Trump Iftar Party : ಟ್ರಂಪ್ ಅವರಿಂದ ಶ್ವೇತ ಭವನದಲ್ಲಿ ಇಫ್ತಾರ್ ಕೂಟ

ವಾಷಿಂಗ್ಟನ (ಅಮೇರಿಕಾ) – ಅಮೇರಿಕಾ ಅಧ್ಯಕ್ಷ ಡೊನಾಲ್ಡ ಟ್ರಂಪ್ ಗುರುವಾರ ಶ್ವೇತಭವನದಲ್ಲಿ ಇಫ್ತಾರ ಕೂಟವನ್ನು ಆಯೋಜಿಸಿದ್ದರು. ಅಧ್ಯಕ್ಷೀಯ ಚುನಾವಣೆಯಲ್ಲಿ ಬೆಂಬಲ ನೀಡಿದ್ದಕ್ಕಾಗಿ ಅವರು ಅಮೇರಿಕದ ಮುಸ್ಲಿಮರಿಗೆ ಧನ್ಯವಾದ ಅರ್ಪಿಸಿದರು. ‘ನಾನು ಅಧ್ಯಕ್ಷನಾಗಿರುವವರೆಗೂ ನಿಮ್ಮೊಂದಿಗೆ ಇರುತ್ತೇನೆ’, ಎಂದು ಟ್ರಂಪ್ ಮುಸ್ಲಿಮರಿಗೆ ಭರವಸೆ ನೀಡಿದರು. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ಮಾಡಿದ ಪ್ರಯತ್ನಗಳ ಬಗ್ಗೆಯೂ ಟ್ರಂಪ್ ಉಲ್ಲೇಖಿಸಿದರು. ನನ್ನ ಪ್ರಯತ್ನದಿಂದಲೇ ಅಲ್ಲಿ ಶಾಂತಿ ಸ್ಥಾಪನೆಯಾಯಿತು ಎಂದು ಅವರು ಹೇಳಿದರು. ಟ್ರಂಪ್ ಅವರು 2018 ಮತ್ತು 2019 ರಲ್ಲಿ ಇಫ್ತಾರ ಕೂಟ ಆಯೋಜಿಸಿದ್ದರು; ಆದರೆ ನಂತರ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಇಫ್ತಾರ್ ಕೂಟ ಆಯೋಜಿಸುವುದನ್ನು ನಿಷೇಧಿಸಲಾಯಿತು. ಟ್ರಂಪ್ ಈ ವರ್ಷ ಇಫ್ತಾರ್ ಕೂಟ ಆಯೋಜಿಸಿದ್ದು ಇದು ಮೂರನೇ ಬಾರಿಯಾಗಿದೆ.