ಜ್ಯೋತಿರ್ಮಠದ ವತಿಯಿಂದ ಮಹಾಕುಂಭಮೇಳದಲ್ಲಿ ‘ಗೋಮಾತಾ ಸಂರಕ್ಷಣ ಮಹಾಯಾಗ’ ದ ಆಯೋಜನೆ !

ಪ್ರಯಾಗರಾಜ ಕುಂಭ ಮೇಳ 2025

ಪ್ರಯಾಗರಾಜ, ಜನವರಿ೬(ವಾರ್ತೆ.) – ಹಿಮಾಲಯದಲ್ಲಿನ ಬದ್ರಿಕಾಶ್ರಮ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರ ವತಿಯಿಂದ ಮಹಾಕುಂಭಮೇಳದಲ್ಲಿ ‘ಗೋಮಾತಾ ಸಂರಕ್ಷಣ ಮಹಾಯಾಗ’ದ ಆಯೋಜನೆ ಮಾಡಲಾಗಿದೆ. ಜನವರಿ ೧೫ ರಿಂದ ಫೆಬ್ರುವರಿ ೧೪ ವರೆಗೆ ಈ ಮಹಾಯಾಗ ನಡೆಯಲಿದೆ. ಈ ಮಹಾಯಾಗದಲ್ಲಿ ೩೨೪ ಯಜ್ಞ ಕುಂಡಗಳು ಸಿದ್ಧಗೊಂಡಿವೆ. ಮಹಾಯಾಗಕ್ಕಾಗಿ ದೇಶಾದ್ಯಂತದಿಂದ ೨ ಸಾವಿರದ ೧೦೦ ಬ್ರಹ್ಮಣರು ಬರುವರು.

‘ಗೋಮಾತಾ ಸಂರಕ್ಷಣಾ ಮಹಾಯಾಗ’ಕ್ಕೆ ಕಟ್ಟಿರುವ ಯಾಗಶಾಲೆ

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಾಗ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಇವರ ಶಿಷ್ಯ ಮುಕುಂದಾನಂದ ಬ್ರಹ್ಮಚಾರಿ ಇವರು, ‘ಸನಾತನ ಪ್ರಭಾತ’ ದ ಮುಖ್ಯ ಪತ್ರಕರ್ತರ ಪ್ರೀತಮ ನಾಚಣಕರ ಇವರನ್ನು ಭೇಟಿ ಮಾಡಿದರು.

ಆ ಸಮಯದಲ್ಲಿ ಅವರು,

೧. ಸರಕಾರವು ಮೊದಲು ಗೋಮಾತೆಗೆ ಗೌರವ ನೀಡುವುದಕ್ಕಾಗಿ ಪ್ರಯತ್ನ ಮಾಡಬೇಕು. ಅದಕ್ಕಾಗಿ ಮೊದಲು ಗೋಹತ್ಯೆ ನಿಲ್ಲುವುದು ಆವಶ್ಯಕವಾಗಿದೆ.

೨. ಗೋಮಾತೆಯ ಸಂರಕ್ಷಣೆ ಆಗಬೇಕು ಅದಕ್ಕಾಗಿ ‘ಗೋಮಾತಾ ಸಂರಕ್ಷಣ ಮಹಾಯಾಗ’ದ ಆಯೋಜನೆ ಮಾಡಲಾಗಿದೆ. ಈ ಯಾಗದ ಮೂಲಕ ದೇವತೆಗಳಿಗೆ ಆಹುತಿ ನೀಡಲಾಗುವುದು. ಇದರಿಂದ ಗೋ ಸಂರಕ್ಷಣೆಗಾಗಿ ದೇವತೆಗಳ ಆಶೀರ್ವಾದ ಪ್ರಾಪ್ತವಾಗುವುದು.

