Bangladeshi Infiltrators Protected In Jharkhand : ‘ಜಾರ್ಖಂಡ್ ಮುಕ್ತಿ ಮೋರ್ಚಾ’ ಸರಕಾರವು ಬಾಂಗ್ಲಾದೇಶಿಗರಿಗೆ ಮದರಸಾಗಳಲ್ಲಿ ಆಶ್ರಯ ನೀಡುತ್ತಿದೆ: ಭಾಜಪ ಅಧ್ಯಕ್ಷ ನಡ್ಡಾ ಆರೋಪ

ಬೊಕಾರೊ (ಜಾರ್ಖಂಡ್) – ಇತ್ತೀಚೆಗೆ ಬಂದ ಗುಪ್ತಚರ ವರದಿ ಪ್ರಕಾರ ಬಾಂಗ್ಲಾದೇಶಿ ನುಸುಳುಕೋರರಿಗೆ ಜಾರ್ಖಂಡ್‌ನ ಮದರಸಾಗಳಲ್ಲಿ ಆಶ್ರಯ ನೀಡಲಾಗುತ್ತಿದೆಯೆಂದು ಹೇಳಲಾಗಿದೆ. ಹೇಮಂತ ಸೊರೇನ್ ಸರಕಾರವು ಬಾಂಗ್ಲಾದೇಶಿಗರಿಗೆ ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ, ಗ್ಯಾಸ್ ಸೌಲಭ್ಯ, ಪಡಿತರ ಚೀಟಿ, ಜಮೀನು ನೀಡುತ್ತಿದೆ ಎಂದು ಭಾಜಪ ಅಧ್ಯಕ್ಷ ಜಗದ್ ಪ್ರಸಾದ ನಡ್ಡಾ ಅವರು ಅಲ್ಲಿನ ಚುನಾವಣಾ ಪತ್ರಿಕಾಗೋಷ್ಠಿಯ ವೇಳೆ ಆರೋಪಿಸಿದರು.

1. ನಡ್ಡಾ ತಮ್ಮ ಮಾತನ್ನು ಮುಂದುವರಿಸಿ, ರಾಹುಲ್ ಗಾಂಧಿಯವರು ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನರನ್ನು ನಾಯಕರನ್ನಾಗಿಸಲು ಬಯಸುತ್ತಿದ್ದಾರೆ; ಆದರೆ ರಾಜೀವ್ ಗಾಂಧಿ ಫೌಂಡೇಶನ್ ಮತ್ತು ರಾಷ್ಟ್ರೀಯ ಸಲಹಾ ಸಮಿತಿಯಲ್ಲಿ ಎಷ್ಟು ಒಬಿಸಿ ಸದಸ್ಯರಿದ್ದರು? ಎಂದವರು ಪ್ರಶ್ನಿಸಿದರು.

2. ಇಂಡಿಯಾ ಒಕ್ಕೂಟದ ನಾಯಕರು ಒಂದೊ ಜೈಲಿನಲ್ಲಿದ್ದಾರೆ ಅಥವಾ ಜಾಮೀನಿನ ಮೇಲೆ ಹೊರಗಿದ್ದಾರೆ. ಜಾಮೀನಿನ ಮೇಲೆ ಹೊರಬಂದಿರುವ ಹೇಮಂತ ಸೊರೇನ್ ಶೀಘ್ರದಲ್ಲೇ ಮತ್ತೆ ಜೈಲಿಗೆ ಹೋಗಲಿದ್ದಾರೆ. ಅವರು 5 ಸಾವಿರ ಕೋಟಿ ರೂ.ಗಳ ಗಣಿ ಹಗರಣ ಹಾಗೂ 236 ಕೋಟಿ ರೂ.ಗಳ ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ನಡ್ಡಾ ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ಕೇಂದ್ರ ಸರಕಾರ ದೇಶದ ಎಲ್ಲಾ ಮದರಸಾಗಳನ್ನು ಮುಚ್ಚಿ ಅಲ್ಲಿನ ಮಕ್ಕಳನ್ನು ಈಗ ಸಾಮಾನ್ಯ ಶಾಲೆಗಳಿಗೆ ಕಳುಹಿಸುವ ಕಾನೂನು ಮಾಡುವುದು ಅವಶ್ಯಕವಾಗಿದೆ !