Bengal Teachers Recruitment Scam : ಶಿಕ್ಷಕರ ನೇಮಕಾತಿಯಲ್ಲಿ ಅವ್ಯವಹಾರ ಕಂಡು ಬಂದರೂ ಏಕೆ ಕ್ರಮ ಕೈಗೊಂಡಿಲ್ಲ ? – ಸರ್ವೋಚ್ಚ ನ್ಯಾಯಾಲಯ

ಮಮತಾ ಬ್ಯಾನರ್ಜಿ ಸರಕಾರದಿಂದ ಶಿಕ್ಷಕರ ನೇಮಕಾತಿ ಹಗರಣ; ಸರ್ವೋಚ್ಚ ನ್ಯಾಯಾಲಯದಿಂದ ಛೀಮಾರಿ!

ನವದೆಹಲಿ – ಬಂಗಾಳದಲ್ಲಿ 25 ಸಾವಿರ ಶಿಕ್ಷಕರು ಮತ್ತು ಸಿಬ್ಬಂದಿಗಳ ನೇಮಕಾತಿಗೆ ಸಂಬಂಧಿಸಿದ ಹಗರಣದ ಪ್ರಕರಣದಲ್ಲಿ, ಅಭ್ಯರ್ಥಿಗಳ ಆಯ್ಕೆಯಲ್ಲಿ ಹಲವು ದೋಷಗಳಿವೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ರಾಜ್ಯ ಸರಕಾರಕ್ಕೆ ಗೊತ್ತಿದ್ದರೂ ಹೆಚ್ಚುವರಿ ಹುದ್ದೆಗಳಲ್ಲಿ ಶಿಕ್ಷಕರನ್ನು ನೇಮಿಸಿದ್ದು ಏಕೆ ?

ಈ ಹಗರಣ ಬೆಳಕಿಗೆ ಬಂದ ನಂತರ, ಕೋಲಕಾತಾ ಉಚ್ಚನ್ಯಾಯಾಲಯವು ಶಿಕ್ಷಕರು ಮತ್ತು ಸಿಬ್ಬಂದಿಯ ನೇಮಕಾತಿಗಳನ್ನು ರದ್ದುಗೊಳಿಸುವಂತೆ ಆದೇಶಿಸಿತ್ತು. ಈ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯವು  ತಡೆಯಾಜ್ಞೆ ನೀಡಿತ್ತು. ಈ ಪ್ರಕರಣದ ವಿಚಾರಣೆ ನಡೆಸುವಾಗ ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ ಕುಮಾರ ಅವರ ವಿಭಾಗೀಯ ಪೀಠವು, ಕಳಂಕಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ; ಆದ್ದರಿಂದ, ಈ ಆಧಾರದ ಮೇಲೆ ನೇಮಕಾತಿಯನ್ನು ಉಚ್ಚನ್ಯಾಯಾಲಯ ರದ್ದುಗೊಳಿಸಿದೆ. ಹೆಚ್ಚುವರಿ ಹುದ್ದೆಗಳನ್ನು ರಚಿಸುವ ಉದ್ದೇಶವೇನು ? ಅಕ್ರಮಗಳು ಬಯಲಾದ ನಂತರವೂ ಕಳಂಕಿತ ಅಭ್ಯರ್ಥಿಗಳನ್ನು ಏಕೆ ತೆಗೆದುಹಾಕಲಾಗಿಲ್ಲ ? ಬೇಳೆಕಾಳಿನಲ್ಲಿ ಕಪ್ಪು ಇದೆಯೇ ಅಥವಾ ಎಲ್ಲಾ ಬೇಳೆ ಕಪ್ಪಾಗಿದೆಯೇ ? ಕಳಂಕಿತ ಅಭ್ಯರ್ಥಿಗಳನ್ನು ವಿವಿಧ ವರ್ಗಗಳಲ್ಲಿ ವಿಂಗಡಿಸಬಹುದು ಎಂದು ಹೇಳಿದೆ.

ಸಂಪಾದಕೀಯ ನಿಲುವು

  • ಏನೇ ಮಾಡಿದರೂ ನಾಯಿ ಬಾಲ ಡೊಂಕು ಎಂಬಂತೆ ಸರಕಾರಗಳಿಗೆ ನ್ಯಾಯಾಲಯಗಳು ಎಷ್ಟೇ ಛೀಮಾರಿ ಹಾಕಿದರೂ ಅವು ಎಂದಿಗೂ ಪರಿಣಾಮ ಬೀರುವುದಿಲ್ಲ !
  • ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದೇ ಆವಶ್ಯಕವಾಗಿರುತ್ತದೆ. ಹೀಗಾದಾಗ ಮಾತ್ರ, ಜನರಿಗೆ ನಿಜವಾದ ಅರ್ಥದಲ್ಲಿ ಕಾನೂನು ರಾಜ್ಯ ದೊರೆಯುತ್ತದೆ !