ಭಕ್ತರೇ ಬನ್ನಿ, ಸಂಘಟಿತ ಹೋರಾಟದಿಂದ ಹಿಂದೂ ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸೋಣ !

ಹಿಂದೂ ಜನಜಾಗೃತಿ ಸಮಿತಿಯು ಕಳೆದ ಅನೇಕ ವರ್ಷಗಳಿಂದ ದೇವಸ್ಥಾನಗಳ ಕ್ಷೇತ್ರದಲ್ಲಿ ಕಾರ್ಯವನ್ನು ಮಾಡುತ್ತಿದೆ. ದೇವಸ್ಥಾನ ಗಳ ಸರಕಾರೀಕರಣದ ವಿರುದ್ಧದ ಹೋರಾಟವಿರಲಿ ಅಥವಾ ಸರಕಾರೀಕರಣ ಆಗಿರುವ ದೇವಸ್ಥಾನಗಳಲ್ಲಿನ ಭ್ರಷ್ಟಾಚಾರದ ವಿರುದ್ಧದ ಹೋರಾಟವಿರಲಿ, ಸಮಿತಿ ಯಾವಾಗಲೂ ಮುಂಚೂಣಿ ಯಲ್ಲಿರುತ್ತದೆ. ಈ ಹೋರಾಟಕ್ಕೆ ವ್ಯಾಪಕ ಸ್ವರೂಪವನ್ನು ನೀಡಲು ನಾವು ಕಳೆದ ಅಧಿವೇಶನದಲ್ಲಿ ದೇವಸ್ಥಾನ ಸಂಘಟನೆಗಾಗಿ ‘ದೇವಸ್ಥಾನ ಮಹಾಸಂಘ’ವನ್ನು ಸ್ಥಾಪಿಸುವ ಸಂಕಲ್ಪ ಮಾಡಿದ್ದೆವು. ಅದೇ ರೀತಿ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಈ ಸಂಕಲ್ಪ ಈ ವರ್ಷವಿಡೀ ದೊಡ್ಡ ಪ್ರಮಾಣದಲ್ಲಿ ಫಲಕಾರಿಯಾಗುತ್ತಿರುವುದು ಕಾಣಿಸುತ್ತಿದೆ. ಅಷ್ಟು ಮಾತ್ರವಲ್ಲ, ಇಂದು ಈ ೩ ರಾಜ್ಯಗಳಲ್ಲಿನ ಸುಮಾರು ೧೪ ಸಾವಿರ ದೇವಸ್ಥಾನಗಳು ಈ ಮಹಾಸಂಘದೊಂದಿಗೆ ಜೋಡಿಸಲ್ಪಟ್ಟಿವೆ. ಕಳೆದ ವರ್ಷದ ಈ ಯಶಸ್ಸಿನ ವಿಚಾರ ಮಾಡಿದರೆ, ಅದರಿಂದ ದೇವಸ್ಥಾನ ಸಂಘಟನೆಯ ಅವಶ್ಯಕತೆ ಎಲ್ಲರಿಗೂ ಇದೆ ಎಂಬುದು ಗಮನಕ್ಕೆ ಬರುತ್ತದೆ.

