ಕಠುವಾ (ಜಮ್ಮು-ಕಾಶ್ಮೀರ) – ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 5 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಹಾಗೂ 4 ಪೊಲೀಸರು ಹುತಾತ್ಮರಾಗಿದ್ದಾರೆ. ಕಾಡಿನಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಮಾಹಿತಿ ದೊರೆತ ನಂತರ ನಡೆದ ಕಾರ್ಯಾಚರಣೆಯ ವೇಳೆ ಗುಂಡಿನ ಚಕಮಕಿ ನಡೆದಿದೆ. ಒಟ್ಟು 10 ಭಯೋತ್ಪಾದಕರು ಕಾಡಿನಲ್ಲಿ ಅಡಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಕಾರ್ಯಾಚರಣೆ ಇನ್ನೂ ಮುಂದುವರಿದಿದೆಯೆಂದು ಹೇಳಲಾಗುತ್ತಿದೆ. ಹತ್ಯೆಗೀಡಾದ ಭಯೋತ್ಪಾದಕರು ಜೈಶ್-ಎ-ಮಹಮ್ಮದ್ ಭಯೋತ್ಪಾದಕ ಸಂಘಟನೆಯ ಸದಸ್ಯರಾಗಿದ್ದರು.
ಸಂಪಾದಕೀಯ ನಿಲುವುಕಾಶ್ಮೀರದಲ್ಲಿ ಎಷ್ಟು ಭಯೋತ್ಪಾದಕರನ್ನು ಕೊಂದರೂ ಸಹ ಭಯೋತ್ಪಾದಕರನ್ನು ತಯಾರಿಸುವ ಪಾಕಿಸ್ತಾನವನ್ನು ಭಾರತ ನಾಶಪಡಿಸುವವರೆಗೆ ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ಮೂಲನೆಯಾಗುವುದಿಲ್ಲ. ಭಾರತ ಈ ಸಮಸ್ಯೆಯನ್ನು ಬುಡ ಸಮೇತ ಕಿತ್ತೊಗೆಯುವುದು ಯಾವಾಗ ? |