್ಟ್ರೀಯ ಸಮಿತಿಯ ಮುಖಂಡೆ ಮಾಲೋತ ಕವಿತಾರಿಗೆ ನಾಮಪಲ್ಲಿಯ ವಿಶೇಷ ಸೆಷನ್ಸ್ ನ್ಯಾಯಾಲಯವು ೧೦ ಸಾವಿರ ರೂಪಾಯಿ ದಂಡ ಹಾಗೂ ೬ ತಿಂಗಳ ಸೆರೆಮನೆವಾಸ ಶಿಕ್ಷೆಯನ್ನು ವಿಧಿಸಿದೆ. ವಿಶೇಷ ಸೆಷನ್ಸ್ ನ್ಯಾಯಾಲಯದ ಈ ತೀರ್ಪಿಗೆ ಮಲೊತ ಕವಿತಾ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು, ಎಂದು ಹೇಳಲಾಗುತ್ತಿದೆ. ಓರ್ವ ವಿದ್ಯಮಾನ ಮಹಿಳಾ ಸಂಸದೆಗೆ, ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹ ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಹೇಳಿದ್ದಾರೆ.
TRS MP Kavitha Maloth convicted of bribing voters during 2019 Lok Sabha elections https://t.co/cCgujYDY9m
— Republic (@republic) July 25, 2021
ಒಂದು ಮತಕ್ಕೆ ೫೦೦ ರೂಪಾಯಿ ನೀಡಲಾಗುತ್ತಿತ್ತು !
೨೦೧೯ ರಲ್ಲಿ ಹಣ ವಿತರಿಸುವಾಗ ಮಾಲೊತ ಕವಿತಾ ಅವರ ಸಹೋದ್ಯೋಗಿ ಶೌಕತ್ ಅಲಿಯನ್ನು ರೆಡ್ ಹ್ಯಾಂಡ್ ಆಗಿ ಕಂದಾಯ ಇಲಾಖೆ ಅಧಿಕಾರಿಗಳು ಹಿಡಿದಿದ್ದರು. ಶೌಕತ್ ಅಲಿ ಬರ್ಗಮಪಹಾಡ ಪ್ರದೇಶದ ಮತದಾರರಿಗೆ ಪ್ರತಿ ಮತಕ್ಕೆ ೫೦೦ ರೂಪಾಯಿ ಹಂಚುತ್ತಿದ್ದರು. ಇದರ ನಂತರ ಪೊಲೀಸರು ಶೌಕತ್ ಅಲಿ ಮತ್ತು ಮಾಲೊತ ಕವಿತಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ವಿಚಾರಣೆಯ ವೇಳೆ, ಶೌಕತ್ ಅಲಿ ಆರೋಪಗಳನ್ನು ಒಪ್ಪಿಕೊಂಡು ಕವಿತಾ ಅವರ ಹೇಳಿಕೆಯ ಮೇರೆಗೆ ಹಣವನ್ನು ವಿತರಿಸಲಾಗಿದೆ ಎಂದು ಹೇಳಿದ್ದಾನೆ.