ದೇವಸ್ಥಾನ ಸಂಘಟನೆಯ ದೃಷ್ಟಿಯಲ್ಲಿ ಜಳಗಾವ್‌ನಲ್ಲಿ ೫ ಫೆಬ್ರವರಿ ೨೦೨೩ ರಂದು ‘ಮಹಾರಾಷ್ಟ್ರ ದೇವಸ್ಥಾನ ಮಹಾಸಂಘ’ ದ ಸ್ಥಾಪನೆಯನ್ನು ಮಾಡಲಾಯಿತು ಅನಂತರ ಮಹಾಸಂಘದ ವತಿಯಿಂದ ೨ ಮತ್ತು ೩ ಡಿಸೆಂಬರ ೨೦೨೩ ರಂದು ಅಷ್ಟವಿನಾಯಕರ ಪೈಕಿ ಒಂದಾಗಿರುವ ಓಝರದಲ್ಲಿನ ವಿಘ್ನಹರ ದೇವಸ್ಥಾನದಲ್ಲಿ ಎರಡು ದಿನಗಳ ‘ಮಹಾರಾಷ್ಟ್ರ ದೇವಸ್ಥಾನ ನ್ಯಾಸ ಪರಿಷತ್ತು’ ಆಯೋಜಿಸಲಾಗಿತ್ತು. ಈ ಪರಿಷತ್ತಿನಲ್ಲಿ ಮಹಾರಾಷ್ಟ್ರದಲ್ಲಿನ ಸುಮಾರು ೬೦೦ ದೇವಸ್ಥಾನಗಳ ವಿಶ್ವಸ್ತರು ಹಾಗೂ ದೇವಸ್ಥಾನಗಳಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಯೋಧರು ಭಾಗವಹಿಸಿದ್ದರು. ಕರ್ನಾಟಕ ರಾಜ್ಯದಲ್ಲಿ ೨ ಮತ್ತು ೩ ಡಿಸೆಂಬರ ೨೦೨೩ ರಂದು ಆಯೋಜಿಸಿದ ದೇವಸ್ಥಾನ ಪರಿಷತ್ತಿನಲ್ಲಿ ೮೦೦ ಕ್ಕಿಂತಲೂ ಹೆಚ್ಚು ದೇವಸ್ಥಾನಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಅನಂತರ ೧೧ ಡಿಸೆಂಬರ ೨೦೨೩ ರಂದು ಗೋವಾ ರಾಜ್ಯದಲ್ಲಿಯೂ ಗೋಮಂತಕ ದೇವಸ್ಥಾನ ಮಹಾಸಂಘದ ವತಿಯಿಂದ ಆಯೋಜಿಸಿದ ದೇವಸ್ಥಾನ ಪರಷತ್ತಿನಲ್ಲಿ ೩೦೦ ಕ್ಕಿಂತಲೂ ಹೆಚ್ಚು ದೇವಸ್ಥಾನಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಮೂರೂ ಪರಿಷತ್ತುಗಳಲ್ಲಿ ದೇವಸ್ಥಾನಗಳಿಗೆ ಬರುವ ಸಮಸ್ಯೆಗಳು ಮತ್ತು ಅವುಗಳ ಉಪಾಯ ಹೀಗೆ ವಿವಿಧ ವಿಷಯಗಳ ಬಗ್ಗೆ ವಿಸ್ತಾರವಾಗಿ ಚರ್ಚೆ ಮಾಡಲಾಯಿತು. ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ದೇವಸ್ಥಾನ ಪರಿಷತ್ತಿನಲ್ಲಿ ಭಾಗವಹಿಸಿದ ದೇವಸ್ಥಾನಗಳ ವಿಶ್ವಸ್ತರ ಜಿಲ್ಲೆಗಳಿಗನುಸಾರ ಕೃತಿ ಸಮಿತಿ ತಯಾರಿಸಿ ಅವರು ತಮ್ಮ ತಮ್ಮ ಜಿಲ್ಲೆಗಳಲ್ಲಿನ ದೇವಸ್ಥಾನಗಳ ಸಂಘಟನೆ ಮಾಡುವ ಉದ್ದೇಶದಿಂದ ತುಂಬಾ ಪರಿಶ್ರಮಪಟ್ಟರು. ಅದರ ಪರಿಣಾಮದಿಂದ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಮುಂತಾದ ರಾಜ್ಯಗಳಲ್ಲಿನ ಸುಮಾರು ೧೪ ಸಾವಿರ ದೇವಸ್ಥಾನಗಳು ದೇವಸ್ಥಾನ ಮಹಾಸಂಘದ ಸಂಪರ್ಕಕ್ಕೆ ಬಂದಿವೆ. ಇದರ ಸಂಪೂರ್ಣ ಶ್ರೇಯಸ್ಸು ನಮಗೆ ಯಶಸ್ಸು ನೀಡುವ ಭಗವಂತನಿಗೆ ಹಾಗೂ ಅದಕ್ಕಾಗಿ ನಿರಂತರ ಪ್ರಯತ್ನ ಮಾಡುವ ‘ದೇವಸ್ಥಾನ ಮಹಾಸಂಘ’ದ ಪದಾಧಿಕಾರಿಗಳಿಗೆ ಸಲ್ಲುತ್ತದೆ.

