ಗಾಜಿಯಾಬಾದ್ (ಉತ್ತರ ಪ್ರದೇಶ) ಶಿವಶಕ್ತಿ ಧಾಮ ದೇವಸ್ಥಾನದಲ್ಲಿ ಮುಸ್ಲಿಂ ದಂಪತಿಗಳ ವಿವಾಹ

ಹಿಂದೂ ಸಂಘಟನೆಗಳ ವಿರೋಧದ ನಂತರ ಪ್ರಕರಣ ದಾಖಲು

ಗಾಜಿಯಾಬಾದ್ (ಉತ್ತರ ಪ್ರದೇಶ) – ಮೋದಿನಗರದ ಗೋವಿಂದಪುರಿಯಲ್ಲಿರುವ ಶಿವಶಕ್ತಿ ಧಾಮ ದೇವಸ್ಥಾನದ ಧರ್ಮಶಾಲೆಯಲ್ಲಿ ಮುಸ್ಲಿಂ ಪ್ರೇಮಿಗಳು ವಿವಾಹವಾಗುತ್ತಿರುವುದನ್ನು ಹಿಂದೂ ಸಂಘಟನೆಗಳು ತಡೆದರು. ಈ ಘಟನೆಯಿಂದ ವಿವಾದ ನಡೆದಿದ್ದು ಹಿಂದೂ ಸಂಘಟನೆಗಳು ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದವು. ಈ ಗೊಂದಲದ ನಡುವೆ ಮದುವೆಗಾಗಿ ಬಂದಿದ್ದ ಪ್ರೇಮಿಗಳು ನಾಪತ್ತೆಯಾದರು. ಮದುವೆಗಾಗಿ ದೇವಸ್ಥಾನ ಸಮಿತಿಯವರು 4 ಸಾವಿರದ 200 ರೂ.ಗಳ ರಸೀದಿಯನ್ನು ಶಬ್ನಮ್ ಎಂಬ ಹೆಸರಿನ ಮಹಿಳೆಗೆ ನೀಡಿದ್ದರು. ವಿವಾಹಕ್ಕಾಗಿ ರಶೀದಿ ನೀಡಿದ್ದ ಮತ್ತು ಈ ಮದುವೆಗೆ ಅವಕಾಶ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪೋಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ.

1. ಹಿಂದೂ ಯುವ ವಾಹಿನಿಯ ನೀರಜ್ ಶರ್ಮಾ ಅವರು ಪೊಲೀಸರಿಗೆ ದೂರನ್ನು ನೀಡಿದ್ದು, ಕೇವಲ ಹಣಕ್ಕಾಗಿ ದೇವಸ್ಥಾನದ ಸಮಿತಿಯವರು ಧರ್ಮದ ಜೊತೆ ಆಟವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

2. ಈ ಪ್ರಕರಣದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಜ್ಞಾನ್ ಪ್ರಕಾಶ್ ಅವರು ಮಾತನಾಡಿ, ಶಿವಶಕ್ತಿ ಧಾಮ ಮಂದಿರದ ಟ್ರಸ್ಟ್ ಮನೋಜ್ ಸಕ್ಸೇನಾ ಎಂಬ ವ್ಯಕ್ತಿಗೆ ಗುತ್ತಿಗೆ ನೀಡಿದೆ. ಮನೋಜ್ ಅವರೇ ದೇವಸ್ಥಾನದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಮನೋಜ್ ಸಕ್ಸೇನಾ ಅವರು ದೇವಸ್ಥಾನದ ಸ್ಥಳವನ್ನು ಮುಸಲ್ಮಾನರ ವಿವಾಹಕ್ಕಾಗಿ ನೀಡಿದ್ದರು. ಈ ಮದುವೆಯು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಈ ಪ್ರಕರಣದಲ್ಲಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಗುತ್ತಿಗೆದಾರ ಮನೋಜ್ ಸಕ್ಸೇನಾನನ್ನು ವಶಕ್ಕೆ ಪಡೆಯಲಾಗಿದೆ.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಧರ್ಮದ ಅಭಿಮಾನ ಮತ್ತು ಧಾರ್ಮಿಕ ಶಿಕ್ಷಣ ಇಲ್ಲದಿರುವುದರಿಂದ, ಇಂತಹ ಘಟನೆಗಳು ನಡೆಯುತ್ತಿವೆ !