ದೆಹಲಿಯ ಖಾಸಗಿ ಶಾಲೆಗಳಲ್ಲಿನ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯತಿ !

ನವದೆಹಲಿ – ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರ ಎಲ್ಲಾ ಖಾಸಗಿ ಶಾಲೆಗಳಲ್ಲಿನ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶಾಲೆಯ ಶುಲ್ಕ ಹಿಂತಿರುಗಿಸುವ ಆದೇಶ ನೀಡಿದೆ. ಇದರಲ್ಲಿ ಒಂದನೇ ತರಗತಿಯಿಂದ ೧೨ ನೇ ತರಗತಿಯವರೆಗೆ ವಿದ್ಯಾರ್ಥಿಗಳ ಸಮಾವೇಶವಿದೆ. ೨೦೨೦-೨೦೨೧ ಮತ್ತು ೨೦೨೧-೨೦೨೨ ಈ ಎರಡೂ ಶೈಕ್ಷಣಿಕ ವರ್ಷಕ್ಕಾಗಿ ಈ ಆದೇಶವಾಗಿದ್ದೂ ದೆಹಲಿ ಸರಕಾರದ ಅಲ್ಪಸಂಖ್ಯಾತರ ಕುರಿತು ಯೋಜನೆಯ ಅಡಿಯಲ್ಲಿ ಈ ಶುಲ್ಕ ದೆಹಲಿ ಸರಕಾರ ಸ್ವತಃ ತುಂಬಲಿದೆ. (ಸಂಕ್ಷಿಪ್ತವಾಗಿ ಬಹುಸಂಖ್ಯೆ ಹಿಂದೂಗಳ ತುಂಬಿರುವ ತೆರಿಗೆಯಿಂದ ಈ ಶುಲ್ಕ ತುಂಬಲಾಗುವುದು. ಹಿಂದೂಗಳೇ, ಆಪ್ ಸರಕಾರದ ಈ ನಿರ್ಣಯಕ್ಕೆ ಕಾನೂನಿನ ಪ್ರಕಾರ ವಿರೋಧಿಸಿ ! ಸಂಪಾದಕರು)

ಈ ಯೋಜನೆಯ ಅಡಿಯಲ್ಲಿ ಯಾವ ಅಲ್ಪಸಂಖ್ಯಾತ ಸಮುದಾಯದಲ್ಲಿ ಕುಟುಂಬದ ವಾರ್ಷಿಕ ಉತ್ಪನ್ನ ೩ ಲಕ್ಷಕ್ಕಿಂತ ಕಡಿಮೆ ಆಗಿದೆ, ಅಂತ ಕುಟುಂಬದಲ್ಲಿನ ವಿದ್ಯಾರ್ಥಿಗಳಿಗಾಗಿ ಈ ರೀತಿಯ ಸೌಲಭ್ಯ ಇರುವುದು. ಪ್ರತಿಯೊಬ್ಬರ ವಿದ್ಯಾರ್ಥಿಗಾಗಿ ನಗದು ೪೮ ಸಾವಿರ ರೂಪಾಯಿವರೆಗಿನ ವಾರ್ಷಿಕ ಶುಲ್ಕ ಹಿಂದಿರುಗಿಸಲಾಗುವುದು.

ಅಲ್ಪಸಂಖ್ಯಾತರ ಓಲೈಕೆ ಮಾಡುವ ಆಮ್ ಆದ್ಮಿ ಸರಕಾರ !- ಸಂಪಾದಕರು