ಗೋವಿನ ಬಗ್ಗೆ ಖೇದಕರ ಹೇಳಿಕೆ ನೀಡಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಸಂಸದ ಅಖಿಲೇಶ ಯಾದವ
ಕನ್ನೌಜ (ಉತ್ತರಪ್ರದೇಶ) – ನಾವು ಕನ್ನೌಜದಲ್ಲಿ ಬಾಂಧವ್ಯದ ಪರಿಮಳ ಪಸರಿಸುತ್ತೇವೆ. ಇನ್ನೊಂದೆಡೆ ಭಾಜಪ ದ್ವೇಷದ ದುರ್ವಾಸನೆ ಪಸರಿಸುತ್ತಿದ್ದಾರೆ. ಭಾಜಪದವರಿಗೆ ದುರ್ವಾಸನೆ ಹಿಡಿಸುತ್ತದೆ, ಆದ್ದರಿಂದ ಅವರು ಗೋಶಾಲೆಗಳನ್ನು ಕಟ್ಟುತ್ತಾರೆ. ನಮಗೆ ಪರಿಮಳ ಬಹಳ ಇಷ್ಟ ಆಗುತ್ತದೆ ಎಂದು ನಾವು ‘ಪರ್ಫ್ಯೂಮ್ ಪಾರ್ಕ್’ (ಅತ್ತರ ಸಂಗ್ರಹಾಲಯ) ನಿರ್ಮಾಣ ಮಾಡಿದೆವು. ನಾನು ಕನ್ನೌಜದ ಜನರಿಗೆ ಭಾಜಪದವರು ಪಸರಿಸಿರುವ ಈ ದುರ್ವಾಸನೆಯನ್ನು ದೂರಗೊಳಿಸಲು ಕರೆ ನಿಡುತ್ತೇನೆ. ಕೆಲವು ಪ್ರಮಾಣದಲ್ಲಿ ಈ ದುರ್ವಾಸನೆ ಮೊದಲೇ ನಾಶವಾಗಿದೆ; ಆದರೆ ಮುಂಬರುವ ಚುನಾವಣೆಯಲ್ಲಿ ಅದನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು ಕಾರಣ ಕನ್ನೌಜ ದ ನಿಂತಿರುವ ಅಭಿವೃದ್ಧಿ ಕಾರ್ಯಗಳು ಮುಂದೆ ಸಾಗುವುದು, ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಸಂಸದ ಅಖಿಲೇಶ ಯಾದವ್ ಇವರು ಹೇಳಿಕೆ ನೀಡಿದರು.
ಭಾಜಪದ ಸಂಸದ ಸಂಬಿತ ಪಾತ್ರ ಇವರು ಅಖಿಲೇಶ ಯಾದವ್ ಇವರನ್ನು ಟೀಕೆಸಿದ್ದಾರೆ. ಭಾರತದಲ್ಲಿ ವಾಸಿಸುವವರಿಗೆ ಗೋವಿನ ದುರ್ವಾಸನೆ ಬರುತ್ತಿದ್ದರೆ, ಅಂಥವರು ಎಲ್ಲಿ ಸನಾತನದ ಅವಮಾನ ಮಾಡಬಹುದು ಅಲ್ಲಿ ತಮ್ಮ ನೆಲೆವನ್ನು ಹುಡುಕಲಿ ಎಂದು ಹೇಳಿದರು. ಈ ಎಲ್ಲಾ ಪಕ್ಷಗಳು ಸನಾತನದ ವಿರುದ್ಧ ಮಾತನಾಡುತ್ತಾರೆ ಮತ್ತು ಸನಾತನದ ವಿರುದ್ಧ ಕೆಲಸ ಕೂಡ ಮಾಡುತ್ತಾರೆ. ಮಧ್ಯಪ್ರದೇಶದಲ್ಲಿನ ಕಾಂಗ್ರೆಸ್ ಶಾಸಕ ರಾಜೇಂದ್ರ ಕುಮಾರ್ ಸಿಂಹ ಇವರು, ಬೇರೆ ಧರ್ಮದ ಹೊಲದಲ್ಲಿ ಪ್ರವೇಶಿಸಿ ಮೇಯಲು ಭಾಜಪ ಸಾಧು, ಸಂತರು, ಮತ್ತು ಮಂಡಲೇಶ್ವರ ಇವರ ರೂಪದಲ್ಲಿ ಘುಳಿಯನ್ನು ಬಿಟ್ಟಿದ್ದಾರೆ’ ಎಂದು ಹೇಳಿದರು. ಒಂದೆಡೆ ಅಖಿಲೇಶ ಯಾದವ್ ಇವರಿಗೆ ಗೋವಿನಲ್ಲಿ ದುರ್ವಾಸನೆ ಕಾಣುತ್ತದೆ, ಇನ್ನೊಂದೆಡೆಗೆ ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿ ಇವರ ಪಕ್ಷದ ನಾಯಕ ಸಂತ ಮತ್ತು ಋಷಿಗಳಲ್ಲಿ ಘುಳಿ ನೋಡುತ್ತಾರೆ, ಎಂದು ಹೇಳಿದರು.
🚨 Akhilesh Yadav’s SHOCKING Statement on Cows!
"BJP people like bad odour, that’s why they build cow shelters!" – SP Chief & MP Akhilesh Yadav’s outrageous remark!
⚖️ Will the govt show the courage to take legal action & jail him?
🔴 Like father, like son! Mulayam Singh… pic.twitter.com/At4YHckYjG
— Sanatan Prabhat (@SanatanPrabhat) March 27, 2025
ಸಂಪಾದಕೀಯ ನಿಲುವು
|