UAE Released Indian Prisoners : ರಂಜಾನ್ ಸಮಯದಲ್ಲಿ, ಸಂಯುಕ್ತ ಅರಬ್ ಅಮಿರಾಟ್ಸ್ ಬಿಡುಗಡೆ ಮಾಡಿದ ಕೈದಿಗಳಲ್ಲಿ 500 ಭಾರತೀಯರು ಸೇರಿದ್ದಾರೆ !

ದುಬೈ – ಸಂಯುಕ್ತ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಮೊಹಮ್ಮದ ಬಿನ ಜಾಯೆದ ಅಲ್ ನಾಹ್ಯಾನ ಅವರು ರಮಜಾನನ ಪವಿತ್ರ ತಿಂಗಳಲ್ಲಿ ಕೈದಿಗಳನ್ನು ಸಾಮೂಹಿಕವಾಗಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಇದರಲ್ಲಿ ವಿವಿಧ ಅಪರಾಧಗಳಿಗಾಗಿ ಶಿಕ್ಷೆ ಅನುಭವಿಸುತ್ತಿರುವ 500 ಭಾರತೀಯರು ಕೂಡ ಸೇರಿದ್ದಾರೆ. ಈ ಕೈದಿಗಳನ್ನು ಅಲ್ಲಿನ ಜೈಲುಗಳಿಂದ ಬಿಡುಗಡೆ ಮಾಡಲಾಗಿದೆ. ಫೆಬ್ರವರಿಯ ಕೊನೆಯ ವಾರದಲ್ಲಿ ಶೇಖ್ ಜಾಯೆದ್ ಅವರ ಆದೇಶದಂತೆ 1 ಸಾವಿರ 295 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅದೇ ಸಮಯದಲ್ಲಿ ಪ್ರಧಾನಿ ಶೇಖ್ ಮಹಮ್ಮದ ಬಿನ್ ರಶೀದ ಅಲ್ ಮಕ್ತೂಮ ಅವರ ಆದೇಶದಂತೆ 1 ಸಾವಿರ 518 ಕೈದಿಗಳನ್ನು ಕೂಡ ಬಿಡುಗಡೆ ಮಾಡಲಾಗಿದೆ.

1. ಸಂಯುಕ್ತ ಅರಬ್ ಎಮಿರೇಟ್ಸ್ ಸರಕಾರ ಪ್ರತಿ ವರ್ಷ ರಮಜಾನ್ ತಿಂಗಳಲ್ಲಿ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿಲ್ಲದ ನೂರಾರು ಕೈದಿಗಳನ್ನು ಬಿಡುಗಡೆ ಮಾಡುತ್ತದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಸೇರಿರುತ್ತಾರೆ.

2. ಈ ಬಿಡುಗಡೆಯ ಉದ್ದೇಶ ಈ ಕೈದಿಗಳನ್ನು ಅವರ ಕುಟುಂಬಗಳೊಂದಿಗೆ ಮತ್ತೆ ಸೇರಿಸುವುದು ಮತ್ತು ಅವರನ್ನು ಸಮಾಜಕ್ಕೆ ಮರಳಿ ತರುವುದು ಎಂದು ಹೇಳಲಾಗಿದೆ.

3. ದುಬೈನ ಅಟಾರ್ನಿ ಜನರಲ್ ಚಾನ್ಸಲರ್ ಇಸ್ಸಾಂ ಇಸ್ಸಾ ಅಲ್ ಹುಮೈದಾನ್ ಅವರು, ಸಂಯುಕ್ತ ಅರಬ್ ಎಮಿರೇಟ್ಸ್ ಅಧ್ಯಕ್ಷರ ಈ ನಿರ್ಧಾರವು ಅವರ ಶಿಕ್ಷೆಯನ್ನು ಪೂರ್ಣಗೊಳಿಸುವವರ ಬಗ್ಗೆ ಇರುವ ಬದ್ಧತೆಯನ್ನು ತೋರಿಸುತ್ತದೆ. ಕೈದಿಗಳನ್ನು ಬಿಡುಗಡೆ ಮಾಡುವುದರಿಂದ ಅವರು ತಮ್ಮ ಜೀವನವನ್ನು ಹೊಸದಾಗಿ ಪ್ರಾರಂಭಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

4. ದುಬೈ ನ್ಯಾಯಾಲಯವು ಪೊಲೀಸರ ಸಹಾಯದಿಂದ ಈ ಕೈದಿಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಶೇಖ್ ಮಹಮ್ಮದ್ ಜಾಯೆದ್ ಅವರು ಬಿಡುಗಡೆಯಾದ ಕೈದಿಗಳ ಆರ್ಥಿಕ ಹೊಣೆಗಾರಿಕೆಯನ್ನು ಪೂರೈಸುವ ಭರವಸೆಯನ್ನು ನೀಡಿದ್ದಾರೆ. ಬಿಡುಗಡೆಯಾದ ಕೈದಿಗಳ ಕುಟುಂಬಗಳ ಮೇಲೆ ಯಾವುದೇ ಆರ್ಥಿಕ ಹೊರೆ ಬೀಳಬಾರದು ಎಂಬುದು ಇದರ ಉದ್ದೇಶವಾಗಿದೆ.