ಮುಫ್ತಿ ಶಹಾಬುದ್ದೀನ್ ರಾಜ್ವಿ ಬರೇಲ್ವಿ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ! – ಹಿಂದೂ ಜನಜಾಗೃತಿ ಸಮಿತಿಯ ಆಗ್ರಹ

ಮಹಾಕುಂಭದ ಜಾಗ ವಕ್ಫ್ ಬೋರ್ಡ್ ಗೆ ಸೇರಿದ್ದು, ಈ ದಾವೆ ಸನಾತನಿ ಹಿಂದೂಗಳ ಶ್ರದ್ಧೆಯ ಮೇಲೆ ಉದ್ದೇಶಪೂರ್ವಕ ದಾಳಿ ಮಾಡುವ ಪ್ರಯತ್ನ !

ಪ್ರಯಾಗರಾಜ್ – ಅರಬ್‌ನಲ್ಲಿ ‘ವಕ್ಫ್’ ಕಲ್ಪನೆ ಹುಟ್ಟದೇ ಇದ್ದಾಗ, ಲಕ್ಷಾಂತರ ವರ್ಷಗಳ ಹಿಂದೆ ಗಂಗಾ, ಯಮುನಾ ಮತ್ತು ಸರಸ್ವತಿಯ ಪವಿತ್ರ ತ್ರಿವೇಣಿ ಸಂಗಮದಲ್ಲಿ ಕುಂಭಮೇಳವನ್ನು ಆಯೋಜಿಸಲಾಗುತ್ತಿದೆ. ಕುಂಭವು ಗಂಗೆಯ ಕ್ಷೇತ್ರದಲ್ಲಿದೆ, ಗಂಗಾನದಿ ನೈಸರ್ಗಿಕ ಭೂಮಿ ಎಂದಾದರೆ ಅದು ವಕ್ಫ್ ಗೆ ಹೇಗೆ ಸೇರುತ್ತದೆ ? ಮುಫ್ತಿ ಶಹಾಬುದ್ದೀನ್ ರಾಜ್ವಿ ಬರೇಲ್ವಿ ಅವರು ಕುಂಭಮೇಳ ಸ್ಥಳದಲ್ಲಿರುವ 54 ಫಲವತ್ತೆಯ ಭೂಮಿಯಲ್ಲಿ ವಕ್ಫ್ ತನ್ನದೆಂದು ದಾವೆ ಮಾಡಿದೆ. ಇದು ಅತ್ಯಂತ ಖಂಡನೀಯವಾಗಿದೆ, ಹಿಂದೂ ಜನಜಾಗೃತಿ ಸಮಿತಿ ಇದನ್ನು ತೀವ್ರವಾಗಿ ವಿರೋಧಿಸುತ್ತದೆ. ಈ ದಾವೆ ನಿರಾಧಾರ ಮಾತ್ರವಲ್ಲ, ಕುಂಭಮೇಳದ ಪವಿತ್ರ ವಾತಾವರಣವನ್ನು ಹಾಳು ಮಾಡುವ ಮತ್ತು ಸನಾತನ ಧರ್ಮದ ಅನುಯಾಯಿಗಳ ಶ್ರದ್ಧೆಯ ಮೇಲೆ ದಾಳಿ ಮಾಡುವ ಉದ್ದೇಶಪೂರ್ವಕವಾದ ಪ್ರಯತ್ನವಾಗಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಈ ಸಮಯದಲ್ಲಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಮತ್ತು ಸಮಿತಿಯ ಕುಂಭ ಅಭಿಯಾನ ಸಮನ್ವಯಕರಾದ ಶ್ರೀ. ಆನಂದ ಜಾಖೋಟಿಯಾ ಉಪಸ್ಥಿತರಿದ್ದರು.

ಸದ್ಗುರು ಡಾ. ಪಿಂಗಳೆಯವರು ಮಾತು ಮುಮದುವರೆಸಿ, ನಾವು ರಾಜ್ಯ ಸರಕಾರಕ್ಕೆ, ಕುಂಭಮೇಳದ ಪವಿತ್ರ ವಾತಾವರಣವನ್ನು ಕಾಪಾಡಿಕೊಳ್ಳಲು ಮತ್ತು ಸನಾತನಿಗಳ ಶ್ರದ್ಧೆಗೆ ಧಕ್ಕೆ ತರುತ್ತಿರುವ ಮುಫ್ತಿ ಶಹಾಬುದ್ದೀನ್ ರಾಜ್ವಿ ಬರೇಲ್ವಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.

ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರು ಮಾತನಾಡಿ, ವಕ್ಫ್ ಸುಧಾರಣಾ ಕಾಯಿದೆಗಾಗಿ ಸ್ಥಾಪಿಸಲಾದ ಜಂಟಿ ಸಂಸದೀಯ ಸಮಿತಿಯ ಮುಂದೆ ಹಿಂದೂ ಪಕ್ಷದ ನಿಲುವನ್ನು ಪ್ರಸ್ತುತಪಡಿಸಿದ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರು, ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರ ಪ್ರಕಾರ ವಕ್ಫ್ ಭೂಮಿಯಲ್ಲಿ ಕುಂಭಮೇಳವನ್ನು ಆಯೋಜಿಸಲು ಅವಕಾಶ ನೀಡುವುದು ಮುಸ್ಲಿಂ ಸಮುದಾಯದ ಔದಾರ್ಯವಾಗಿದ್ದರೇ ಬಾಬರ್ ರಾಮಜನ್ಮಭೂಮಿಯನ್ನು ಅತಿಕ್ರಮಿಸಿದ ನಂತರ ಮುಸ್ಲಿಂ ಸಮುದಾಯದವರು ಇದೇ ಔದಾರ್ಯವನ್ನು ಏಕೆ ತೋರಿಸಲಿಲ್ಲ ? ಎಂದು ನಾವು ಅವರನ್ನು ಕೇಳಲು ಬಯಸುತ್ತೇವೆ.

ಇಂದಿಗೂ ಕಾಶಿ, ಮಥುರಾ, ಸಂಭಲ್ ಮುಂತಾದೆಡೆ 15000 ದೇವಾಲಯಗಳು ಇಸ್ಲಾಂ ಅತಿಕ್ರಮಣ ಮಾಡಿವೆ. ಈ ಔದಾರ್ಯವನ್ನು ಅವರ ಸಂದರ್ಭದಲ್ಲಿ ಏಕೆ ತೋರಿಸಲಿಲ್ಲ? ಕುಂಭ ಕ್ಷೇತ್ರವನ್ನು ವಕ್ಫ್ ಭೂಮಿ ಎಂದು ಪರಿಗಣಿಸುವವರಿಗೆ ಕುಂಭ ಪ್ರದೇಶಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ. ಎಂದು ಹೇಳಿದರು.