ಹಿಂದೂಗಳ ರಕ್ಷಣೆ ಯಾವಾಗ ?

ಕಾಶ್ಮೀರದಲ್ಲಿ ನೆಲೆಸಿರುವ ಕಾಶ್ಮೀರಿ ಹಿಂದೂಗಳಿಗೆ ‘ಲಷ್ಕರ್-ಎ-ಇಸ್ಲಾಂ’ ಎಂಬ ಜಿಹಾದಿ ಭಯೋತ್ಪಾದಕ ಸಂಘಟನೆಯು ‘ಕಾಶ್ಮೀರವನ್ನು ತೊರೆಯಿರಿ, ಇಲ್ಲ ಸಾಯಲು ಸಿದ್ಧರಾಗಿ’, ಎಂದು ಒಂದು ಪತ್ರದ ಮೂಲಕ ಬೆದರಿಕೆಯೊಡ್ಡಿದೆ.

ದೆಹಲಿಯ ಖಾಸಗಿ ಶಾಲೆಗಳಲ್ಲಿನ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯತಿ !

ಅಲ್ಪಸಂಖ್ಯಾತರ ಓಲೈಕೆ ಮಾಡುವ ಆಮ್ ಆದ್ಮಿ ಸರಕಾರ !

ಸ್ವಾತಂತ್ರ್ಯದಿಂದ ಇಂದಿನ ವರೆಗಿನ ಎಲ್ಲ ರಾಜಕೀಯ ಪಕ್ಷಗಳು ಹಿಂದೂಗಳನ್ನು ೯ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಾಗಲು ಬಿಟ್ಟಿದೆ !

ಅರುಣಾಚಲ ಪ್ರದೇಶ, ಗೋವಾ, ಕೇರಳ, ಮಣಿಪುರ, ತಮಿಳುನಾಡು ಹಾಗೂ ಬಂಗಾಳ ಈ ರಾಜ್ಯಗಳಲ್ಲಿ ಕ್ರೈಸ್ತರ ಸಂಖ್ಯೆಯು ಗಣನೀಯವಾಗಿದೆ. ಪಂಜಾಬ್‌ನಲ್ಲಿ ಸಿಕ್ಖ್ ಬಹುಸಂಖ್ಯಾತರಿದ್ದಾರೆ ದೆಹಲಿ ಹಾಗೂ ಹರಿಯಾಣ ರಾಜ್ಯಗಳಲ್ಲಿ ಸಿಕ್ಖ್ ಜನಸಂಖ್ಯೆಯು ಗಣನೀಯವಾಗಿದೆ. ಆದರೂ ಅವರಿಗೆ ಅಲ್ಪಸಂಖ್ಯಾತರೆಂದು ತಿಳಿಯಲಾಗುತ್ತಿದೆ.

ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯಿಂದ ಕಾಶ್ಮೀರದಲ್ಲಿ ೬೪ ಸಾವಿರ ೮೨೭ ಹಿಂದೂ ಕುಟುಂಬಗಳು ಪಲಾಯನಗೈದರು.- ಕೇಂದ್ರ ಸರಕಾರ

ಕೇಂದ್ರ ಸರಕಾರದ ಗೃಹ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯಿಂದ ಕಾಶ್ಮೀರದ ೬೪ ಸಾವಿರ ೮೨೭ ಕಾಶ್ಮೀರಿ ಹಿಂದೂ ಕುಟುಂಬಗಳು ೧೯೯೦ ರ ದಶಕದಲ್ಲಿ ಕಾಶ್ಮೀರ ತೊರೆದು ಜಮ್ಮು, ದೆಹಲಿ ಮತ್ತು ದೇಶದ ಅನ್ಯ ಸ್ಥಳಗಳಲ್ಲಿ ಪಲಾಯನ ಮಾಡಲು ಅನಿವಾರ್ಯವಾಯಿತು.

ದೇಶದ ೭೭೫ ಜಿಲ್ಲೆಗಳ ಪೈಕಿ ೧೦೨ ಜಿಲ್ಲೆಗಳಲ್ಲಿ ಹಿಂದೂ ಅಲ್ಪಸಂಖ್ಯಾತರು !

ಎಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ಅಲ್ಲಿ ರಾಜ್ಯ ಸರಕಾರ ಅವರನ್ನು ಅಲ್ಪಸಂಖ್ಯಾತರೆಂದು ಘೋಷಿಸಬಹುದು ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಜಿಲ್ಲಾವಾರು ಜನಸಂಖ್ಯೆಯನ್ನು ಗಮನಿಸಿದರೆ ದೇಶದ ೧೦೨ ಜಿಲ್ಲೆಗಳಲ್ಲಿ ಹಿಂದೂ ಅಲ್ಪಸಂಖ್ಯಾತರಿದ್ದಾರೆ.

