ಢಾಕಾ – ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ ಯೂನಸ್ ಚೀನಾ ಕಳುಹಿಸಿದ ಜೆಟ್ ವಿಮಾನದಲ್ಲಿ ಬೀಜಿಂಗ್ ಗೆ ತೆರಳಿದ್ದಾರೆ. ಚೀನಾದೊಂದಿಗೆ ಸೌಹಾರ್ದತೆ ಬೆಳೆಸುವ ಮೂಲಕ ಬಾಂಗ್ಲಾದೇಶ ಭಾರತವನ್ನು ಕೆಣಕಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.
೧. ಬಾಂಗ್ಲಾದೇಶದ ಸ್ವಾತಂತ್ರ್ಯ ದಿನದಂದು ದೇಶದಲ್ಲಿ ನಿಲ್ಲದೆ ಯೂನಸ ನೇರವಾಗಿ ಬೀಜಿಂಗ್ ಗೆ ತೆರಳಿದ್ದಾರೆ. ‘ಮಹಮ್ಮದ ಯೂನಸ್ ತಮ್ಮ ಮೊದಲ ವಿದೇಶ ಪ್ರವಾಸಕ್ಕೆ ಚೀನಾವನ್ನು ಆಯ್ಕೆ ಮಾಡಿದ್ದಾರೆ ಮತ್ತು ಇದರ ಮೂಲಕ ಬಾಂಗ್ಲಾದೇಶ ಒಂದು ರೀತಿಯಲ್ಲಿ ಸಂದೇಶ ನೀಡುತ್ತಿದೆ’ ಎಂದು ಬಾಂಗ್ಲಾದೇಶದ ವಿದೇಶಾಂಗ ಇಲಾಖೆಯ ಉನ್ನತ ಅಧಿಕಾರಿ ಮಹಮ್ಮದ ಜಾಶಿಮ್ ಉದ್ದೀನ ಪ್ರತಿಕ್ರಿಯಿಸಿದ್ದಾರೆ.
೨. ಚೀನಾ ಈಗಾಗಲೇ ಬಾಂಗ್ಲಾದೇಶದೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೊಂದಿದೆ ಮತ್ತು ಅದನ್ನು ಮತ್ತಷ್ಟು ಹೆಚ್ಚಿಸಲು ಚೀನಾ ಪ್ರಯತ್ನಿಸುವ ಸಾಧ್ಯತೆ ಇದೆ. ವಿಶೇಷವೆಂದರೆ ಮಹಮ್ಮದ ಯೂನಸ್ ಅಧಿಕಾರ ವಹಿಸಿಕೊಂಡ ನಂತರ ಚೀನಾದ ಕನಿಷ್ಠ ೧೪ ಸಂಸ್ಥೆಗಳು ಬಾಂಗ್ಲಾದೇಶದಲ್ಲಿ ಹೂಡಿಕೆ ಮಾಡಿವೆ.
೩. ಬಾಂಗ್ಲಾದೇಶದಲ್ಲಿ ಚೀನಾದ ಹೆಚ್ಚುತ್ತಿರುವ ಹೂಡಿಕೆ ಭಾರತಕ್ಕೆ ಕಾಳಜಿಯ ವಿಷಯವಾಗುವ ಸಾಧ್ಯತೆ ಇದೆ. ನೆರೆಯ ದೇಶದ ಮೂಲಭೂತ ಸೌಕರ್ಯಗಳಂತಹ ಕ್ಷೇತ್ರಗಳಲ್ಲಿ ಚೀನಾದ ಉಪಸ್ಥಿತಿ ಭಾರತಕ್ಕೆ ತಲೆನೋವಾಗಿ ಪರಿಣಮಿಸಬಹುದು.
ಸಂಪಾದಕೀಯ ನಿಲುವು
|