ಶ್ರೀ. ರಮೇಶ ಶಿಂದೆ

೧. ದೇವಸ್ಥಾನ ಮಹಾಸಂಘದ ಉದ್ದೇಶ

೧ ಅ. ದೇವಸ್ಥಾನಗಳ ಎಲ್ಲ ರೀತಿಯ ಸಮಸ್ಯೆಗಳ ನಿವಾರಣೆ ಮಾಡುವುದು : ದೇಶಾದ್ಯಂತ ಅನೇಕ ತೀರ್ಥಕ್ಷೇತ್ರಗಳು, ಪೌರಾಣಿಕ ದೇವಸ್ಥಾನಗಳಿವೆ. ಪ್ರಾಚೀನ-ಐತಿಹಾಸಿಕ ದೇವಸ್ಥಾನ ಗಳಿವೆ. ಅದೇ ರೀತಿ ಗ್ರಾಮದೇವತೆಗಳು, ಉಪಾಸ್ಯದೇವತೆಗಳು, ಗ್ರಹದೇವತೆಗಳ ಮತ್ತು ಸಂತರ ಸಮಾಧಿ ದೇವಸ್ಥಾನಗಳಿವೆ. ಪ್ರತಿಯೊಂದು ದೇವಸ್ಥಾನದ ಸಮಸ್ಯೆ ಭಿನ್ನವಾಗಿದೆ. ಆದ್ದರಿಂದ ಇವೆಲ್ಲ ದೇವಸ್ಥಾನಗಳ ಸಮಸ್ಯೆಗಳಿಗೆ ಉಪಾಯವನ್ನು ಕಂಡು ಹಿಡಿಯುವುದು ಆವಶ್ಯಕವಾಗಿದೆ ಹಾಗೂ ಅದನ್ನು ನಮ್ಮ ದೇವಸ್ಥಾನ ಮಹಾಸಂಘದ ಮೂಲಕ ಸಾಧಿಸಲಿಕ್ಕಿದೆ. ಪ್ರಸ್ತುತ ‘ಸೆಕ್ಯುಲರ್’ ರಾಜ್ಯದಲ್ಲಿ ಸರಕಾರಿ ಹಸ್ತಕ್ಷೇಪದ ಮೂಲಕ ದೇವಸ್ಥಾನಗಳ ನೂರಾರು ವರ್ಷಗಳ ಪರಂಪರೆಯನ್ನು ನಷ್ಟಗೊಳಿಸಲಾಗುತ್ತಿದೆ. ಅನೇಕ ಸ್ಥಳಗಳಲ್ಲಿ ದೇವಸ್ಥಾನಗಳಲ್ಲಿ ಅಹಿತಕರ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ. ಆದ್ದರಿಂದಲೇ ಈ ಧರ್ಮಹಾನಿಯನ್ನು ತಡೆಗಟ್ಟಲು ನಾವೆಲ್ಲರೂ ಒಟ್ಟಾಗುವ ಅವಶ್ಯಕತೆಯಿದೆ. ಇಂದು ಹಿಂದೂಗಳ ಸುಮಾರು ೪ ಲಕ್ಷಕ್ಕೂ ಹೆಚ್ಚು ಪ್ರಮುಖ ದೇವಸ್ಥಾನಗಳು ಸರಕಾರದ ನಿಯಂತ್ರಣದಲ್ಲಿವೆ ಹಾಗೂ ಅವುಗಳನ್ನು ಕೇವಲ ಆರ್ಥಿಕ ಲೂಟಿಗಾಗಿ ಉಪಯೋಗಿಸಲಾಗುತ್ತಿದೆ.