ಚಲನಚಿತ್ರ ವಿಮರ್ಶೆ : ಜಿಹಾದಿಗಳ ಕ್ರೌರ್ಯ ಮತ್ತು ಹಿಂದೂ ಆಕ್ರೋಶ : ‘ದ ಕಾಶ್ಮೀರ ಫೈಲ್ಸ್’

‘ಕಾಶ್ಮೀರಿ ಹಿಂದೂಗಳ ಸಮಸ್ಯೆಗಳನ್ನು ಜಗತ್ತಿನ ಮುಂದಿಡಬೇಕು’ ಎಂಬ ಹಿಮಾಲಯದಂತಹ ಹಂಬಲ ಈ ಚಿತ್ರದಲ್ಲಿ ಎಲ್ಲೆಡೆ ಮೂಡಿದೆ. ಜಿಹಾದಿ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರ ವಿರುದ್ಧ (ಉದಾಹರಣೆಗೆ ರಾಜಕಾರಣಿಗಳು, ನಿಷ್ಕ್ರಿಯ ಅಧಿಕಾರಿಗಳು, ಬುದ್ಧಿಜೀವಿಗಳು, ಸೆಕ್ಯುಲರಿಸ್ಟ್‌ಗಳು) ಅಸಮಾಧಾನವನ್ನು ಸೃಷ್ಟಿಸಲು ಚಲನಚಿತ್ರವು ಯಶಸ್ವಿಯಾಗಿದೆ.

ಪಾಕಿಸ್ತಾನದಲ್ಲಿ ಮೊಟ್ಟ ಮೊದಲ ಬಾರಿ ಹಿಂದೂ ಲೆಫ್ಟಿನೆಂಟ್ ಕರ್ನಲ್ ನೇಮಕ !

ಪಾಕಿಸ್ತಾನ ಸೈನ್ಯದಲ್ಲಿ ೨ ಹಿಂದೂ ಅಧಿಕಾರಿಗಳಿಗೆ ಮೊಟ್ಟ ಮೊದಲ ಬಾರಿ ಲೆಫ್ಟಿನೆಂಟ್ ಕರ್ನಲ ಸ್ಥಾನಕ್ಕೆ ಪದೋನ್ನತಿ ನೀಡಲಾಗಿದೆ. ಮೇಜರ ಡಾ. ಕೈಲಾಶ ಕುಮಾರ ಮತ್ತು ಮೇಜರ ಡಾ. ಅನಿಲ ಕುಮಾರ ಎಂದು ಇಬ್ಬರು ಅಧಿಕಾರಿಗಳ ಹೆಸರುಗಳಾಗಿವೆ.

ಪಾಕಿಸ್ತಾನದಲ್ಲಿರುವ ಹಿಂದೂಗಳ ರಕ್ಷಣೆ ಯಾವಾಗ ?

ಪಾಕಿಸ್ತಾನದ ಡಹಾರಕಿ ನಗರದಿಂದ ೨ ಕಿ.ಮೀ ದೂರದಲ್ಲಿ ಸುತಾನ್ ಲಾಲ್ ದಿವಾನ್ ಎಂಬ ಹಿಂದೂ ವ್ಯಾಪಾರಿಯನ್ನು ಅಜ್ಞಾತರು ಗುಂಡಿಕ್ಕಿ ಕೊಂದಿದ್ದಾರೆ. ‘ಜೀವಂತವಾಗಿರಲು ಬಯಸುತ್ತಿದ್ದರೆ ಭಾರತಕ್ಕೆ ತೆರಳಿ’ ಎಂದು ಸುತಾನ್‌ಗೆ ಬೆದರಿಕೆ ಒಡ್ಡಲಾಗುತ್ತಿತ್ತು.

ಅಲ್ಪಸಂಖ್ಯಾತರು ಬಹುಸಂಖ್ಯಾತರಾದಾಗಿನ ಪರಿಸ್ಥಿತಿಯನ್ನು ತಿಳಿಯಿರಿ !

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮಾಧ್ಯಮ ಸಲಹೆಗಾರರಾದ ಶಲಭಮಣಿ ತ್ರಿಪಾಠಿ ಅವರು ‘ಶಾಮಲಿ ಜಿಲ್ಲೆಯಲ್ಲಿ ನೀವು ಕೇವಲ ೨೪ ಸಾವಿರ ಜಾಟ್ ಜನರಿದ್ದು, ನಾವು ೯೦ ಸಾವಿರದಷ್ಟು ಇದ್ದೇವೆ, ಎಂದು ಬೆದರಿಕೆ ಒಡ್ಡುವ ಮತಾಂಧರ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ.

ತಮ್ಮ ನಿಲುವನ್ನು ಸ್ಪಷ್ಟ ಮಾಡದಿದ್ದರಿಂದ ಸರ್ವೋಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಏಳುವರೆ ಸಾವಿರ ರೂಪಾಯಿ ದಂಡ !

ದೇಶದ ೯ ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸಮುದಾಯದ ಸ್ಥಾನಮಾನ ನೀಡುವ ಮನವಿಯ ಅರ್ಜಿಯ ಬಗ್ಗೆ ಕೇಂದ್ರ ಸರಕಾರ ತಮ್ಮ ನಿಲುವನ್ನು ಸ್ಪಷ್ಟಪಡಿಸಿದೆ ಇದ್ದರಿಂದ ಸರ್ವೋಚ್ಚ ನ್ಯಾಯಾಲಯವು ಅಸಮಧಾನ ವ್ಯಕ್ತಪಡಿಸುತ್ತಾ ಸರಕಾರಕ್ಕೆ ೭ ಸಾವಿರದ ೫೦೦ ರೂಪಾಯಿ ದಂಡ ವಿಧಿಸಿದೆ.