ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!

ಮುಂಬಯಿನಲ್ಲಿ ಬಾಂಗ್ಲಾದೇಶಿ ವಲಸಿಗರ ಸಂಖ್ಯೆ ಎಷ್ಟಿರಬಹುದೆಂಬುದು ಇದರಿಂದ ತಿಳಿಯುತ್ತದೆ. ದೇಶದ ಆರ್ಥಿಕ ರಾಜಧಾನಿಯಲ್ಲಿ ಕಳೆದ ೪ ದಶಕಗಳಲ್ಲಿ ಇಂತಹ ಅಡ್ಡೆಗಳು ನಿರ್ಮಾಣವಾಗಿರುವುದು ಸರಕಾರಗಳ ಘೋರ ವೈಫಲ್ಯವಾಗಿದೆ!

ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!

‘ಪಿಒಪಿ’ಯಿಂದ ಮಾಲಿನ್ಯವಾಗದಿದ್ದರೆ, ಅದರ ವಿಲೇವಾರಿಗಾಗಿ ಇಷ್ಟೊಂದು ಹರಸಾಹಸ ಯಾಕೆ? ಮತ್ತು ಕೃತಕ ಹೊಂಡಗಳ ಯೋಜನೆಯಾದರೂ ಯಾತಕ್ಕಾಗಿ? ಮಾಲಿನ್ಯವೇ ಆಗದಿದ್ದರೆ, ನೈಸರ್ಗಿಕ ಜಲಮೂಲಗಳಲ್ಲೇ ಶ್ರೀಗಣೇಶ ಮೂರ್ತಿಗಳನ್ನು ವಿಸರ್ಜಿಸಲು ತೊಂದರೆ ಏನಿದೆ? – ಸಂಪಾದಕರು

‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)

ಜನತೆಯ ಆರೋಗ್ಯದ ವಿಚಾರ ಮಾಡದೆ ಕೇವಲ ಆದಾಯಕ್ಕಾಗಿ ಇಂತಹ ಬೇಡಿಕೆ ಇಡುವುದು ಸರಿಯಲ್ಲ ! ಇಂತಹ ಬೇಡಿಕೆಗಳು ಎಂದರೆ ‘ರೋಗಕ್ಕಿಂತ ಉಪಚಾರವೇ ಭಯಂಕರ’ ಎನ್ನುವಂತಹದ್ದಾಗಿದೆ. ಇದರಿಂದ ವ್ಯಸನಾಧೀನತೆ ಹೆಚ್ಚಾಗಿ ನಾಗರಿಕರ ಆರೋಗ್ಯ ಹಾಳಾದರೆ ಅದಕ್ಕೆ ಯಾರು ಹೊಣೆಗಾರರು ? ಈ ವಿಚಾರವನ್ನು ನಾಯಕರು ಏಕೆ ಮಾಡುತ್ತಿಲ್ಲ ?

ಮನೆಗೆ ವಿದ್ಯುತ್ ಬರಲಿಲ್ಲವೆಂದು ಇಡೀ ಪ್ರದೇಶದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ನ್ಯಾಯಾಧೀಶರು : Judge Cut Off Electricity

ಎರಡನೇ ಬಾರಿಗೆ ವಿದ್ಯುತ್ ಕೈಕೊಟ್ಟಿದ್ದರಿಂದ ಜನರ ಗುಂಪು ಪವರ್ ಹೌಸ್ ಗೆ ತಲುಪಿ ಪ್ರತಿಭಟನೆ ಆರಂಭಿಸಿತು. ಜನಸಂದಣಿಯನ್ನು ಕಂಡು ನ್ಯಾಯಾಧೀಶರು ಅಲ್ಲಿಂದ ಹೊರಟುಹೋದರು. ನಗರದ ವಿದ್ಯುತ್ ಕಡಿತಗೊಳಿಸಿದ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು ಎಂದು ಜನರು ಒತ್ತಾಯಿಸಿದರು.

ಛತ್ರಪತಿಯವರ ಮಂದಿರಕ್ಕೆ ನೀಡುವ ನಿಧಿ ಔರಂಗಜೇಬನ ಗೋರಿಗೆ ನೀಡುವ ನಿಧಿಗಿಂತಲೂ ಕಡಿಮೆ!

ಹಿಂದವೀ ಸ್ವರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಸಿಂಧುದುರ್ಗ ಕೋಟೆಯಲ್ಲಿರುವ ‘ಶ್ರೀ ಶಿವರಾಜೇಶ್ವರ ಮಂದಿರ’ಕ್ಕೆ ಬರೋಬ್ಬರಿ ೫೫ ವರ್ಷಗಳ ನಂತರ ಸರಕಾರವು ವಾರ್ಷಿಕ ನಿಧಿಯನ್ನು ೩ ಸಾವಿರ ರೂಪಾಯಿಗಳಿಂದ ೧ ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದೆ.

