ಭಾರತದ ಜೊತೆಗೆ ಚೀನಾದ ಹೆಸರೂ ಉಲ್ಲೇಖ
ನವದೆಹಲಿ – ಅಮೇರಿಕಾ ಸರಕಾರ ಇತ್ತೀಚೆಗೆ 2025 ರ ವಾರ್ಷಿಕ ಅಪಾಯದ ಮೌಲ್ಯಮಾಪನದ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಜಾಗತಿಕ ಮಟ್ಟದಲ್ಲಿ ವಿವಿಧ ಅಂಶಗಳಿಂದ ಅಮೇರಿಕಕ್ಕೆ ಇರುವ ಬೆದರಿಕೆಗಳನ್ನು ಪರಿಶೀಲಿಸಲಾಗುತ್ತದೆ. ಈ ವರದಿಯು ಅಮೇರಿಕದಲ್ಲಿ ಉದ್ಭವಿಸಿರುವ ‘ಫೆಂಟಾನಾಯಿಲ್’ ಈ ಮಾದಕ ವಸ್ತು ಸವಾಲಿಗೆ ಭಾರತ ಮತ್ತು ಚೀನಾ ಕಾರಣ ಎಂದು ಆರೋಪಿಸಿದೆ.
1. ಈ ವರದಿಯ ಪ್ರಕಾರ, ಅಮೇರಿಕದಲ್ಲಿ ಫೆಂಟನಾಯಿಲಗಾಗಿ ಬೇಕಾದ ಪದಾರ್ಥಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ, ಅದರಲ್ಲಿ ಮುಖ್ಯವಾಗಿ ಭಾರತ ಮತ್ತು ಚೀನಾ ಸೇರಿದೆ. ಪರಿಣಾಮವಾಗಿ, ಅಮೇರಿಕದಲ್ಲಿ ಫೆಂಟನಾಯಿಲನ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ಪ್ರಾರಂಭವಾಗಿದೆ.
2. ಕಳೆದ ವರ್ಷದಲ್ಲಿ, ಅಮೇರಿಕದಲ್ಲಿ 52 ಸಾವಿರ ಅಮೇರಿಕನ್ನರು ಮಾದಕವಸ್ತುಗಳ ಸೇವನೆಯಿಂದ ಸಾವನ್ನಪ್ಪಿದ್ದಾರೆ.
3. ಇತ್ತೀಚೆಗೆ ವಾಷಿಂಗ್ಟನ್‌ನಲ್ಲಿ ನಡೆದ ಮಾದಕವಸ್ತು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭಾರತೀಯ ಸಂಸ್ಥೆ ಮತ್ತು ಅದರ ಮೂವರು ಅಧಿಕಾರಿಗಳ ಮೇಲೆ ಅಮೇರಿಕದಲ್ಲಿ ಫೆಂಟಾನಿಯಲ ಘಟಕಗಳನ್ನು ಅಕ್ರಮವಾಗಿ ಆಮದು ಮಾಡಿರುವ ಆರೋಪ ಹೊರಿಸಲಾಯಿತು.
4. ಕಳೆದ ವಾರ, ಇದೇ ಪ್ರಕರಣದಲ್ಲಿ ನ್ಯೂಯಾರ್ಕ್‌ನಿಂದ ಭಾಗ್ಯನಗರದ ಒಂದು ಸಂಸ್ಥೆಯ ಇಬ್ಬರು ಉನ್ನತ ಅಧಿಕಾರಿಗಳನ್ನು ಬಂಧಿಸಲಾಯಿತು. ಇದರ ಆಧಾರದ ಮೇಲೆ, ಈ ವರದಿಯಲ್ಲಿ ಭಾರತದ ಹೆಸರನ್ನು ಸೇರಿಸಲಾಗಿದೆ.