Delhi HC Refuses Permission: ಕಲುಷಿತಗೊಂಡಿರುವ ಯಮುನಾ ನದಿಯ ದಡದಲ್ಲಿ ಛಟ ಪೂಜೆ ಮಾಡಲು ಅನುಮತಿ ನೀಡಲಾಗುವುದಿಲ್ಲ! – ದೆಹಲಿ ಉಚ್ಚನ್ಯಾಯಾಲಯ

ದೆಹಲಿಯ ಆಪ್ ಸರಕಾರ, ಮಾಲಿನ್ಯದಿಂದಗಿ ಪೂಜೆಗೆ ನಿಷೇಧ ಹೇರಿದೆ !

(ಉತ್ತರ ಭಾರತದಲ್ಲಿ, ಕಾರ್ತಿಕ ಮಾಸದ ಶುಕ್ಲ ಷಷ್ಠಿಯಿಂದ 4 ದಿನಗಳ ಕಾಲ ಸೂರ್ಯ ದೇವರ ಹೆಸರಿನಲ್ಲಿ ‘ಛಟ ಪೂಜೆ’ ಆಚರಿಸಲಾಗುತ್ತದೆ.)

ನವ ದೆಹಲಿ – ಯಮುನಾ ನದಿಯ ದಡದಲ್ಲಿ ಛಟ ಪೂಜೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ದೆಹಲಿ ಉಚ್ಚನ್ಯಾಯಾಲಯವು ನಿರಾಕರಿಸಿದೆ. ದೆಹಲಿಯ ಆಮ್ ಆದ್ಮಿ ಪಕ್ಷ ಸರಕಾರವು ಯಮುನಾ ನದಿ ಕಲುಷಿತಗೊಂಡಿರುವುದರಿಂದ ದಡದಲ್ಲಿ ಛಟ ಪೂಜೆಯನ್ನು ನಿರ್ಬಂಧಿಸಿದೆ. ಇದರ ವಿರುದ್ಧ ಪೂರ್ವಾಂಚಲ ನವನಿರ್ಮಾಣ ಸಂಸ್ಥೆಯು ಉಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.

ದೆಹಲಿ ಉಚ್ಚ ನ್ಯಾಯಾಲಯವು, ಛಟ ಪೂಜೆ ಪ್ರಾರಂಭವಾಗುತ್ತಿರುವುದರಿಂದ ನಾವು ಕೊನೆಯ ಕ್ಷಣದಲ್ಲಿ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ. ಯಮುನಾ ನದಿಯನ್ನು ಒಂದು ರಾತ್ರಿಯಲ್ಲಿ ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಯಮುನೆಯ ನೀರು ಎಷ್ಟು ಹೊಲಸಾಗಿದೆಯೆಂದರೆ ಜನರು ಅದರಲ್ಲಿ ಪ್ರವೇಶಿಸಿ ಪೂಜೆ ಮಾಡಿದರೆ, ಅವರು ಸ್ವತಃ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಆದುದರಿಂದ ನಾವು ಪೂಜೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಸಂಪಾದಕೀಯ ನಿಲುವು

ದೇಶದ ಬಹುತೇಕ ನದಿಗಳು ಕಲುಷಿತಗೊಂಡಿವೆ, ಇದು ಇಲ್ಲಿಯವರೆಗಿನ ಎಲ್ಲಾ ಪಕ್ಷಗಳ ಸರಕಾರಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಹಿಂದೂ ಧರ್ಮದಲ್ಲಿ ನದಿಗಳಿಗೆ ಆಧ್ಯಾತ್ಮಿಕ ಮಹತ್ವವಿರುವುದರಿಂದ, ಈಗ ಈ ನದಿಗಳ ಶುದ್ಧತೆಯೊಂದಿಗೆ ಪಾವಿತ್ರ್ಯವೂ ನಾಶವಾಗಿದೆ. ಇದು ಹಿಂದೂಗಳಿಗೂ ಅಷ್ಟೇ ನಾಚಿಕೆಗೇಡಿನ ವಿಷಯವಾಗಿದೆ !