ದೇವಸ್ಥಾನಗಳ ಸರಕಾರಿಕರಣವೆಂದರೆ ಅದರ ವ್ಯಾಪಾರೀಕರಣವೆ ಆಗಿದೆ !

ಹಿಂದಿನ ಕಾಲದಲ್ಲಿ ಪರಕೀಯ ಆಕ್ರಮಣಕಾರರು ದೇವಸ್ಥಾನಗಳನ್ನು ಧ್ವಂಸಗೊಳಿಸಿ ಹಿಂದೂಗಳ ಧಾರ್ಮಿಕ ಶ್ರದ್ಧೆಗೆÉ ಆಘಾತ ಮಾಡಿದರು. ಸ್ವಾತಂತ್ರ್ಯಾ ನಂತರ ಐಶ್ವರ್ಯಸಂಪನ್ನ (ಶ್ರೀಮಂತ) ದೇವಸ್ಥಾನಗಳ ವ್ಯವಸ್ಥಾಪನೆ ಮಾಡುವ ನೆಪದಲ್ಲಿ ಎಲ್ಲ ರಾಜ್ಯಸರಕಾರಗಳು ಅವು ಗಳನ್ನು ಸರಕಾರೀಕರಣ ಮಾಡಿದವು !

ಜಾತ್ಯತೀತ ಆಡಳಿತದವರು ‘ತಮ್ಮ ಜನರ’ ಮೂಲಕ ದೇವರ ಧನದ ಲೂಟಿ ಮಾತ್ರವಲ್ಲ, ಅವರು ಹಿಂದೂಗಳ ಧಾರ್ಮಿಕಶ್ರದ್ಧೆಯ ಮೇಲೆ ಆಘಾತ ಮಾಡಿದರು ! ದೇವಸ್ಥಾನಗಳ ಸರಕಾರೀಕರಣ ಮಾಡಿ ಹಿಂದೂಗಳಿಗೆ ಚೈತನ್ಯ ಮತ್ತು ಶಾಂತಿ ನೀಡುವ ದೇವಸ್ಥಾನಗಳನ್ನು ಸಂಪೂರ್ಣ ವ್ಯಾಪಾರೀಕರಣ ಮಾಡಿದರು ! ದೇವಸ್ಥಾನಗಳಲ್ಲಿನ ಧಾರ್ಮಿಕ ಪರಂಪರೆಗಳ ಮೇಲೆ ನಿರ್ಬಂಧ ಹೇರಿ ಹಿಂದೂಗಳ ಜೀವನಾಧಾರವಾಗಿರುವ ದೇವಸ್ಥಾನ ಸಂಸ್ಕೃತಿಯನ್ನೇ ಧ್ವಂಸ ಗೊಳಿಸುವ ಕುಟಿಲ ತಂತ್ರವನ್ನು ರಚಿಸಿದರು !

‘ಹಿಂದೂಗಳ ದೇವಸ್ಥಾನಗಳನ್ನು ಸರಕಾರ ವಶಪಡಿಸಿ ಕೊಂಡ ನಂತರ ಕಲ್ಪನೆಗೆ ಮೀರಿದ ನಾನಾವಿಧಗಳ ಅವ್ಯವಹಾರ ಗಳು, ಹಗರಣಗಳು ಮತ್ತು ಅಪಹರಣಗಳಾಗಿವೆ ! ಶ್ರೀಮಂತ ದೇವಸ್ಥಾನಗಳ ಹೊರತು ಉಳಿದ ಸಾವಿರಾರು ದೇವಸ್ಥಾನಗಳನ್ನೂ ಸರಕಾರ ವಶಪಡಿಸಿ ಕೊಂಡಿತು ಹಾಗೂ ಶತಮಾನಗಳಿಂದಲೂ ನಡೆದುಬಂದಿರುವ ಅನೇಕ ನಿತ್ಯೋಪ ಚಾರ, ಪೂಜಾರ್ಚನೆ. ಕೀರ್ತನೆಗಳಂತಹ ಧಾರ್ಮಿಕ ರೂಢಿಗಳನ್ನು ನಿಲ್ಲಿಸಿ ಧಾರ್ಮಿಕ ಸಂಸ್ಕೃತಿಯ ಮೇಲೆ ದೊಡ್ಡ ಆಘಾತ ಮಾಡಿತು ಅಲ್ಲಿ ದಾನಪೆಟ್ಟಿಗೆಗಳ ಹರಾಜು ನಡೆಯು ತ್ತದೆ, ಅಲ್ಲಿ ಅದರಲ್ಲಿನ ದೇವರ ಧನದ ಅಪಹರಣವಾಗುತ್ತದೆ ! ದೇವರ ಭೂಮಿಯಲ್ಲಿ ಭ್ರಷ್ಟಾಚಾರದ ಹಾಗೂ ದಾನಪೆಟ್ಟಿಗೆ ಯಲ್ಲಿನ ಹಣದ ಲೂಟಿಯನ್ನು ಎಣಿಸಲು ಅಸಾಧ್ಯ. ಕಾಂಗ್ರೆಸ್ಸಿನ ಕಾಲದಲ್ಲಿ ರಾಜಕಾರಣಿಗಳು ತಮ್ಮ ‘ಜನರನ್ನು’ ಉಪಯೋಗಿಸಿಕೊಂಡು ಹಿಂದೂಗಳ ದೇವಸ್ಥಾನಗಳ ಹಣವನ್ನು ಗೋಣಿಚೀಲಗಳಲ್ಲಿ ತುಂಬಿಸಿಕೊಂಡು ಕೊಳ್ಳೆಹೊಡೆದರು ಹಾಗೂ ಆ ಹಣವನ್ನು ಹಿಂದೂಯೇತರರನ್ನು ಓಲೈಸಲು ಉಪಯೋಗಿಸಿದರು ! ಇಂದಿಗೂ ಸರಕಾರಿಕರಣ ವಾಗಿರುವ ಅನೇಕ ದೇವಸ್ಥಾನಗಳ ಹೊಸ ಹೊಸ ಅವ್ಯವಹಾರ ಗಳು ಬೆಳಕಿಗೆ ಬರುತ್ತಿದ್ದು ಇದು ಹಿಂದೂಗಳು ನಾಚಿಕೆಯಿಂದ ತಲೆತಗ್ಗಿಸುವ ವಿಷಯವಾಗಿದೆ. ಈಗಿನ ಆಡಳಿತದವರು ದೇವಸ್ಥಾನಗಳಲ್ಲಿ ಶ್ರದ್ಧೆಯಿಂದ ಬರುವ ದಾನವನ್ನು ಕಬಳಿಸುವುದರ ಹಿಂದಿದ್ದಾರೆ. ಆರ್ಥಿಕ ಹಗರಣಗಳನ್ನು ತಡೆಗಟ್ಟುವ ಬದಲು ದೇವಸ್ಥಾನಗಳಲ್ಲಿನ ಹಣದ ಮೇಲೆ ಕಣ್ಣಿಡುವ ವರ್ತನೆಯು ಧರ್ಮವಿರೋಧಿಯೇ ಆಗಿದೆ.

