ಮಣಿಪುರ ಸರಕಾರ ಪತನವಾಗದು
ಇಂಫಾಲ್ (ಮಣಿಪುರ) – ಮಣಿಪುರದಲ್ಲಿ ನ್ಯಾಷನಲ್ ಪೀಪಲ್ಸ್ ಪಕ್ಷವು ಭಾಜಪ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದೆ. ಕಳೆದ ವರ್ಷದಿಂದ ರಾಜ್ಯದಲ್ಲಿ ಹಿಂಸಾಚಾರ ಮುಂದುವರೆದಿದೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರವೇ ಈ ನಿರ್ಣಯಕ್ಕೆ ಕಾರಣವೆಂದು ಕಾನರಾಡ ಸಂಗಮ ಅವರ ನೇತೃತ್ವದಲ್ಲಿ ನ್ಯಾಷನಲ್ ಪೀಪಲ್ಸ್ ಪಕ್ಷ ಈ ತೀರ್ಮಾನ ತೆಗೆದುಕೊಂಡಿದೆ, ಎಂದು ಹೇಳಲಾಗಿದೆ, ಆದರೆ ಸರಕಾರಕ್ಕೆ ಬಹುಮತವಿದ್ದು ಈ ನಿರ್ಣಯದಿಂದಾಗಿ ಸರ್ಕಾರ ಪತನವಾಗುವುದಿಲ್ಲ. ಸಂಗಮ ಅವರು ಈ ಬಗ್ಗೆ ಭಾಜಪದ ಅಧ್ಯಕ್ಷ ಜಗದ್ ಪ್ರಸಾದ ನಡ್ದಾ ಅವರಿಗೆ ಪತ್ರ ಬರೆದು ಮಣಿಪುರದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಅದರ ಜೊತೆಗೆ ಅವರು ಸರಕಾರ ಪರಿಸ್ಥಿತಿನ್ನು ನಿಭಾಯಿಸುವ ಪದ್ಧತಿಯ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಾ ಅಮಾಯಕ ಜನರಿಗೆ ಹಾನಿ ಉಂಟಾಗಿರುವುದರಿಂದ ಸರಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಮಣಿಪುರದ ವಿಧಾನಸಭೆಯಲ್ಲಿ ಈ ಪಕ್ಷದ ೭ ಶಾಸಕರಿದ್ದಾರೆ .