|
ನವದೆಹಲಿ – ಬಂಗಾಳದ ಆಡಳಿತ ಪಕ್ಷದ ಗೂಂಡಾಗಳು ಬಾಂಗ್ಲಾದೇಶದ ಗಡಿಯನ್ನು ಮುಚ್ಚುವಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆ. ಗಡಿಯಲ್ಲಿ ತಂತಿ ಬೇಲಿ ಹಾಕಲು ಹೋದ ಭದ್ರತಾ ಪಡೆಗಳೊಂದಿಗೆ ಅವರು ದುರ್ವರ್ತನೆ ಮಾಡುತ್ತಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರವೂ ಈ ಗೂಂಡಾಗಳ ಪರವಾಗಿದೆ. ಬಾಂಗ್ಲಾದೇಶದ ಗಡಿಯಲ್ಲಿ ಬೇಲಿ ಹಾಕಲು ಸರಕಾರ ಭೂಮಿ ನೀಡುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಾಹಿತಿ ನೀಡಿದರು. ಮಾರ್ಚ್ 27 ರಂದು ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ‘ವಲಸೆ’ ಮತ್ತು ವಲಸಿಗರ ಮಸೂದೆಯ ಬಗ್ಗೆ ಮಾತನಾಡುತಿದ್ದರು. ಈ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಈಗ ಅದನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗುವುದು. ಈ ಮಸೂದೆ ಅಂಗೀಕಾರವಾದ ನಂತರ ನುಸುಳುವಿಕೆಯನ್ನು ತಡೆಯಬಹುದು. (ಸ್ವಾತಂತ್ರ್ಯದ 78 ವರ್ಷಗಳಲ್ಲಿ ನುಸುಳುವಿಕೆಯನ್ನು ತಡೆಯಲು ಸಾಧ್ಯವಾಗದ ಕಾನೂನು ಇಲ್ಲದಿರುವುದು ಇಲ್ಲಿಯವರೆಗಿನ ಎಲ್ಲಾ ಸರಕಾರಗಳಿಗೆ ನಾಚಿಕೆಗೇಡಿನ ಸಂಗತಿ! – ಸಂಪಾದಕರು)
🚨 Mamata Govt Blocking Border Security?
Bengal govt refuses to provide land for fencing Bangladesh border!
📢 Union Home Minister Amit Shah reveals shocking details—many infiltrators already have Bengal’s Aadhaar & voter cards! 🗳️
With such a major national security threat,… pic.twitter.com/pMegyn6RVf
— Sanatan Prabhat (@SanatanPrabhat) March 28, 2025
ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದ ಅಂಶಗಳು
1. ಬಾಂಗ್ಲಾದೇಶದೊಂದಿಗಿನ ನಮ್ಮ ಗಡಿ 2 ಸಾವಿರದ 216 ಕಿ.ಮೀ ಇದೆ. ಇದರಲ್ಲಿ 1 ಸಾವಿರದ 653 ಕಿ.ಮೀ.ಗೆ ಬೇಲಿ ಹಾಕಲಾಗಿದೆ, ಅದರ ಬಳಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಬೇಲಿಯ ಬಳಿ ಚೆಕ್ ಪೋಸ್ಟ್ ಗಳನ್ನು ಸಹ ನಿರ್ಮಿಸಲಾಗಿದೆ. ಉಳಿದ 563 ಕಿ.ಮೀ.ಗಳಲ್ಲಿ 112 ಕಿ.ಮೀ.ಗಳಲ್ಲಿ ಭೌಗೋಳಿಕ ಪರಿಸ್ಥಿತಿಗಳಿಂದಾಗಿ ಬೇಲಿ ಹಾಕುವುದು ಪ್ರಾಯೋಗಿಕವಾಗಿಲ್ಲ. ಈ ಪ್ರದೇಶದಲ್ಲಿ ಕಾಲುವೆಗಳು ಮತ್ತು ನದಿಗಳು ಇರುವುದರಿಂದ ಬೇಲಿ ಹಾಕುವುದು ಸಾಧ್ಯವಿಲ್ಲ.
2. ಇನ್ನೂ 451 ಕಿ.ಮೀ.ಗೆ ಬೇಲಿ ಹಾಕುವುದು ಏಕೆ ಬಾಕಿ ಇದೆ? ನಾನು ಬಂಗಾಳ ಸರಕಾರಕ್ಕೆ 10 ಬಾರಿ ಪತ್ರ ಬರೆದಿದ್ದೇನೆ; ಆದರೆ ಸರಕಾರ ಬೇಲಿ ಹಾಕಲು ಭೂಮಿ ನೀಡುತ್ತಿಲ್ಲ. ಗೃಹ ಕಾರ್ಯದರ್ಶಿಗಳು ಬಂಗಾಳದ ಕಾರ್ಯದರ್ಶಿಗಳೊಂದಿಗೆ 451 ಕಿ.ಮೀ. ಬೇಲಿಗಾಗಿ 7 ಸಭೆಗಳನ್ನು ನಡೆಸಿದ್ದಾರೆ; ಆದರೆ ಅವರು ಭೂಮಿ ನೀಡುತ್ತಿಲ್ಲ. ನಾವು ಎಲ್ಲಿ ಬೇಲಿ ಹಾಕಲು ಹೋಗುತ್ತೇವೆಯೋ ಅಲ್ಲಿ ಆಡಳಿತ ಪಕ್ಷದ ಕಾರ್ಯಕರ್ತರು ಬಂದು ಗೊಂದಲ ಸೃಷ್ಟಿಸಿ ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾರೆ. ಬಂಗಾಳ ಸರಕಾರದ ಕಾರಣದಿಂದ 451 ಕಿ.ಮೀ.ಗೆ ಬೇಲಿ ಹಾಕಲಾಗುತ್ತಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೂಮಿ ನೀಡಿದರೆ ಈ ಗಡಿಯನ್ನು ಮುಚ್ಚಬಹುದು.
3. ಬಾಂಗ್ಲಾದೇಶಿ ಅಥವಾ ರೋಹಿಂಗ್ಯಾಗಳು ನುಸುಳಿದಾಗ ಅವರಿಗೆ ಆಧಾರ್ ಕಾರ್ಡ್ ನೀಡುವವರು ಯಾರು? ಬಂಧಿತರಾದ ಹೆಚ್ಚಿನ ಬಾಂಗ್ಲಾದೇಶಿಯವರ ಬಳಿ ಬಂಗಾಳದ 24 ಪರಗಣ ಜಿಲ್ಲೆಯ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಗಳಿವೆ.
4. ಬಂಗಾಳ ಸರಕಾರವು ಆಧಾರ್ ಕಾರ್ಡ್ ನೀಡದಿದ್ದರೆ ಯಾವುದೇ ನುಸುಳುವವರು ಭಾರತಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ.
ಸಂಪಾದಕೀಯ ನಿಲುವುದೇಶದ ಭದ್ರತೆಯ ದೃಷ್ಟಿಯಿಂದ ಇಷ್ಟು ದೊಡ್ಡ ವಿಷಯವಾಗಿರುವಾಗ, ಕೇಂದ್ರ ಸರಕಾರವು ಮಮತಾ ಬ್ಯಾನರ್ಜಿ ಅವರ ಸರಕಾರವನ್ನು ವಿಸರ್ಜಿಸಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಏಕೆ ಜಾರಿಗೊಳಿಸುತ್ತಿಲ್ಲ? |