ನೀವು ಜನರಿಗೆ ಉಚಿತ ವಸ್ತುಗಳನ್ನು ಎಲ್ಲಿಯವರೆಗೆ ನೀಡುತ್ತೀರಿ ? – ಕೇಂದ್ರ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ

ನವ ದೆಹಲಿ – ನೀವು ಉಚಿತ ವಸ್ತುಗಳನ್ನು ಎಲ್ಲಿಯವರೆಗೆ ನೀಡುತ್ತೀರಿ ? ಕೊರೊನಾ ಮಹಾಮಾರಿಯ ನಂತರ ಉಚಿತ ಪಡಿತರ ಪಡೆಯುತ್ತಿರುವ ವಲಸೆ ಕಾರ್ಮಿಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಅಗತ್ಯವಿದೆ, ಎಂದು ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಚಾಟಿ ಬೀಸಿದೆ. ಒಂದು ಸ್ವಯಂಸೇವಾ ಸಂಸ್ಥೆಯು ಈ ಬಗ್ಗೆ ಅರ್ಜಿ ಸಲ್ಲಿಸಿದೆ.

1. ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರಕಾರವು ನ್ಯಾಯಾಲಯಕ್ಕೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 81 ಕೋಟಿ ಜನರಿಗೆ ಉಚಿತ ಪಡಿತರ ನೀಡಲಾಗುತ್ತಿದೆ ಎಂದು ಹೇಳಿದೆ.

2. ಈ ಕುರಿತು ನ್ಯಾಯಾಲಯವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಐಶ್ವರ್ಯ ಭಾಟಿ ಅವರಿಗೆ, ಇದರ ಅರ್ಥ ಈಗ ಕೇವಲ ತೆರಿಗೆ ಪಾವತಿಸುವ ಜನರಿಗೆ ಮಾತ್ರ ಉಚಿತ ವಸ್ತುಗಳನ್ನು ನೀಡುವುದು ಬಾಕಿ ಉಳಿದಿದೆ ಎಂದು ವ್ಯಂಗ್ಯವಾಗಿ ಹೇಳಿತು.