೧ ಅ ೧. ಸರಕಾರಿಕರಣವಾಗಿರುವ ದೇವಸ್ಥಾನಗಳಲ್ಲಿನ ಪುರೋಹಿತರ ದುರವಸ್ಥೆ : ಒಂದೆಡೆ ಸರಕಾರದಿಂದ ಮಸೀದಿಗಳ ಇಮಾಮರಿಗೆ ೧೫ ರಿಂದ ೧೮ ಸಾವಿರ ರೂಪಾಯಿಗಳಷ್ಟು ವೇತನ ನೀಡಲಾಗುತ್ತದೆ. ಆದರೆ ತಮಿಳುನಾಡಿನಲ್ಲಿ ದೇವಸ್ಥಾನಗಳ ಪುರೋಹಿತರ ವೇತನ ತಿಂಗಳಿಗೆ ಕೇವಲ ೭೫೦ ರೂಪಾಯಿ ಇದೆ, ಇನ್ನೊಂದು ಕಡೆಯಲ್ಲಿ ಭಾರತದಲ್ಲಿನ ಕನಿಷ್ಟ ವೇತನ ಕಾನೂನು ಪ್ರಕಾರ (ಮಿನಿಮಮ್‌ ವೇಜೆಸ್‌ ಏಕ್ಟ್‌) ಕನಿಷ್ಟ ವೇತನವೆಂದು ೧೭೮ ರೂಪಾಯಿ ಪ್ರತಿದಿನ (ಅಂದರೆ ತಿಂಗಳಿಗೆ ೫ ಸಾವಿರದ ೩೪೦ ರೂಪಾಯಿ) ಕೊಡಬೇಕು. ಅದಕ್ಕನುಸಾರ ಪುರೋಹಿತರಿಗೆ ಪ್ರತಿ ತಿಂಗಳು ೭೫೦ ರೂಪಾಯಿ ವೇತನ ನೀಡುವುದೆಂದರೆ ಇದು ಭಾರತದ ಸಂವಿಧಾನದ ಪರಿಚ್ಛೇದ ೨೧ ರ ಉಲ್ಲಂಘನೆಯಾಗಿದೆ.

೧ ಆ. ದೇವಸ್ಥಾನಗಳ ಸರಕಾರಿಕರಣದ ವಿರುದ್ಧ ಹೋರಾಟದ ತೀವ್ರತೆಯನ್ನು ಹೆಚ್ಚಿಸುವ ಅವಶ್ಯಕತೆಯಿದೆ : ಕಾನೂನು ಪ್ರಕಾರ ವಿಚಾರ ಮಾಡಿದರೆ, ಭಾರತದ ಸಂವಿಧಾನದ ಪರಿಚ್ಛೇದ ೧೪ ರಲ್ಲಿ ಸಮಾನತೆಯ ಸಂದರ್ಭದಲ್ಲಿ ವಿವೇಚನೆಯಿದೆ, ಪರಿಚ್ಛೇದ ೨೫ ರಲ್ಲಿ ಭಾರತೀಯರಿಗೆ ಧಾರ್ಮಿಕಸ್ವಾತಂತ್ರ್ಯದ ಹಕ್ಕನ್ನು ನೀಡಲಾಗಿದೆ. ಪರಿಚ್ಛೇದ ೨೬ ರಲ್ಲಿ ಧಾರ್ಮಿಕ ವ್ಯವಹಾರದ ವ್ಯವಸ್ಥೆಯನ್ನು ನೋಡುವ ಸ್ವಾತಂತ್ರ್ಯವನ್ನೂ ನೀಡಲಾಗಿದೆ. ಆದರೂ ಸರಕಾರವು ಸಂವಿಧಾನ ನೀಡಿರುವ ಅಧಿಕಾರದ ವಿರುದ್ಧ ಹೋಗಿ ದೇವಸ್ಥಾನಗಳನ್ನು ನಿಯಂತ್ರಿಸುತ್ತಿದೆ.

೧ ಇ. ದೇವಸ್ಥಾನಗಳನ್ನು ಹಿಂದೂಸಂಘಟನೆಯ ಕೇಂದ್ರಗಳೆಂದು ಉಪಯೋಗಿಸಬೇಕು : ಇಂದು ಹಿಂದೂಗಳು ಅತೀ ಹೆಚ್ಚು ಒಟ್ಟಾಗುವ ಸ್ಥಳವೆಂದರೆ ದೇವಸ್ಥಾನಗಳು. ಆದ್ದರಿಂದ ದೇವಸ್ಥಾನ ಗಳ ಸಂಘಟನೆಯು ಹಿಂದೂಸಂಘಟನೆಯ ದೃಷ್ಟಿಯಲ್ಲಿಯೂ ತುಂಬಾ ಮಹತ್ವದ್ದಾಗಿದ್ದು ದೇವಸ್ಥಾನಗಳ ವಿಶ್ವಸ್ಥರು ಈ ದೃಷ್ಟಿಯಿಂದ ಪ್ರಯತ್ನಿಸುವುದು ಆವಶ್ಯಕವಾಗಿದೆ. ಇದರ ಉದಾಹರಣೆಯೆಂದರೆ ಕಳೆದ ವರ್ಷ ಹರಿಯಾಣಾದ ನೂಹ ಎಂಬಲ್ಲಿ ಮುಸಲ್ಮಾನರು ಗಲಭೆಯೆಬ್ಬಿಸಿ ಹಿಂದೂಗಳ ಮೇಲೆ ಬಂದೂಕುಗಳಿಂದ ಆಕ್ರಮಣ ಮಾಡಿದರು, ಆಗ ಸುಮಾರು ೨ ಸಾವಿರದ ೫೦೦ ರಿಂದ ೩ ಸಾವಿರ ಹಿಂದೂ ಭಕ್ತರು ಅಲ್ಲಿನ ಶಿವ ದೇವಸ್ಥಾನದಲ್ಲಿ ಆಶ್ರಯ ಪಡೆದು ಜೀವ ಉಳಿಸಿಕೊಂಡಿದ್ದರು. ಆದ್ದರಿಂದ ದೇವಸ್ಥಾನಗಳು ಹಿಂದೂಗಳಿಗೆ ಆಶ್ರಯಸ್ಥಾನಗಳೂ ಆಗಿವೆ. ಭವಿಷ್ಯದಲ್ಲಿ ಆಪತ್ಕಾಲದಲ್ಲಿ ಹಿಂದೂಗಳಿಗೆ ಸುರಕ್ಷೆ ನೀಡುವ ಕಾರ್ಯ ದೇವಸ್ಥಾನಗಳಿಂದ ಮಾಡಬಹುದು.

