ಹಿಂದೂಗಳ ರಕ್ಷಣೆ ಯಾವಾಗ ?

೧. ಹಿಂದೂಗಳ ರಕ್ಷಣೆ ಯಾವಾಗ ?

ಕಾಶ್ಮೀರದಲ್ಲಿ ನೆಲೆಸಿರುವ ಕಾಶ್ಮೀರಿ ಹಿಂದೂಗಳಿಗೆ ‘ಲಷ್ಕರ್-ಎ-ಇಸ್ಲಾಂ’ ಎಂಬ ಜಿಹಾದಿ ಭಯೋತ್ಪಾದಕ ಸಂಘಟನೆಯು ‘ಕಾಶ್ಮೀರವನ್ನು ತೊರೆಯಿರಿ, ಇಲ್ಲ ಸಾಯಲು ಸಿದ್ಧರಾಗಿ’, ಎಂದು ಒಂದು ಪತ್ರದ ಮೂಲಕ ಬೆದರಿಕೆಯೊಡ್ಡಿದೆ.

೨. ನೀಮಚ್ ಪಾಕಿಸ್ತಾನದಲ್ಲಿದೆಯೇ?

ಮೇ ೧೬ ರ ರಾತ್ರಿಯಂದು ನೀಮಚ್ (ಮಧ್ಯಪ್ರದೇಶ) ಇಲ್ಲಿನ ಹಳೆಯ ಕಚೇರಿ ಪರಿಸರದಲ್ಲಿ ಮತಾಂಧರು ಹಿಂದೂಗಳ ಮೇಲೆ ದಾಳಿ ಮಾಡಿದರು. ಇಲ್ಲಿನ ದರ್ಗಾದ ಬಳಿ ಆಂಜನೇಯನ ಮೂರ್ತಿ ಪ್ರತಿಷ್ಠಾಪಿಸಿದರೆಂದು ಮತಾಂಧರು ದಾಳಿ ಮಾಡಿದರು.

೩. ಜಾತ್ಯತೀತ ‘ಆಪ್’ನಿಂದಾಗುವ ಅಲ್ಪಸಂಖ್ಯಾತರ ಓಲೈಕೆಗಳನ್ನು ತಿಳಿಯಿರಿ !

ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರವು ಎಲ್ಲಾ ಖಾಸಗಿ ಶಾಲೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕವನ್ನು ಹಿಂದಿರುಗಿಸಲು ಆದೇಶಿಸಿದೆ. ಈ ಶುಲ್ಕವನ್ನು ದೆಹಲಿ ಸರಕಾರವೇ ಪಾವತಿಸಲಿದೆ.

೪. ಅಖಿಲೇಶ ಯಾದವ ಮಾಡಿದ ಹಿಂದೂದ್ರೋಹವನ್ನು ತಿಳಿಯಿರಿ !

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ ಇವರು, ‘ಹಿಂದೂ ಧರ್ಮಕ್ಕನುಸಾರ ಯಾರಾದರೂ ಅರಳಿ ಮರದ ಕೆಳಗೆ ಕಲ್ಲು ಇರಿಸಿ, ಅಲ್ಲಿ ಧ್ವಜವನ್ನು ಇರಿಸಿ. ದೇವಸ್ಥಾನ ಸಿದ್ಧವಾಗುತ್ತದೆ’, ಎಂದು ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಸಿಕ್ಕಿದ ನಂತರ ಹೇಳಿಕೆ ನೀಡಿದ್ದಾರೆ !

೫. ದಲಿತ-ಮುಸ್ಲಿಂ ‘ಭಾಯಿ ಭಾಯಿ’ ಎಂದು ಹೇಳುವವರು ಈಗೆಲ್ಲಿದ್ದಾರೆ?

ರಾಜಗಡ (ಮಧ್ಯಪ್ರದೇಶ) ದಲ್ಲಿ ದಲಿತ ಹಿಂದೂ ಯುವಕನ ಮದುವೆಯ ದಿಬ್ಬಣದ ಮೇಲೆ ಮಸೀದಿಯೊಂದರಿಂದ ಮುಸಲ್ಮಾನರು ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೮ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ ಈ ಆರೋಪಿಗಳ ಅಕ್ರಮ ಮನೆಗಳ ಮೇಲೆ ಕ್ರಮಕೈಗೊಂಡು ಕೆಡವಿದರು.

೬. ಇಡೀ ದೇಶದಲ್ಲಿಯೇ ಇಂತಹ ಕ್ರಮ ಕೈಗೊಳ್ಳಬೇಕು !

‘ರಾಜ್ಯದಲ್ಲಿರುವ ಅಕ್ರಮ ಚರ್ಚಗಳ  ಬಗ್ಗೆ ನನ್ನ ಬಳಿ ಮಾಹಿತಿ ಇದೆ. ಇಂತಹ ಅಕ್ರಮ ಚರ್ಚಗಳನ್ನು ನೆಲಸಮಗೊಳಿಸುವಂತೆ ಸರಕಾರಕ್ಕೆ ಮನವಿ ಮಾಡುತ್ತೇನೆ’ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ್ ಇವರು ಆಗ್ರಹಿಸಿದ್ದಾರೆ.

೭. ಮಸೀದಿಗಳಾಗಿ ಮಾರ್ಪಟ್ಟಿರುವ ದೇವಾಲಯಗಳೂ ಪೂಜೆಗೆ ಸಿಗಬೇಕು !

ಭಾರತೀಯ ಪುರಾತತ್ವ ಇಲಾಖೆಯ ಅಂತರ್ಗತ ಬರುವ ಮತ್ತು ಮುಚ್ಚಿದ ಧಾರ್ಮಿಕ ಪೂಜಾ ಸ್ಥಳಗಳನ್ನು ತೆರೆಯುವ  ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಕಾನೂನನ್ನು ಸಹ ತಿದ್ದುಪಡಿ ಮಾಡುವ ಸಾಧ್ಯತೆ ಇದೆ.