Jallianwala Bagh Massacre : ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ; ಬ್ರಿಟಿಷ್ ಸರಕಾರ ಏಪ್ರಿಲ್ 13 ರ ಮೊದಲು ಭಾರತದ ಬಳಿ ಕ್ಷಮೆಯಾಚಿಸಬೇಕು !

ಬ್ರಿಟಿಷ್ ಸಂಸದ ಬಾಬ್ ಬ್ಲ್ಯಾಕ್‌ಮನ್ ಅವರಿಂದ ಸಂಸತ್ತಿನಲ್ಲಿ ಬೇಡಿಕೆ

ಲಂಡನ್ (ಬ್ರಿಟನ್) – 1919 ರಲ್ಲಿ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕೆ ಬ್ರಿಟಿಷ್ ಸರಕಾರವು ಭಾರತೀಯರ ಕ್ಷಮೆಯಾಚಿಸಬೇಕು ಎಂದು ಬ್ರಿಟನ್ನಿನ ವಿರೋಧ ಪಕ್ಷದ ಕನ್ಸರ್ವೇಟಿವ್ (ಹಜೂರ್) ಸಂಸದ ಬಾಬ್ ಬ್ಲ್ಯಾಕ್‌ಮನ್ ಅವರು ಬೇಡಿಕೆ ಇಟ್ಟಿದ್ದಾರೆ. ಅವರು ಮಾರ್ಚ್ 27 ರಂದು ಸಂಸತ್ತಿನಲ್ಲಿ ಮಾತನಾಡುವಾಗ ಈ ಬೇಡಿಕೆ ಇಟ್ಟಿದ್ದಾರೆ. ಅವರು ಬ್ರಿಟಿಷ್ ಸರಕಾರವು ಏಪ್ರಿಲ್ 13 ರ ಮೊದಲು ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ. ಆ ದಿನ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ 106 ನೇ ಸ್ಮೃತಿ ದಿನವಾಗಿದೆ. ಈವರೆಗೆ ಯಾವ ಬ್ರಿಟಿಷ್ ಪ್ರಧಾನ ಮಂತ್ರಿಯೂ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕೆ ಕ್ಷಮೆಯಾಚಿಸಿಲ್ಲ. ಆದಾಗ್ಯೂ, ಅನೇಕ ಬ್ರಿಟಿಷ್ ನಾಯಕರು ಆಗಾಗ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ; ಆದರೆ ಅಧಿಕೃತವಾಗಿ ಯಾರೂ ಕ್ಷಮೆಯಾಚಿಸಿಲ್ಲ.

ಬ್ಲ್ಯಾಕ್‌ಮನ್ ಅವರು ಮಾತು ಮುಂದುವರೆಸಿ, ಬೈಸಾಖಿಯ (ಪಂಜಾಬ್ ಹಬ್ಬ) ದಿನ ಅನೇಕ ಜನರು ತಮ್ಮ ಕುಟುಂಬದೊಂದಿಗೆ ಶಾಂತಿಯುತವಾಗಿ ಜಲಿಯನ್‌ವಾಲಾ ಬಾಗ್‌ಗೆ ಬಂದಿದ್ದರು. ಜನರಲ್ ಡಾಯರ್ ಅವರು ಅಲ್ಲಿ ಬ್ರಿಟಿಷ್ ಸೈನ್ಯದ ಪರವಾಗಿ ಸೈನಿಕರನ್ನು ಕಳುಹಿಸಿ ಗುಂಡುಗಳು ಖಾಲಿಯಾಗುವವರೆಗೆ ನಿರಪರಾಧಿ ಜನರ ಮೇಲೆ ಗುಂಡು ಹಾರಿಸುವಂತೆ ಆದೇಶಿಸಿದರು. ಜಲಿಯನ್‌ವಾಲಾ ಹತ್ಯಾಕಾಂಡವು ಬ್ರಿಟಿಷ್ ಸಾಮ್ರಾಜ್ಯದ ಮೇಲಿನ ಕಳಂಕವಾಗಿದೆ. ಇದರಲ್ಲಿ 1 ಸಾವಿರದ 500 ಜನರು ಮೃತಪಟ್ಟರು ಮತ್ತು 1 ಸಾವಿರದ 200 ಜನರು ಗಾಯಗೊಂಡರು. ಬ್ರಿಟಿಷ್ ಸಾಮ್ರಾಜ್ಯದ ಮೇಲಿನ ಈ ಕಳಂಕಕ್ಕಾಗಿ ಜನರಲ್ ಡಯರ್ ಅವರ ಅಪಕೀರ್ತಿ ಆಯಿತು. ಹಾಗಾದರೆ ಸರಕಾರದಿಂದ ಏನು ತಪ್ಪು ಆಯಿತು?, ಎಂದು ಒಪ್ಪಿಕೊಂಡು ನಾವು ಭಾರತೀಯರಿಗೆ ಅಧಿಕೃತವಾಗಿ ಕ್ಷಮೆಯಾಚಿಸಿದ್ದೇವೆಯೇ?

ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ಏಕೆ ಆಯಿತು?

ಭಾರತದ ಕ್ರಾಂತಿಕಾರಿ ಚಟುವಟಿಕೆಗಳನ್ನು ತಡೆಯಲು ಬ್ರಿಟಿಷ್ ಸರಕಾರವು ರೌಲತ್ ಕಾಯ್ದೆಯನ್ನು ಜಾರಿಗೊಳಿಸಿತು. ಅದರಲ್ಲಿ ವಿಚಾರಣೆ ಇಲ್ಲದೆ ಬಂಧನ ಮತ್ತು ರಹಸ್ಯವಾಗಿ ವಿಚಾರಣೆ ನಡೆಸುವ ಅವಕಾಶವಿತ್ತು. ಈ ಬಗ್ಗೆ ಭಾರತೀಯ ಜನರಲ್ಲಿ ಆಕ್ರೋಶವಿತ್ತು. ಇದನ್ನು ವಿರೋಧಿಸಲು ಜನರು ಜಲಿಯನ್‌ವಾಲಾ ಬಾಗ್‌ನಲ್ಲಿ ಸೇರಿದ್ದರು. ಇದರಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರೂ ಇದ್ದರು. ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡಾಯರ್ ಅವರು ತಮ್ಮ ಸೈನ್ಯಕ್ಕೆ ಜನರ ಮೇಲೆ ನೇರವಾಗಿ ಗುಂಡು ಹಾರಿಸಲು ಆದೇಶಿಸಿದರು. ಈ ಸೈನ್ಯದಲ್ಲಿ ಗೂರ್ಖಾ ಮತ್ತು ಬಲೂಚ್ ರೆಜಿಮೆಂಟ್‌ನ ಸೈನಿಕರಿದ್ದರು, ಅವರು ಬ್ರಿಟಿಷ್ ಭಾರತೀಯ ಸೈನ್ಯದ ಭಾಗವಾಗಿದ್ದರು. ಜಲಿಯನ್‌ವಾಲಾ ಬಾಗ್‌ನಿಂದ ಹೊರಹೋಗಲು ಒಂದೇ ದಾರಿ ಇತ್ತು. ರಸ್ತೆ ಕಿರಿದಾಗಿದ್ದರಿಂದ ಜನರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅನೇಕರು ಜೀವ ಉಳಿಸಿಕೊಳ್ಳಲು ಬಾವಿಗೆ ಹಾರಿದರು. ಅವರ ಮೃತದೇಹಗಳು ನಂತರ ಸಿಕ್ಕವು.

ಸಂಪಾದಕೀಯ ನಿಲುವು

ಭಾರತವು ಬ್ರಿಟಿಷ್ ಸರಕಾರಕ್ಕೆ ಕ್ಷಮೆಯಾಚಿಸಲು ಅಧಿಕೃತವಾಗಿ ಬೇಡಿಕೆ ಇಟ್ಟಿದೆಯೇ? ಬ್ರಿಟನ್ನಿನ ಒಬ್ಬ ಸಂಸದನಿಗೆ ಸರಕಾರವು ಕ್ಷಮೆಯಾಚಿಸಬೇಕು ಎಂದು ಅನಿಸುತ್ತದೆ, ಭಾರತದ ಎಷ್ಟು ಸಂಸದರಿಗೆ ಹಾಗೆ ಅನಿಸುತ್ತದೆ ಮತ್ತು ಅವರಲ್ಲಿ ಎಷ್ಟು ಜನರು ಈವರೆಗೆ ಬೇಡಿಕೆ ಇಟ್ಟಿದ್ದಾರೆ?