೨. ದೇವಸ್ಥಾನ ಸಂಘಟನೆಗಳನ್ನು ಪ್ರಭಾವಪೂರ್ಣಗೊಳಿಸಲು ಭವಿಷ್ಯದಲ್ಲಿ ಮಾಡಬೇಕಾದ ಕಾರ್ಯ

ಇಂದು ‘ದೇವಸ್ಥಾನ ಮಹಾಸಂಘ’ದ ಮೂಲಕ ದೇವಸ್ಥಾನ ಗಳ ಸಂಘಟಿಸಲಾಗುತ್ತಿದೆ. ಇದರ ಮೂಲಕ ದೇವಸ್ಥಾನಗಳ ಪ್ರತಿನಿಧಿಗಳ ಅಂದರೆ ವಿಶ್ವಸ್ಥರು, ಪುರೋಹಿತರು, ವ್ಯವಸ್ಥಾಪಕರು, ದೇವಸ್ಥಾನಕ್ಕಾಗಿ ಕಾರ್ಯ ಮಾಡುವ ಕಾರ್ಯಕರ್ತರು ಮತ್ತು ವಕೀಲರನ್ನು ಸಂಘಟಿಸುವ ಪ್ರಯತ್ನ ನಡೆದಿದೆ. ಅವುಗಳ ವೇಗವನ್ನು ಹೆಚ್ಚಿಸಲು ನಮಗೆ ನಿಯೋಜನೆ ಮಾಡುವ ಅವಶ್ಯಕತೆಯಿದೆ. ಇಂದು ದೇವಸ್ಥಾನಗಳ ಸಮಸ್ಯೆಗಳ ವಿಷಯ ದಲ್ಲಿ ಸರಕಾರದೊಂದಿಗೆ ಚರ್ಚೆ ಮಾಡಲಿಕ್ಕಿದ್ದರೆ, ಸರಕಾರದ ದೃಷ್ಟಿಯಲ್ಲಿ ಅಧಿಕೃತ ಅಥವಾ ಮನ್ನಣೆ ಪಡೆದಿರುವ ಅಂತಹ ಯಾವುದೇ ದೇವಸ್ಥಾನ ಸಂಘಟನೆ ಇಲ್ಲ. ಆದ್ದರಿಂದ ಮುಂಬರುವ ಕಾಲದಲ್ಲಿ ನಮಗೆ ದೇವಸ್ಥಾನ ಮಹಾಸಂಘವನ್ನು ದೇವಸ್ಥಾನಗಳ ವತಿಯಿಂದ ಸರಕಾರದೊಂದಿಗೆ ಚರ್ಚೆಮಾಡುವ ‘ಅಧಿಕೃತ ಸಂಘಟನೆ’ಯೆಂದು ಮನ್ನಣೆ ಪಡೆಯಲು ಪ್ರಯತ್ನ ಮಾಡಲಿಕ್ಕಿದೆ. ಅದಕ್ಕಾಗಿ ನಾವು ನಮ್ಮ ಸ್ತರದಲ್ಲಿರುವ ರಾಜಕೀಯ ಪರಿಚಯದಿಂದ ಹಾಗೂ ಅಧಿಕೃತವಾಗಿ ಸರಕಾರಕ್ಕೆ ಮನವಿ ನೀಡಿ ಹಾಗೂ ನಿಯೋಗವು ಸರಕಾರವನ್ನು ಭೇಟಿ ಮಾಡಿ ದೇವಸ್ಥಾನ ಮಹಾಸಂಘಕ್ಕೆ ಮನ್ನಣೆ ಪಡೆದುಕೊಳ್ಳಲು ಪ್ರಾಧಾನ್ಯತೆಯಿಂದ ಪ್ರಯತ್ನ ಮಾಡಲಿಕ್ಕಿದೆ. ಈಗ ಈ ಕಾರ್ಯವನ್ನು ಇತರ ರಾಜ್ಯ ಗಳಿಗೂ ತಲುಪಿಸಿ ಅಲ್ಲಿನ ದೇವಸ್ಥಾನಗಳ ಸಂವ್ಟಿಸÀಲು ಪ್ರಯತ್ನ ಮಾಡಬೇಕಾವುದು. ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿ ನಿಮಗೆ ಸಂಪೂರ್ಣ ಸಹಾಯ ಮಾಡುವುದು.

