ನವದೆಹಲಿ – ಭಾರತ ಮತ್ತು ಚೀನಾ ಮತ್ತೊಮ್ಮೆ ಸಂಬಂಧ ಸುಧಾರಿಸಲು ಪ್ರಯತ್ನ ಮಾಡುತ್ತಿದೆ, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರು ಹೇಳಿದರು. ಅವರು ‘ಏಶಿಯಾ ಸೊಸೈಟಿ’ಯ ಸಂವಾದಾತ್ಮಕ ಸತ್ರದಲ್ಲಿ ಮಾತನಾಡುತ್ತಿದ್ದರು. ‘ಭವಿಷ್ಯದಲ್ಲಿ ಕೂಡ ಭಾರತ ಮತ್ತು ಚೀನಾ ನಡುವೆ ವೈಮನಸ್ಸು ನಿರ್ಮಾಣವಾಗಬಹುದು, ಇದು ನಮಗೆ ತಿಳಿದಿದೆ; ಆದರೆ ಈ ಸಂಘರ್ಷದಲ್ಲಿ ಇರದೆ ಇತರ ಮಾರ್ಗದಿಂದ ಪರಿಹರಿಸಬಹುದು’, ಎಂದು ಕೂಡ ಅವರು ಈ ಸಮಯದಲ್ಲಿ ಸ್ಪಷ್ಟಪಡಿಸಿದರು.
ಡಾ. ಜೈ ಶಂಕರ್ ಇವರು ಮಂಡಿಸಿರುವ ಅಂಶಗಳು
೧. ಒತ್ತಡಪುರಿತ ಸಂಬಂಧಗಳು ಯಾರಿಗೂ ಲಾಭದಾಯಕವಾಗುವುದಿಲ್ಲ. ೨೦೨೦ ರಲ್ಲಿ ಗಲವಾನ ಕಣಿವೆಯಲ್ಲಿ ಏನೆಲ್ಲ ನಡೆಯಿತು ಅದು ಸಮಸ್ಯೆ ಪರಿಹರಿಸುವ ಮಾರ್ಗ ಇರಲಿಲ್ಲ.
೨. ಗಲವಾನದಲ್ಲಿ ಏನೆಲ್ಲ ನಡೆಯಿತು ಅದು ನಿಜವಾಗಿಯೂ ನೋವಿನ ಸಂಗತಿಯೆ. ಅದು ಕೇವಲ ಸಂಘರ್ಷ ಇರಲಿಲ್ಲ, ಬದಲಾಗಿ ಲಿಖಿತ ಒಪ್ಪಂದವನ್ನು ದುರ್ಲಕ್ಷ ಮಾಡಲಾಗಿತ್ತು. ಈ ಅಂಶ ಸಂಪೂರ್ಣವಾಗಿ ಪರಿಹಾರವಾಗಿದೆ ಹೀಗೆನು ಇಲ್ಲ ನಾವು ಇನ್ನೂ ಕೂಡ ಘಟನೆಗೆ ಸಂಬಂಧಿಸಿದ ಕೆಲವು ಅಂಶಗಳು ಪರಿಗಣಿಸುತ್ತಿದ್ದೇವೆ.
೩. ನಾವು ಅನೇಕ ಅಂಶಗಳಲ್ಲಿ ಸ್ಪರ್ಧಿಸುತ್ತಿದ್ದೇವೆ; ಆದರೆ ನಾವು ಇದಕ್ಕಾಗಿ ಹೊಡೆದಾಡಬಾರದು. ಎರಡು ದೇಶಗಳಲ್ಲಿ ಒತ್ತಡಪೂರಿತ ಸಂಬಂಧ ಯಾವುದೇ ಪಕ್ಷದ ಹಿತದಲ್ಲಿ ಇಲ್ಲ; ಕಾರಣ ಗಡಿಯ ಹತ್ತಿರ ಶಾಂತಿ ಭಂಗವಾದರೆ ಉಳಿದ ಸಂಬಂಧ ಕೂಡ ಯೋಗ್ಯವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ.
೪. ಅಕ್ಟೋಬರ್ ೨೦೨೪ ರಿಂದ ಸಂಬಂಧದಲ್ಲಿ ಕೆಲವು ಸುಧಾರಣೆಗಳು ಆಗಿವೆ ಎಂದು ನಮಗೆ ಅನಿಸುತ್ತಿದೆ. ನಾವು ಇದರ ಕುರಿತು ಕೆಲಸ ಮಾಡುತ್ತಿದ್ದೇವೆ. ನಾನು ಚೀನಿ ವಿದೇಶಾಂಗ ಸಚಿವರನ್ನು ಅನೇಕ ಬಾರಿ ಭೇಟಿ ಮಾಡಿದ್ದೇನೆ ಮತ್ತು ನಮ್ಮ ಸರಕಾರ ಕೂಡ ಭೇಟಿ ಮಾಡಿದೆ. ೨೦೨೦ ರಲ್ಲಿ ನಡೆದಿರುವ ನಷ್ಟಪರಿಹಾರ ನಾವು ಮಾಡಲು ಸಾಧ್ಯವೇ ? ಇದನ್ನು ನೋಡುವುದಕ್ಕಾಗಿ ನಾವು ಹಂತ ಹಂತವಾಗಿ ಪ್ರಯತ್ನ ಮಾಡುತ್ತಿದ್ದೇವೆ.
🇮🇳🤝🇨🇳 "Working to Improve India-China Relations!" – EAM Dr. S. Jaishankar
⚠️ But history has taught India never to trust China blindly! While attempting to mend ties, staying alert is essential! 🛡️pic.twitter.com/VBz5zHHk3v
— Sanatan Prabhat (@SanatanPrabhat) March 27, 2025
ಸಂಪಾದಕೀಯ ನಿಲುವುಚೀನಾದ ಜೊತೆಗಿನ ಸಂಬಂಧ ಸುಧಾರಿಸುವ ಪ್ರಯತ್ನ ಮಾಡುವಾಗ ಅವರಲ್ಲಿ ವಿಶ್ವಾಸ ಇಡದೇ ಯಾವಾಗಲೂ ಜಾಗರೂಕರಾಗಿರುವುದು ಅಗತ್ಯವಾಗಿದೆ. ಇದು ಭಾರತಕ್ಕೆ ಇತಿಹಾಸದಿಂದ ಗಮನಕ್ಕೆ ಬಂದಿರಬಹುದು ! |