ವಿಶ್ವ ಹಿಂದೂ ಪರಿಷತ್‌ನ ಮುಂಬಯಿನಗರ ವಿಭಾಗದ ಸಚಿವರ ಮೇಲೆ ಸಮೂಹದಿಂದ ಕಲ್ಲು ತೂರಾಟ !

  • ಗೋವು ಕಳ್ಳಸಾಗಣೆಗೆ ವಿರೋಧಿಸಿದ ಪ್ರಕರಣ

  • ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಮತಾಂಧರ ಬಂಧನ

  • 50 ರಿಂದ 60 ಜನರ ಸಮೂಹದಿಂದ ಕಲ್ಲು ತೂರಾಟ ಮತ್ತು ಘೋಷಣೆಗಳು

ಮುಂಬಯಿ – ಗೋಮಾಂಸ ತುಂಬಿದ ಟೆಂಪೋವೊಂದು ನಾಗಪಾಡಾದಲ್ಲಿ ಪತ್ತೆಯಾದ ಪ್ರಕರಣದಲ್ಲಿ ರಿಯಾಜ್ ಅಹ್ಮದ್, ಸಾಕೀರ್ ಅಹ್ಮದ್ ಖಾನ್ ಮತ್ತು ಪರ್ವೇಜ್ ಅಹ್ಮದ್ ಸಾಕೀರ್ ಅಹ್ಮದ್ ಖಾನ್ ಅವರನ್ನು ಬಂಧಿಸಲಾಗಿದೆ. ಟೆಂಪೋದ ಮಾಲೀಕ ಮತ್ತು ಚಾಲಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಗೋಮಾಂಸದ ತೂಕ ಸುಮಾರು 200 ಕೆ.ಜಿ. ಇತ್ತು. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ಬಗ್ಗೆ ದೂರು ದಾಖಲಿಸಲು ವಿಶ್ವ ಹಿಂದೂ ಪರಿಷತ್‌ನ ಮುಂಬಯಿ ನಗರ ವಿಭಾಗದ ಸಚಿವ ರಾಜೀವ್ ಚೌಬೆ ಅವರು ಪೊಲೀಸ್ ಠಾಣೆಗೆ ಹೋಗಿದ್ದರು. ಠಾಣಾಧಿಕಾರಿಯವರ ಕೊಠಡಿಯಲ್ಲಿ ಸಭೆ ನಡೆಯುತ್ತಿದ್ದ ಕಾರಣ ಚೌಬೆ ಅವರು ಠಾಣೆಯ ಹೊರಗೆ ಗೋವು ಕಳ್ಳಸಾಗಣೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಅದೇ ಸಮಯದಲ್ಲಿ, ಅಪರಿಚಿತ ವ್ಯಕ್ತಿಯೊಬ್ಬ 50 ರಿಂದ 60 ಜನರನ್ನು ಸೇರಿಸಿ ಗೋವು ಕಳ್ಳಸಾಗಣೆಯನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಾ ಕಲ್ಲು ತೂರಾಟ ನಡೆಸಿದನು. ಈ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. (ಕಲ್ಲು ತೂರಾಟ ನಡೆಸಿದವರನ್ನು ಜೈಲಿನಲ್ಲಿಯೇ ಇಡಬೇಕು! – ಸಂಪಾದಕರು)

ಸಂಪಾದಕೀಯ ನಿಲುವು

ಗೋಹತ್ಯಾ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಗೋವು ಕಳ್ಳಸಾಗಣೆಯನ್ನು ವಿರೋಧಿಸಿದವರ ಮೇಲೆ ಹಲ್ಲೆ ನಡೆಸುವುದು ಖೇದಕರ !