ಉನ್ನಾವ (ಉತ್ತರ ಪ್ರದೇಶ) ಇಲ್ಲಿನ ಮುಸಲ್ಮಾನ ಬಹುಸಂಖ್ಯಾತ ಗ್ರಾಮದಲ್ಲಿ ಹಿಂದೂಗಳ ದೇವಸ್ಥಾನದ ಮೇಲ್ಛಾವಣಿ ನಿರ್ಮಾಣಕ್ಕೆ ತಡೆ

  • 32 ಜನರ ಬಂಧನ

  • ಹಿಂದೂಗಳು ಅನುಮತಿ ಪಡೆದು ನಿರ್ಮಾಣ ಮಾಡಬೇಕು ! – ಆಡಳಿತ

ಉನ್ನಾವ (ಉತ್ತರ ಪ್ರದೇಶ) – ಇಲ್ಲಿನ ಮುಸ್ಲಿಂ ಬಹುಸಂಖ್ಯಾತ ರಾಣಿಪುರ ಗ್ರಾಮದಲ್ಲಿ ಇಸ್ಲಾಮಿ ಕಟ್ಟರವಾದಿಗಳು ಇಲ್ಲಿರುವ ಶಿವಮಂದಿರದ ಮೇಲ್ಛಾವಣಿಯ ನಿರ್ಮಾಣ ಕಾರ್ಯವನ್ನು ತಡೆಯಲು ಪ್ರಯತ್ನಿಸಿದರು. ಈ ಗ್ರಾಮದ ನಿಹಾಲ, ಅನೀಸ ಖಾನ, ಅಸ್ಗರ ಖಾನ, ಶೋಯೆಬ, ಸಲೀಂ, ಯೂನಸ, ಅಚ್ಛೇ ಮತ್ತು ರಯೀಸ ಈ ಸ್ಥಳೀಯ ಮುಸ್ಲಿಮರು, ದೇವಸ್ಥಾನದ ನಿರ್ಮಾಣದಿಂದ ಮಸೀದಿಯ ನಮಾಜ ಸಮಯದಲ್ಲಿ ಅಡಚಣೆ ನಿರ್ಮಾಣವಾಗುವುದು; ಕಾರಣ ಈ ದೇವಸ್ಥಾನದಿಂದ ಮಸೀದಿ ಕೇವಲ 100 ಮೀಟರ್ ದೂರದಲ್ಲಿದೆ ಎಂದು ಹೇಳಿಕೆಯಾಗಿದೆ.

1. ರಾಣಿಪುರ ಗ್ರಾಮದಲ್ಲಿ 125 ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳು ಮತ್ತು ಕೇವಲ 25 ರಿಂದ 30 ಹಿಂದೂ ಕುಟುಂಬಗಳು ವಾಸಿಸುತ್ತಿವೆ. ಈ ಗ್ರಾಮದಲ್ಲಿ ಸುಮಾರು 70 ವರ್ಷಕ್ಕೂ ಹಳೆಯದಾದ ಶಿವನ ದೇವಾಲಯವಿದೆ. ದೇವಸ್ಥಾನದ ನಾಲ್ಕು ಬದಿಯ ಗೋಡೆಗಳು ಮತ್ತು ಕಂಬಗಳಿವೆ; ಆದರೆ ಮೇಲ್ಛಾವಣಿ ಕಾಮಗಾರಿ ಇನ್ನೂ ಬಾಕಿ ಇದೆ. ಇದನ್ನು ಮುಸ್ಲಿಮರು ವಿರೋಧಿಸಿದ್ದಾರೆ. ಈ ವಿವಾದ ಅಕ್ಟೋಬರ್ 7 ಮತ್ತು 8 2024 ರಂದು ನಡೆದ ಬಳಿಕ ಪೊಲೀಸರು 26 ಮುಸ್ಲಿಮರು ಮತ್ತು 6 ಹಿಂದೂಗಳನ್ನು ಬಂಧಿಸಿದರು. ಈಗ ಸಾಮಾಜಿಕ ಮಾಧ್ಯಮದಲ್ಲಿ ಈ ವಿವಾದ ಮತ್ತೆ ಪ್ರಾರಂಭವಾಗಿದೆ.

2. ಇಲ್ಲಿನ ಇಲಾಖೆಯ ಅಧಿಕಾರಿ ಋಷಿಕಾಂತ ಶುಕ್ಲಾ ಇವರು, ಧಾರ್ಮಿಕ ಸ್ಥಳವನ್ನು ನಿರ್ಮಿಸುವ ಮೊದಲು ಆಡಳಿತದಿಂದ ಅನುಮತಿ ಪಡೆಯಬೇಕಾಗುತ್ತದೆ. ಹಿಂದೂಗಳಿಗೆ ಆಡಳಿತದಿಂದ ಅನುಮತಿ ಪಡೆಯುವಂತೆ ಹೇಳಲಾಗಿದೆ. ಆಡಳಿತದಿಂದ ಅನುಮತಿ ದೊರೆತ ನಂತರ ದೇವಸ್ಥಾನ ನಿರ್ಮಾಣಕಾರ್ಯ ಪೂರ್ಣಗೊಳಿಸಬಹುದು. ಈ ಸಂಪೂರ್ಣ ಪ್ರಕರಣದ ವರದಿಯನ್ನು ಉಪವಿಭಾಗೀಯ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಅಲ್ಲ, ಬದಲಾಗಿ ಭಾರತದಲ್ಲಿ ಮತ್ತು ಅದೂ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ಸರಕಾರವಿರುವಾಗ ಮತಾಂಧ ಮುಸ್ಲಿಮರು ಇಂತಹ ಧೈರ್ಯಮಾಡುತ್ತಾರೆ ಎನ್ನುವುದನ್ನು ನೋಡಿದರೆ ಮತಾಂಧರು ಎಷ್ಟು ಉದ್ಧಟರಾಗಿದ್ದಾರೆ ಮತ್ತು ಹಿಂದೂಗಳ ಸ್ಥಿತಿ ಎಷ್ಟು ಶೋಚನೀಯವಾಗಿದೆ ಎನ್ನುವುದು ಗಮನಕ್ಕೆ ಬರುತ್ತದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಅತ್ಯಂತ ಅವಶ್ಯಕವಾಗಿದೆ !