ದೆಹಲಿಯಲ್ಲಿನ ಭಾಜಪದ ಶಾಸಕರಿಂದ ಪೊಲೀಸರಿಗೆ ಆಗ್ರಹ
ನವದೆಹಲಿ – ರಸ್ತೆಯಲ್ಲಿ ನಮಾಜ ಮಾಡುವುದರಿಂದ ಸಾರಿಗೆ ವ್ಯವಸ್ಥೆ ಹದಗೆಡುತ್ತದೆ, ಅದರಿಂದ ಜನರಿಗೆ ಅನಾನುಕೂಲವಾಗುತ್ತದೆ ಮತ್ತು ಕೆಲವೊಮ್ಮೆ ಆಂಬುಲೆನ್ಸ್, ಶಾಲಾ ಬಸ್ಸು ಮತ್ತು ಇತರ ಆತ್ಯಾವಶ್ಯಕ ಸೇವೆಗಳ ಮೇಲೆ ಕೂಡ ಪರಿಣಾಮವಾಗುತ್ತದೆ. ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸಬೇಕು; ಆದರೆ ಅದರಿಂದ ಸಾರ್ವಜನಿಕ ಸುವ್ಯವಸ್ಥೆಯ ಮತ್ತು ಸಾರಿಗೆಯ ಮೇಲೆ ಪ್ರಭಾವ ಬೀರಬಾರದು, ಎಂದು ಹೇಳುತ್ತಾ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಅನ್ನು ನಿಷೇಧಿಸಬೇಕೆಂದು ದೆಹಲಿಯ ಶಕುರ ಬಸ್ತಿ ಮತದಾರ ಕ್ಷೇತ್ರದ ಭಾಜಪದ ಶಾಸಕ ಕರನೈಲ ಸಿಂಹ ಇವರು ಆಗ್ರಹಿಸಿದ್ದಾರೆ. ಅವರು ಈ ಸಂದರ್ಭದಲ್ಲಿ ದೆಹಲಿಯ ಪೊಲೀಸ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಅವರು ಪೊಲೀಸರಿಗೆ ಧಾರ್ಮಿಕ ಕಾರ್ಯಕ್ರಮ ಕೇವಲ ಮಸೀದಿ ಮತ್ತು ಖಾಸಗಿ ಪರಿಸರಕಷ್ಟೇ ಸೀಮಿತ ಇರಿಸಲು ಕರೆ ನೀಡಿದ್ದಾರೆ.
🚨 Ban Public Namaz! 🚨
📢 Delhi BJP MLA @KarnailSinghBJP demands police action against Namaz being offered in public spaces!
⚖️ Why should such a demand even be necessary?
Blocking public spaces for prayers is an offense!
If police fail to act, action must be taken against… pic.twitter.com/yp9KBrkiH7
— Sanatan Prabhat (@SanatanPrabhat) March 27, 2025
ಸಂಪಾದಕೀಯ ನಿಲುವುನಿಜವೆಂದರೆ ಈ ರೀತಿ ಆಗ್ರಹಿಸುವ ಪ್ರಮಯವೇ ಬರಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಅನಾನುಕೂಲ ಮಾಡಿ ನಮಾಜ ಮಾಡುವುದು ಇದು ಅಪರಾಧವೇ ಆಗಿದೆ. ಪೊಲೀಸರು ಹಾಗೆ ಮಾಡದಿದ್ದರೆ, ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು ! |