ದೇವಸ್ಥಾನ ಸರಕಾರೀಕರಣವೆಂದರೇನು ?

  • ದೇವಸ್ಥಾನ ಸರಕಾರೀಕರಣವಾದ ನಂತರ ದೇವಸ್ಥಾನಗಳು ಸರಕಾರದ ವಶವಾಗುತ್ತವೆ !
  • ದೇವಸ್ಥಾನದ ನ್ಯಾಸ (ಟ್ರಸ್ಟ್‌) ವ್ಯವಸ್ಥಾಪನೆ ಅಥವಾ ಸಮಿತಿಯಲ್ಲಿ ಸರಕಾರಕ್ಕೆ ರಾಜಕೀಯ ದೃಷ್ಟಿಯಲ್ಲಿ ಅನುಕೂಲವಾಗುವ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ !
  • ದೇವಸ್ಥಾನದಲ್ಲಿ ಅರ್ಪಣೆಯಾಗುವ ಹಣ, ಆಭರಣಗಳ ಮೇಲೆ ಸರಕಾರದ ಅಥವಾ ಆ ವ್ಯಕ್ತಿಗಳ ಅಧಿಕಾರವಿರುತ್ತದೆ !
    ದೇವಸ್ಥಾನಗಳಿಗೆ ಸಂಬಂಧಿಸಿದ ಹಾಗೂ ಮಾಲಕತ್ವದ ಎಲ್ಲ ವಸ್ತುಗಳು, ವಿಷಯ, ಪ್ರಸಾದ ಇತ್ಯಾದಿಗಳ ಆರ್ಥಿಕ ವ್ಯವಹಾರ ಹೇಗೆ ಮಾಡುವುದು ಎಂಬುದನ್ನು ಈ ವ್ಯಕ್ತಿಗಳೇ ನಿರ್ಧರಿಸುತ್ತಾರೆ.
  • ದೇವಸ್ಥಾನದಲ್ಲಿನ ಹಣವನ್ನು ಯಾವ ಕಾರಣಕ್ಕಾಗಿ ವಿನಿಯೋಗಿಸ ಬೇಕು ಅಥವಾ ವಿನಿಯೋಗಿಸಬಾರದು ಎಂಬುದನ್ನು ಸರಕಾರ ನೇಮಕ ಮಾಡಿರುವ ನ್ಯಾಸ ಅಥವಾ ಸಮಿತಿಯು ನಿರ್ಧರಿಸುತ್ತದೆ !
    ಈ ನ್ಯಾಸದಲ್ಲಿನ ವ್ಯಕ್ತಿಗಳಿಗೆ ದೇವರು, ಧರ್ಮ, ಭಕ್ತಿಭಾವ ಇವುಗಳೊಂದಿಗೆ ಯಾವುದೇ ಸಂಬಂಧವಿರುವುದಿಲ್ಲ. ಆದ್ದರಿಂದ ಈ ಹಣವನ್ನು ವಿನಿಯೋಗಿಸುವಾಗ ಧರ್ಮ, ಸಂಸ್ಕೃತಿ, ರೂಢಿ ಹಾಗೂ ಪರಂಪರೆಗಳ ವಿಚಾರ ಇರುವುದಿಲ್ಲ.