ಮಹಾಕುಂಭ ಮೇಳಕ್ಕೆ ನಾಗರಿಕರ ಭದ್ರತೆಗಾಗಿ 6​ಬಣ್ಣದ ಪಾಸ್ ವಿತರಣೆ !

ಮಹಾಕುಂಭ ಮೇಳ 2025

ಪ್ರಯಾಗರಾಜ್ – ನಾಗರಿಕರ ಭದ್ರತೆಗಾಗಿ 6 ಬಣ್ಣದ ಪಾಸ್‌ಗಳನ್ನು ವಿತರಿಸಲಾಗಿದೆ. ಇದರಲ್ಲಿ ಅತೀ ಮಹತ್ವದ ವ್ಯಕ್ತಿಗಳಿಗೆ ಬಿಳಿ ಬಣ್ಣದ ಪಾಸ್, ಅಖಾಡಗಳಿಗೆ ಕೇಸರಿ ಬಣ್ಣದ ಪಾಸ್, ಸಂಸ್ಥೆಗಳಿಗೆ ಹಳದಿ ಬಣ್ಣದ ಪಾಸ್, ಮಾಧ್ಯಮಗಳಿಗೆ ತಿಳಿ ನೀಲಿ ಬಣ್ಣದ ಪಾಸ್, ಪೊಲೀಸರಿಗೆ ನೀಲಿ ಬಣ್ಣದ ಪಾಸ್ ಮತ್ತು ತುರ್ತು ಸೇವೆಗಳಿಗೆ ಕೆಂಪು ಬಣ್ಣದ ಪಾಸ್ ನೀಡಲಾಗುವುದು. ಈ ಪಾಸ್ ಪ್ರಕ್ರಿಯೆಗೆ ಎಲ್ಲ ಇಲಾಖೆಗಳಲ್ಲಿ ಸ್ವತಂತ್ರ ಅಧಿಕಾರಿಯನ್ನು ನೇಮಿಸಲಾಗಿದೆ.

ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆ !

ಪಾಸ್ ಬೇಕಾದವರು ಅರ್ಜಿಯೊಂದಿಗೆ ತಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಫೊಟೊ, ವಾಹನ ನೋಂದಣಿ ಪ್ರಮಾಣಪತ್ರ ಮತ್ತು ಡ್ರೈವಿಂಗ್ ಲೈಸೆನ್ಸ್ಅನ್ನು ಸಲ್ಲಿಸಬೇಕು. ನಂತರ ತಾತ್ಕಾಲಿಕ ಮೇಳ ಕಚೇರಿಯಲ್ಲಿರುವ ಪೊಲೀಸ್ ಕೊಠಡಿಯಲ್ಲಿ ಪಾಸ್‌ಗಳನ್ನು ವಿತರಿಸಲಾಗುವುದು.