PM Kisan Samman Nidhi Scam : ‘ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ’ ಯೋಜನೆಯ ದುರುಪಯೋಗ; 181 ಬಾಂಗ್ಲಾದೇಶಿಗಳ ವಿರುದ್ಧ ಪ್ರಕರಣ ದಾಖಲು !

ನಾಶಿಕನಲ್ಲಿ ನಡೆದ ಘಟನೆ !

ನಾಶಿಕ – ಜಿಲ್ಲೆಯ 181 ಬಾಂಗ್ಲಾದೇಶಿಗಳು ‘ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ’ ಯೋಜನೆಯನ್ನು ದುರುಪಯೋಗ ಪಡೆಸಿಕೊಂಡಿರುವ ಮಾಹಿತಿಯನ್ನು ಭಾಜಪ ನಾಯಕ ಕಿರೀಟ ಸೋಮಯ್ಯ ಬೆಳಕಿಗೆ ತಂದಿದ್ದರು. ಈ ಬಾಂಗ್ಲಾದೇಶಿಗಳ ವಿರುದ್ಧ ಮಾರ್ಚ್ 26 ರಂದು ಪ್ರಕರಣ ದಾಖಲಾಗಿದೆ. ಈ ಬಾಂಗ್ಲಾದೇಶಿಯರು ಭಾದವಣ ಗ್ರಾಮದ ನಿವಾಸಿಗಳೆಂದು ಹೇಳುವ ಮೂಲಕ ದುರುಪಯೋಗ ಪಡೆದುಕೊಂಡಿದ್ದರು. ಆರೋಪಿಗಳಲ್ಲಿ ಸುಕ್ತಾರಾ ಖಾತುನ, ನಜ್ಮುಲ ಹಕ್, ತಸ್ಲಿಮಾ ಖಾತುನ, ಇಂತಾಬ, ಮಹಮ್ಮದ ಹಜರತ, ಮಹಮ್ಮದ ರಶೀದ ಆಲಂ, ಅನಿಸಾ, ಅನ್ವರಾ, ಸಾಹುದ ರಾಜಾ, ಸಲಾಮ ಅಲಿ, ಅಫೀಫಾ ಖಾತುನ, ಇಶ್ರತ್ ಜಹಾನ್, ಜುಲೇಖಾ ಬೀಬಿ, ಅಖ್ತರ ಹುಸೇನ, ಮಹಮ್ಮದ್ ಹನೀಫ್, ಖುಷ್ಬೂ, ಮಹಮ್ಮದ ಮಂಜುರುಲ್ ಆಲಂ, ತಾಹೆರ್ ಆಲಂ, ಸರೀನಾ ಖಾತುನ್ ಮತ್ತು ಇನ್ನೂ ಅನೇಕರು ಸೇರಿದ್ದಾರೆ.

ಸಂಪಾದಕೀಯ ನಿಲುವು

ಈ ರೀತಿ ಸರಕಾರದ ಯೋಜನೆಗಳ ದುರುಪಯೋಗ ಪಡೆಯುವ ನುಸುಳುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಅವರ ದೇಶಕ್ಕೆ ದಬ್ಬಬೇಕು !