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ದೇವಸ್ಥಾನ ಮಹಾಸಂಘಕ್ಕೆ ಸಿಕ್ಕಿದ ಯಶಸ್ಸು

೧. ಡಿಸೆಂಬರ್‌ ೨೦೨೩ ರಲ್ಲಿ ಕರ್ನಾಟಕ ರಾಜ್ಯದ ದೇವಸ್ಥಾನ ಪರಿಷತ್ತಿನ ಸಮಯದಲ್ಲಿ ಕಾಂಗ್ರೆಸ್‌ ಸರಕಾರ ಇನ್ನೂ ಕೆಲವು ಹೊಸ ದೇವಸ್ಥಾನಗಳ ಸರಕಾರೀಕರಣ ಮಾಡಲು ಪ್ರಯತ್ನಿಸುತ್ತಿರುವಾಗ ಅದರ ವಿರುದ್ಧ ನಿಷೇಧ ಪ್ರಸ್ತಾಪ ಮಂಡಿಸಲಾಯಿತು, ಆಗ ಕಾಂಗ್ರೆಸ್ಸಿನ ಸಚಿವ ರಾಮಲಿಂಗ ರೆಡ್ಡಿ ಇವರಿಗೆ ತಕ್ಷಣ ಮಾಧ್ಯಮಗಳ ಮುಂದೆ ಹೋಗಿ ಕಾಂಗ್ರೆಸ್‌ ಸರಕಾರದ ಅಂತಹ ಯಾವುದೇ ಪ್ರಸ್ತಾಪವಿಲ್ಲವೆಂಬ ಸ್ಪಷ್ಟೀಕರಣ ನೀಡಬೇಕಾಯಿತು, ಇದು ದೇವಸ್ಥಾನ ಸಂಘಟನೆಯ ಪ್ರಭಾವವಾಗಿದೆ. ಅನಂತರ ಕಾಂಗ್ರೆಸ್‌ ಸರಕಾರ ದೇವಸ್ಥಾನಗಳ ಉತ್ಪನ್ನದ ಮೇಲೆ ಶೇ. ೧೦ ರಷ್ಟು ತೆರಿಗೆ ಹೇರುವ ಒಂದು ಮಸೂದೆಯನ್ನು ಸಲ್ಲಿಸಿತು. ಅದಕ್ಕೂ ಪ್ರಖರವಾಗಿ ವಿರೋಧಿಸಿದ ನಂತರ ಸರಕಾರದ ಆ ಮಸೂದೆಯು ವಿಧಾನ ಪರಿಷತ್ತಿನಲ್ಲಿ ಅಸ್ವೀಕಾರವಾಯಿತು ಹಾಗೂ ರಾಜ್ಯಪಾಲರೂ ಅದನ್ನು ನಿರಾಕರಿಸಿ ಸರಕಾರಕ್ಕೆ ಹಿಂತಿರುಗಿಸಿದರು. ಇದರಿಂದ, ದೇವಸ್ಥಾನಗಳ ವಿಶ್ವಸ್ಥರು, ಪುರೋಹಿತರು, ಭಕ್ತರು ಎಲ್ಲರೂ ಸಂಘಟಿತರಾಗಿದ್ದರೆ, ಕಾಂಗ್ರೆಸ್‌ ಪಕ್ಷಕ್ಕೂ ದೇವಸ್ಥಾನಗಳ ವಿರುದ್ಧ ಏನೂ ಮಾಡಲು ಸಾಧ್ಯವಿಲ್ಲ ಎಂಬುದು ಸಿದ್ಧವಾಗುತ್ತದೆ.

