SC On Bihar Crimes : ಬಿಹಾರದಲ್ಲಿ ನಾಯಕನಾಗಲು ಕ್ರಿಮಿನಲ್ ಮೊಕದ್ದಮೆ ಆಗತ್ಯ ! ಸರ್ವೋಚ್ಚ ನ್ಯಾಯಾಲಯದ ವ್ಯಂಗ್ಯ ಟೀಕೆ

ನವದೆಹಲಿ – ಬಿಹಾರದಲ್ಲಿ ಗ್ರಾಮದ ಮುಖ್ಯಸ್ಥನಾಗಲು ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇರುವುದು ಅವಶ್ಯಕ ಎಂದು ಸರ್ವೋಚ್ಚ ನ್ಯಾಯಾಲಯ ವ್ಯಂಗ್ಯವಾಗಿ ಟೀಕಿಸಿದೆ. ಈ ಟೀಕೆಯನ್ನು ಮುಖ್ಯಸ್ಥರೊಬ್ಬರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮಾಡಲಾಗಿದೆ.

1. ನ್ಯಾಯಾಲಯವು ಅರ್ಜಿದಾರರ ನ್ಯಾಯವಾದಿಗಳನ್ನು ಅವರ ಕಕ್ಷಿದಾರರ ವಿರುದ್ಧ ಈ ಪ್ರಕರಣದ ಹೊರತಾಗಿ ಬೇರೆ ಯಾವುದೇ ಕ್ರಿಮಿನಲ್ ಮೊಕದ್ದಮೆ ಬಾಕಿ ಇದೆಯೇ? ಬೇರೆ ಯಾವುದೇ ಪ್ರಕರಣವಿದ್ದರೆ, ಅದರ ವಿವರಗಳು ಎಲ್ಲಿವೆ? ಇದಕ್ಕೆ ಉತ್ತರಿಸಿದ ನ್ಯಾಯವಾದಿಗಳು, ಅವರ ಕಕ್ಷಿದಾರರ ವಿರುದ್ಧ ಇತರ ಮೊಕದ್ದಮೆಗಳು ಕೂಡ ದಾಖಲಾಗಿವೆ. ಈ ಎಲ್ಲಾ ಮೊಕದ್ದಮೆಗಳು ಗ್ರಾಮದ ರಾಜಕಾರಣದಿಂದಾಗಿವೆ ಎಂದು ಹೇಳಿದರು.

2. ಇದರ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಾಲಯವು, ಬಿಹಾರದಲ್ಲಿ ಗ್ರಾಮ ಅಥವಾ ಪಂಚಾಯಿತಿ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗುವುದು ಈಗ ಸಾಮಾನ್ಯವಾಗಿದೆ. ಯಾರಾದರೂ ಕ್ರಿಮಿನಲ್ ಮೊಕದ್ದಮೆ ದಾಖಲಿಸದಿದ್ದರೆ, ಅವರು ಬಿಹಾರದಲ್ಲಿ ಮುಖ್ಯಸ್ಥರಾಗಲು ಅರ್ಹರಲ್ಲ ಎಂದು ಹೇಳಿದೆ.

3. ನ್ಯಾಯವಾದಿಗಳು, ತಮ್ಮ ಕಕ್ಷಿದಾರರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದರು. ಅವರು ನಿರೀಕ್ಷಣಾ ಜಾಮೀನು ಕೋರುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು ಅರ್ಜಿದಾರರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ನ್ಯಾಯಾಲಯವು ಮುಖ್ಯಸ್ಥರು ಮೊದಲು ಪೊಲೀಸರ ಮುಂದೆ ಹಾಜರಾಗಿ ತಮ್ಮ ವಾದವನ್ನು ಮಂಡಿಸಬೇಕು ಎಂದು ಹೇಳಿದೆ.

ಸಂಪಾದಕೀಯ ನಿಲುವು

ಸರ್ವೋಚ್ಚ ನ್ಯಾಯಾಲಯದ ಈ ಟೀಕೆಯಿಂದ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ದೋಷಗಳು ಬೆಳಕಿಗೆ ಬರುತ್ತವೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಯಾವುದೇ ರಾಜಕೀಯ ಪಕ್ಷ ಪ್ರಯತ್ನಿಸಲು ಸಾಧ್ಯವಿಲ್ಲ; ಏಕೆಂದರೆ ಅಪರಾಧಿಯಾಗದೆ ಯಾವುದೇ ವ್ಯಕ್ತಿ ರಾಜಕೀಯಕ್ಕೆ ಬರಲು ಅಥವಾ ಉಳಿಯಲು ಸಾಧ್ಯವಿಲ್ಲ, ಇದೇ ಈಗಿನ ಪರಿಸ್ಥಿತಿಯಾಗಿದೆ !