ಪೂಜ್ಯ ಸಂತ ಶ್ರೀ ಅಸಾರಾಂಜೀ ಬಾಪು ಅವರ ಸಂಪ್ರದಾಯ ಇನ್ನೂ ಕೊನೆಗೊಂಡಿಲ್ಲ! – ಚಂದ್ರಕಾಂತ್ ಖೈರೆ, ಮಾಜಿ ಸಂಸದ

ಅಸಾರಾಂಜಿ ಬಾಪು ಇನ್ನೂ ತಪ್ಪಿತಸ್ಥರೆಂದು ಸಾಬೀತಾಗಿಲ್ಲ: ಖೈರೆ ಅವರ ವಾದ!

ಪುಣೆ – ಪೂಜ್ಯರಾದ ಸಂತಶ್ರೀ ಅಸಾರಾಂಜೀ ಬಾಪು ವಿರುದ್ಧ ಅತ್ಯಾಚಾರ ಆರೋಪದ ಪ್ರಕರಣ ದಾಖಲಾಗಿ ಮುಂದೆ ವಿಚಾರಣೆ ಆರಂಭವಾಯಿತು. ಅದಾದ ನಂತರ, ಅವರ ಸಂಪ್ರದಾಯವು ಕ್ಷೀಣಿಸಲಾರಂಭಿಸಿತು. ಆದರೂ ಸಹ ಅವರ ಅನೇಕ ಭಕ್ತರು ‘ಅಖಿಲ ಭಾರತೀಯ ಶ್ರೀ ಯೋಗ ವೇದಾಂತ ಸೇವಾ ಸಮಿತಿ’ ಮತ್ತು ಇತರ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸಂಪ್ರದಾಯವು ಇನ್ನೂ ಕೊನೆಗೊಂಡಿಲ್ಲ, ದೇಶಾದ್ಯಂತ ಅವರ ಅನುಯಾಯಿಗಳಿದ್ದಾರೆ. ಅವರೆಲ್ಲರೂ ತಮ್ಮ ಪೂಜಾ- ಅರ್ಚನೆ, ಹಬ್ಬಗಳನ್ನು ತುಂಬಾ ಹುರುಪಿನಿಂದ ಆಚರಿಸುತ್ತಾರೆ, ಎಂದು ಉದ್ಧವ್ ಠಾಕ್ರೆ ರಾಜಕೀಯ ಗುಂಪಿನ ಮಾಜಿ ಸಂಸದ ಮತ್ತು ನಾಯಕ ಚಂದ್ರಕಾಂತ್ ಖೈರೆ ಹೇಳಿದ್ದಾರೆ. ಸಂತಶ್ರೀ ಅಸಾರಾಂಜೀ ಬಾಪು ಇನ್ನೂ ತಪ್ಪಿತಸ್ಥರೆಂದು ಸಾಬೀತಾಗಿಲ್ಲ ಎಂದು ಖೈರೆ ನುಡಿದರು.

ಸಂತಶ್ರೀ ಅಸಾರಾಂಜೀ ಬಾಪು ಬಂಧನವಾದ ಸಮಯದಲ್ಲಿ ನಾನು ದೆಹಲಿಯಲ್ಲಿದ್ದೆ. ಅವರ ಬಂಧನವನ್ನು ವಿರೋಧಿಸಿ ಭಕ್ತರು ಜಂತರ್ ಮಂತರ್ ಮೈದಾನದಲ್ಲಿ ದೊಡ್ಡ ಪ್ರತಿಭಟನೆ ನಡೆಸಿದ್ದರು. “ಆ ಸಮಯದಲ್ಲಿ ನಾನು ಅವರನ್ನು ಬೆಂಬಲಿಸಲು ಹೋಗಿದ್ದೆ” ಎಂದು ಖೈರೆ ಹೇಳಿದರು.