ಸದ್ಗುರು ಜಗ್ಗಿ ವಾಸುದೇವ ಆಶ್ರಮದಲ್ಲಿ ಪರಿಶೀಲನೆ ಪ್ರಕರಣ; ಉಚ್ಚ ನ್ಯಾಯಾಲಯ ತನ್ನ ಕಾರ್ಯಕ್ಷೇತ್ರವನ್ನು ಮೀರಿ ಆಶ್ರಮದ ತಪಾಸಣೆಯ ಆದೇಶ ನೀಡಿತ್ತು ! – ಸುಪ್ರೀಂ ಕೋರ್ಟ್‌

ಸದ್ಗುರು ಜಗ್ಗಿ ವಾಸುದೇವ ಇವರಿಗೆ ಸರ್ವೋಚ್ಚ ನ್ಯಾಯಾಲಯದಿಂದ ಬಿಗ್ ರಿಲೀಫ್ ಹಾಗೂ ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಛೀಮಾರಿ !

ನವ ದೆಹಲಿ – ಸದ್ಗುರು ಜಗ್ಗಿ ವಾಸುದೇವ ಇವರ ‘ಈಶಾ ಫೌಂಡೇಶನ್’ನ ಕೊಯಿಮತ್ತುರಿನ ಆಶ್ರಮದಲ್ಲಿ ಇಬ್ಬರು ಸಹೋದರಿಯರನ್ನು ಬಲವಂತವಾಗಿ ಕಟ್ಟಿ ಹಾಕಲಾಗಿರುವ ಬಗ್ಗೆ ಅವರ ತಂದೆ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು. ಇದರಿಂದ ಉಚ್ಚ ನ್ಯಾಯಾಲಯವು ಪೊಲೀಸರಿಗೆ ಈ ಆಶ್ರಮದ ತಪಾಸಣೆ ನಡೆಸುವ ಆದೇಶ ನೀಡಿತ್ತು. ಬಳಿಕ ೧೫೦ ಪೊಲೀಸರು ಈ ಆಶ್ರಮದ ತಪಾಸಣೆ ನಡೆಸಿದ್ದರು. ಇದರ ವಿರುದ್ಧ ಸದ್ಗುರು ಜಗ್ಗಿ ವಾಸುದೇವ್ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು. ಅದರ ವಿಚಾರಣೆ ನಡೆಸುವಾಗ ಸರ್ವೋಚ್ಚ ನ್ಯಾಯಾಲಯವು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಛೀಮಾರಿ ಹಾಕುತ್ತಾ, ಹುಡುಗಿಯ ತಂದೆಯ ಅರ್ಜಿಯನ್ನು ತಳ್ಳಿ ಹಾಕಿತು. ನ್ಯಾಯಾಲಯವು, ಇಬ್ಬರು ಮಹಿಳೆಯರು ಸ್ವ ಇಚ್ಛೆಯಿಂದ ಆಶ್ರಮದಲ್ಲಿ ವಾಸಿಸುತ್ತಿದ್ದಾರೆ, ಇದು ಅವರೇ ಸ್ವತಃ ಹೇಳಿದ ನಂತರ ಕೂಡ ಉಚ್ಚ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸುವುದನ್ನು ಬಿಟ್ಟು ತನ್ನ ಕಾರ್ಯಕ್ಷೇತ್ರವನ್ನು ದಾಟಿ ಆದೇಶ ನೀಡಿದೆ. ಯಾವ ಇಬ್ಬರೂ ಮಹಿಳೆಯರನ್ನು ಕೂಡಿ ಹಾಕಲಾಗಿದೆ ಎಂದು ಆರೋಪಿಸಲಾಗಿತ್ತು, ಅವರೊಂದಿಗೆ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಇವರು ಆನ್ಲೈನ್ ಮೂಲಕ ಸಂವಾದ ನಡೆಸಿದರು. ಆ ಸಮಯದಲ್ಲಿ ಇಬ್ಬರೂ ಮಹಿಳೆಯರು ನ್ಯಾಯಮೂರ್ತಿ ಚಂದ್ರಚೂಡ ಇವರಿಗೆ, ನಾವಿಬ್ಬರೂ ಸ್ವ ಇಚ್ಛೆಯಿಂದಲೇ ಆಶ್ರಮದಲ್ಲಿ ವಾಸಿಸುತ್ತಿದ್ದೇವೆ ಎಂದು ಹೇಳಿದರು.

ಮದ್ರಾಸ್ ಉಚ್ಚ ನ್ಯಾಯಾಲಯವು ಏನು ಹೇಳಿತ್ತು ?

ಸಪ್ಟೆಂಬರ್ ೩೦ ರಂದು ನಡೆದಿರುವ ವಿಚಾರಣೆಯಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯವು ಜಗ್ಗಿ ವಾಸುದೇವ ಇವರ ನ್ಯಾಯವಾದಿಗೆ ಪ್ರಶ್ನೆ ಕೇಳುವಾಗ, ಜಗ್ಗಿ ವಾಸುದೇವ ಇವರು ತನ್ನ ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿರುವಾಗ ಇತರ ಯುವತಿಯರಿಗೆ ಸಂಸಾರ ತ್ಯಾಗ ಮಾಡಿ ಸನ್ಯಾಸಿಯಂತೆ ಜೀವನ ನಡೆಸುವುದಕ್ಕಾಗಿ ಏಕೆ ಪ್ರೋತ್ಸಾಹಿಸುತ್ತಿದ್ದಾರೆ ? ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ಸರ್ವೋಚ್ಚ ನ್ಯಾಯಾಲಯದ ಈ ನಿರ್ಣಯದಿಂದ ತಮಿಳುನಾಡಿನ ಸರಕಾರ ಮತ್ತು ಪೊಲೀಸರ ಹಿಂದೂದ್ವೇಷ ಮತ್ತೊಮ್ಮೆ ಬಹಿರಂಗ ! ಲವ್ ಜಿಹಾದದ ಪ್ರಕರಣಗಳಲ್ಲಿ ಎಂದಾದರೂ ಆಂಧ್ರಪ್ರದೇಶ ಸರಕಾರವು ಮದರಸಾಗಳು ಅಥವಾ ಮಸೀದಿಯ ತಪಾಸಣೆ ನಡೆಸುವ ಆದೇಶ ನೀಡಿತ್ತೆ ?