ಯಜ್ಞಕ್ಕಾಗಿ ಕಟ್ಟಿರುವ ಯಜ್ಞ ಕುಂಡಗಳು

೩. ಪ್ರಸ್ತುತ ಹೈಬ್ರಿಡ್ ಗೋವುಗಳು ಬೆಳೆಸಲಾಗುತ್ತಿದೆ. ಇದು ಅಶಾಸ್ತ್ರಿಯವಾಗಿದೆ. ತಥಾಕಥಿತ ದುಗ್ದ ಕ್ರಾಂತಿಯ ಸಮಯದಲ್ಲಿ ಹೈಬ್ರಿಡ್ ಗೋವುಗಳನ್ನು ಬೆಳೆಸಲಾಯಿತು. ಇದರಿಂದ ಹಾಲು ಉತ್ಪನ್ನ ಹೆಚ್ಚಾಯಿತು; ಆದರೆ ಆ ಹಾಲು ವಿಷಕ್ಕೆ ಸಮಾನವಾಗಿದೆ. ಯಾವ ರೀತಿ ಪೇನ್ ಕಿಲ್ಲರ್ ಮಾತ್ರೆಯಿಂದ ತಾತ್ಕಾಲಿಕ ವೇದನೆಗಳು ಕಡಿಮೆ ಆಗುತ್ತದೆ; ಆದರೆ ದೇಹದ ಮೇಲೆ ಅದರ ದುಷ್ಪರಿಣಾಮವಾಗುತ್ತದೆ. ಅದರಂತೆಯೇ ಇದು ಆಗಿದೆ. ಜರ್ಸಿ ಅಂತಹ ಹೈಬ್ರಿಡ್ ಮೂಲದ ಹಾಲು ವಿಷಕ್ಕೆ ಸಮಾನವಾಗಿದೆ. ಇದರ ಕುರಿತು ಅನೇಕ ಶೋಧ ಪ್ರಬಂಧಗಳು ಇಂಟರ್ನೆಟ್ ನಲ್ಲಿ ಕೂಡ ನೋಡಬಹುದು.

೪. ಭಾರತೀಯ ಗೋವುಗಳು ಇದು ಎಲ್ಲ ರೀತಿಯಲ್ಲಿಯೂ ಲಾಭದಾಯಕವಾಗಿದೆ. ಪ್ರಾಚೀನ ಭಾರತದಲ್ಲಿ ಪ್ರತಿಯೊಬ್ಬ ಹಿಂದುವಿನ ಮನೆಯಲ್ಲಿ ಗೋಮಾತೆ ಇದ್ದಳು. ಹಿಂದೂಗಳು ಗೋಗ್ರಾಸ ನೀಡುತ್ತಿದ್ದರು. ಸ್ವತಃ ಪ್ರಭು ಶ್ರೀರಾಮ ಮತ್ತು ಶ್ರೀಕೃಷ್ಣ ಗೋದಾನ ಮಾಡಿದ್ದರು.

೫. ಗೋಮಾತೆ ಕೇವಲ ಹಾಲು ನೀಡುವುದು ಅಷ್ಟೇ ಅಲ್ಲದೆ, ನಮ್ಮನ್ನು ಎಲ್ಲಾರೀತಿಯಲ್ಲೂ ಪೋಷಿಸುತ್ತಾಳೆ. ಗೋವು ಸಂವರ್ಧನೆ ಆಗಬೇಕು ಮತ್ತು ಗೋಮಾತೆಗೆ ರಾಷ್ಟ್ರಮಾತಾ ಎಂದು ಸ್ಥಾನ ಪ್ರಾಪ್ತವಾಗಬೇಕು. ಅದಕ್ಕಾಗಿ ಬದ್ರಿಕಾಶ್ರಮದಿಂದ ಜಾಗೃತಿ ಮೂಡಿಸಲಾಗುತ್ತಿದೆ.

ಜಗದ್ಗುರು ಶಂಕರಾಚಾರ್ಯ ಸ್ವಾಮಿ ಅವಿಮುಕೇಶ್ವರನಂದಜಿ ಇವರು ಜನವರಿ ೯ ರಂದು ಕುಂಭ ಕ್ಷೇತ್ರಕ್ಕೆ ಆಗಮಿಸುವರು !

ಜಗದ್ಗುರು ಶಂಕರಾಚಾರ್ಯ ಸ್ವಾಮಿ ಅವಿಮುಕೇಶ್ವರನಂದಜಿ ಇವರು ಜನವರಿ ೯ ರಂದು ಕುಂಭ ಕ್ಷೇತ್ರಕ್ಕೆ ಪ್ರವೇಶ ಮಾಡುವರು. ಅವರು ಮಾಘ ಅಮಾವಾಸ್ಯೆಯವರೆಗೆ ಕುಂಭಮೇಳದಲ್ಲಿ ಸನಾತನ ಧರ್ಮಪ್ರಚಾರದ ಅಂತರ್ಗತ ಗೋ ಮಾತಾ ಸಂರಕ್ಷಣೆ ಹಾಗೂ ದೇವಸ್ಥಾನ ಸುರಕ್ಷತೆಯ ವಿಷಯದಲ್ಲಿ ಮಾರ್ಗದರ್ಶನ ಮಾಡುವರು. ಅದಕ್ಕಾಗಿ ಕುಂಭಮೇಳದಲ್ಲಿ ‘ಪರಮ ಧರ್ಮಸಂಸದ’ನ ಆಯೋಜನೆ ಮಾಡಲಾಗಿದೆ. ಈ ಧರ್ಮ ಸಂಸತ್ತಿನಲ್ಲಿ ಜಗತ್ತಿನಾದ್ಯಂತದಿಂದ ೧೦೦೮ ಗಣ್ಯರು ಉಪಸ್ಥಿತರಿರುವರು.