ಮುಂಬಯಿ: 33 ವರ್ಷಗಳಿಂದ ಕಾನೂನುಬಾಹಿರವಾಗಿದ್ದ ಸರಕಾರಿ ಭೂಮಿ; ಸದ್ಯ ‘ಚರ್ಚ್ ಆಫ್ ಸೇಂಟ್ ಆಂಡ್ರ್ಯೂ ಆಂಡ್ ಸೇಂಟ್ ಕೊಲಂಬಾ’ ಸಂಸ್ಥೆಯ ವಶದಲ್ಲಿ!

ಈ ಸಮಸ್ಯೆಯು ಕೇವಲ ಒಂದು ಚರ್ಚ್‌ ಗೆ ಮಾತ್ರ ಸೀಮಿತವಾಗಿರದೆ, ಮಹಾರಾಷ್ಟ್ರದ ಅನೇಕ ನಗರಗಳಲ್ಲಿ ಗುತ್ತಿಗೆ ಅವಧಿ ಮುಗಿದಿದ್ದರೂ ಸರಕಾರಿ ಭೂಮಿಗಳ ದುರ್ಬಳಕೆ ಮುಂದುವರೆದಿದೆ. ಲೆಕ್ಕಪರಿಶೋಧಕರು (ಆಡಿಟರ್ಸ್) ಕಂದಾಯದಲ್ಲಿನ ಭಾರಿ ನಷ್ಟದ ಕುರಿತು ಪದೇ-ಪದೇ ನೋಂದಾಯಿಸಿದ್ದಾರೆ.

ಕೇರಳ: ಕಾಂಗ್ರೆಸ್ ಮುಖ್ಯಮಂತ್ರಿಯ ಆಯ್ಕೆ ಇನ್ನು ಅಂತಿಮವಾಗಿಲ್ಲ !

ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ಅಧಿಕಾರ ಸಿಕ್ಕಿದ್ದರೂ ಕೂಡ, ಇದುವರೆಗೆ ಯಾರನ್ನೂ ಮುಖ್ಯಮಂತ್ರಿಯೆಂದು ಘೋಷಿಸಿಲ್ಲ. ಯಾವ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಬಗ್ಗೆ ಕಾಂಗ್ರೆಸ್ ಪಕ್ಷ ಇನ್ನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಮಹಾರಾಷ್ಟ್ರದ ಪುಣ್ಯಕ್ಷೇತ್ರಗಳ ನದಿಗಳು ಮಾಲಿನ್ಯದ ಸುಳಿಯಲ್ಲಿ !

೨೦೨೫ರ ಅಂಕಿಅಂಶಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ಸುಮಾರು ೯೦ ಕೋಟಿ ಲೀಟರ್ ಕೊಳಚೆ ನೀರು ಉತ್ಪತ್ತಿಯಾಗುತ್ತದೆ. ಇದರಲ್ಲಿ ಶೇ. ೫೦ ಕ್ಕಿಂತ ಹೆಚ್ಚು ನೀರನ್ನು ಸಂಸ್ಕರಿಸದೆ ನೇರವಾಗಿ ನದಿಗೆ ಬಿಡಲಾಗುತ್ತದೆ.

ಪರಿಶೀಲನೆ ನಡೆಸದೆ ತಿರುಪತಿ ಮಂದಿರ ಪ್ರಸಾದದ ಲಡ್ಡುಗಾಗಿ 70 ಲಕ್ಷ ಕಿಲೋ ತುಪ್ಪದ ಬಳಕೆ!

ಈ ಪ್ರಕರಣದಲ್ಲಿ ದೊಡ್ಡ ಮಟ್ಟದ ಆಡಳಿತಾತ್ಮಕ ಲೋಪಗಳು, ಪ್ರಕ್ರಿಯೆಗಳ ಉಲ್ಲಂಘನೆ ಮತ್ತು ಶಾಮೀಲಾಗಿರುವ ಬಗ್ಗೆ ಸಮಿತಿ ಆರೋಪ ಮಾಡಿದೆ. ಈ ಕಾರಣಗಳಿಂದಲೇ ಕಲಬೆರಕೆ ತುಪ್ಪದ ಪೂರೈಕೆ ಸಾಧ್ಯವಾಯಿತು ಎಂದು ಸಮಿತಿ ಹೇಳಿದೆ.

ಮಹಾರಾಷ್ಟ್ರ : ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೇ. ೨೫% ರಷ್ಟು ಸೀಟು ಮೀಸಲು; ಅನುದಾನ ನೀಡಲು ಸರಕಾರದ ನಿರಾಸಕ್ತಿ !

ಶಿಕ್ಷಣ ಹಕ್ಕು (ರೈಟ್ ಟು ಎಜುಕೇಶನ್) ಕಾಯಿದೆಯಡಿ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಗಳಲ್ಲಿ ಶೇ. ೨೫% ರಷ್ಟು ಸೀಟುಗಳನ್ನು ಆರ್ಥಿಕವಾಗಿ ಹಿಂದುಳಿದ ಅಥವಾ ವಂಚಿತ ವರ್ಗದ ವಿದ್ಯಾರ್ಥಿಗಳಿಗಾಗಿ ಮೀಸಲಿಡುವುದು ಕಡ್ಡಾಯವಾಗಿದೆ.