೨. ಮಹಾರಾಷ್ಟ್ರದ ಪ್ರಸಿದ್ಧ ತುಳಜಾಪುರ ದೇವಸ್ಥಾನದಲ್ಲಿನ ಎಂಟುವರೆ ಕೋಟಿ ರೂಪಾಯಿಗಳ ದಾನಪೆಟ್ಟಿಗೆ ಹಗರಣದಲ್ಲಿ ೧೬ ಅಧಿಕಾರಿಗಳ ಕೈವಾಡವಿತ್ತು. ವಿಚಾರಣೆಯ ವರದಿಯಲ್ಲಿ ಹೆಸರಿದ್ದರೂ ೨೦೧೭ ರಿಂದ ಅವರ ವಿರುದ್ಧ ಅಪರಾಧ ದಾಖಲೆಯಾಗುತ್ತಿರಲಿಲ್ಲ. ಆದ್ದರಿಂದ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಲಾಯಿತು. ಈ ಅರ್ಜಿಯನ್ನು ಹಿಂದೂ ವಿಧಿಜ್ಞ ಪರಿಷತ್ತಿನ ಪೂ. ನ್ಯಾಯವಾದಿ ಸುರೇಶ ಕುಲಕರ್ಣಿ ಇವರು ದಾಖಲಿಸಿದ್ದರು. ಅದಕ್ಕೆ ಈ ವರ್ಷ ಮೇ ತಿಂಗಳಲ್ಲಿ ಮುಂಬಯಿ ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಿಮಿನಲ್‌ ಅಪರಾಧವನ್ನು ದಾಖಲಿಸಲು ಹಾಗೂ ಪೊಲೀಸ್‌ ಅಧೀಕ್ಷಕರ ದರ್ಜೆಯ ಅಧಿಕಾರಿಗಳ ಮೂಲಕ ಮುಂದಿನ ತನಿಖೆ ಮಾಡಲು ಆದೇಶ ನೀಡಿತು. ಇದೊಂದು ದೊಡ್ಡ ವಿಜಯವಾಗಿದೆ. ಇದೇ ರೀತಿ ಭವಿಷ್ಯದಲ್ಲಿ ಸರಕಾರಿಕರಣವಾಗಿರುವ ದೇವಸ್ಥಾನಗಳಲ್ಲಿನ ಅವ್ಯವಹಾರಗಳ ವಿರುದ್ಧ ಆಂದೋಲನ ಆರಂಭಿಸಲಾಗುವುದು. ಅದಕ್ಕಾಗಿ ನಾವು ದೇವಸ್ಥಾನ ರಕ್ಷಣೆಗಾಗಿ ಕಾರ್ಯನಿರತ ವಕೀಲರನ್ನು ಜೋಡಿಸುವ ಪ್ರಯತ್ನ ಮಾಡಬೇಕಾಗಿದೆ.

೩. ಭಕ್ತರಿಗೆ ಹಿಂದೂ ಧರ್ಮದ ಶಿಕ್ಷಣ ಸಿಗಬೇಕೆಂದು, ಅನೇಕ ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ಫಲಕಗಳನ್ನು ಹಚ್ಚಲು ಪ್ರಾರಂಭಿಸ ಲಾಗಿದೆ ಹಾಗೂ ಕೆಲವು ದೇವಸ್ಥಾನಗಳಲ್ಲಿ ಧರ್ಮಗ್ರಂಥಗಳ ಉಚಿತ ವಾಚನಾಲಯಗಳನ್ನು ಆರಂಭಿಸಲಾಗಿದೆ.

೪. ದೇವಸ್ಥಾನದಲ್ಲಿ ‘ವಸ್ತ್ರಸಂಹಿತೆ’ ಅನ್ವಯಿಸಲು ಪ್ರಯತ್ನವಾಗುತ್ತಿದೆ