Former British PM Elizabeth Truss: ಭವಿಷ್ಯದ ನಾಯಕತ್ವದಲ್ಲಿ ಭಾರತದ ಪ್ರಮುಖ ಸ್ಥಾನವಿರಲಿದೆ : ಬ್ರಿಟನ್ನಿನ ಮಾಜಿ ಪ್ರಧಾನಿ ಎಲಿಜಬೆತ್ ಟ್ರಸ್

ಲಂಡನ್ (ಬ್ರಿಟನ) – ಪಾಶ್ಚಿಮಾತ್ಯ ದೇಶಗಳು ತೀವ್ರ ಬಿಕ್ಕಟ್ಟಿನಲ್ಲಿವೆ ಮತ್ತು ಭಾರತವು ಬ್ರಿಟಿಷ್ ಆರ್ಥಿಕತೆಯನ್ನು ಹಿಂದಿಕ್ಕಿದೆ. ಭಾರತದಲ್ಲಿ ಅನೇಕ ಮಹತ್ವಪೂರ್ಣ ಆರ್ಥಿಕ ನೀತಿಗಳು ಮತ್ತು ಸುಧಾರಣೆಗಳಾಗಿವೆ. ಭವಿಷ್ಯ ಕಾಲದ ನಾಯಕತ್ವದಲ್ಲಿ ಭಾರತಕ್ಕೆ ಮಹತ್ವದ ಸ್ಥಾನವಿರಲಿದೆಯೆಂದು ಬ್ರಿಟನ್ನಿನ ಮಾಜಿ ಪ್ರಧಾನಿ ಎಲಿಜಬೆತ್ ಟ್ರಸ್ ಅವರು ‘ಹಿಂದೂಸ್ತಾನ ಟೈಮ್ಸ್ ಲೀಡರ್ ಶಿಪ್ ಶೃಂಗಸಭೆ’ ಯಲ್ಲಿ ಹೇಳಿದರು.

ಟ್ರಸ್ ತಮ್ಮ ಮಾತು ಮುಂದುವರಿಸಿ, ತಂತ್ರಜ್ಞಾನ ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ ಭಾರತ ಮತ್ತು ಬ್ರಿಟನ್ ನಡುವೆ ಬಹಳಷ್ಟು ಸಾಧಿಸಬಹುದಾಗಿದೆ. ಭಾರತವು ಈಗ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ದೀರ್ಘಕಾಲದಿಂದ ಪ್ರಜಾಪ್ರಭುತ್ವವನ್ನು ಪ್ರತಿನಿಧಿಸುತ್ತಿರುವ ದೇಶವಾಗಿದೆ. ಭವಿಷ್ಯ ಕಾಲದ ನಾಯಕತ್ವದಲ್ಲಿ ಅದರ ಮಹತ್ವದ ಸ್ಥಾನವಿರಲಿದೆ, ಅದು ಉತ್ಸಾಹವರ್ಧಕವಾಗಿದೆ. ಚೀನಾದ ಹೆಚ್ಚುತ್ತಿರುವ ಅಪಾಯವನ್ನು ಪರಿಗಣಿಸಿ, ‘ಕ್ವಾಡ್’ ಸಂಘಟನೆಯಲ್ಲಿ ಭಾರತದ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವದ್ದಾಗಿದೆಯೆಂದು ಅವರು ಹೇಳಿದರು.

ಟ್ರಸ್ ಅವರು ಬ್ರಿಟಿಷ್ ಆರ್ಥಿಕತೆಗೆ ಸಂಬಂಧಿಸಿದಂತೆ, ಬ್ರಿಟಿಷ್ ಆರ್ಥಿಕತೆಯು ಆದಷ್ಟು ಶೀಘ್ರದಲ್ಲಿ ಚೇತರಿಸಿಕೊಳ್ಳಬಹುದು ಎಂದು ನನಗೆ ತೋರುತ್ತಿಲ್ಲ. ಬ್ರಿಟನ್ನಿನ ಪ್ರಬಲ ಅಧಿಕಾರಶಾಹಿಗಳ ಮೇಲೆ ನಿಯಂತ್ರಣ ಹೊಂದದೇ ಎಲ್ಲವೂ ಸರಿಯಾಗುವುದಿಲ್ಲ ಎಂದು ಅವರು ಹೇಳಿಕೆ ನೀಡಿದರು.