Shivamogga Muslim Girl Beaten Up : ಹಿಂದೂ ಯುವಕನ ಜೊತೆ ತಿರುಗಾಡಿದಕ್ಕಾಗಿ ಮುಸಲ್ಮಾನ ಯುವತಿಗೆ ಇಸ್ಲಾಮಿಕ್ ಮೂಲಭೂತವಾದಿಗಳಿಂದ ಥಳಿತ !

ಶಿವಮೊಗ್ಗ (ಕರ್ನಾಟಕ) – ಓರ್ವ ಮುಸಲ್ಮಾನ ಯುವತಿಯು ಹಿಂದೂ ಯುವಕನೊಂದಿಗೆ ತಿರುಗಾಡಿದ್ದಕ್ಕಾಗಿ ಇಸ್ಲಾಮಿಕ್ ಮೂಲಭೂತವಾದಿಗಳು ಯುವತಿಯನ್ನು ಥಳಿಸಿರುವ ಘಟನೆ ಕರ್ನಾಟಕದ ಶಿವಮೊಗ್ಗದಲ್ಲಿ ನಡೆದಿದೆ. ಅಲ್ಲದೇ ಯುವತಿಯನ್ನು ಮಸೀದಿಗೆ ಕರೆದೊಯ್ದು ಮತ್ತೊಮ್ಮೆ ಥಳಿಸಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ. ಆರೋಪಿಗಳಲ್ಲಿ ಮಕ್ಬೂಲ್ ಪಾಷಾ, ತೋಹಿದ್, ರಫೀಕ್ ತಸೀನಾ, ತಂಜಿಯಾ, ಕಲೀಂ, ಸುನ್ನು, ನಸ್ರುಲ್ಲಾ, ಅಬ್ದುಲ್, ಜಿಶಾನ್, ರಿಜ್ವಾನ್, ಅಬ್ದುಲ್ಲಾ, ಅಬ್ಬಾಸ್ ಅಲಿ ಮತ್ತು ಅಕ್ಬರ್ ಎಂಬವರು ಸೇರಿದ್ದಾರೆ.

ಈ ಕುರಿತಾದ ಒಂದು ವರದಿಯ ಪ್ರಕಾರ, ಮುಸಲ್ಮಾನ ಯುವತಿಯು ಹಿಂದೂ ಯುವಕನೊಂದಿಗೆ ತಿರುಗಾಡುವುದನ್ನು ಗ್ರಾಮದಲ್ಲಿ ಕೆಲವು ಮುಸಲ್ಮಾನ ಯುವಕರು ನೋಡಿದ್ದಾರೆ. ಯುವತಿಯನ್ನು ತಡೆದು ಈ ಬಗ್ಗೆ ಉತ್ತರಿಸಲು ಯುವಕರು ಕೇಳಿದ್ದಾರೆ. ಯುವತಿಯು ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಅವರಿಗೆ ಹೇಳಿದ್ದಾಳೆ. ಆಗ ಆ ಮುಸಲ್ಮಾನ ಯುವಕರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ಯುವತಿಯರನ್ನು ಅಪಹರಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಮತಾಂಧ ಮುಸಲ್ಮಾನ ಯುವಕರು ತಮ್ಮದೇ ಧರ್ಮದ ಯುವತಿಯರು ಹಿಂದೂ ಯುವಕರೊಂದಿಗೆ ಸುತ್ತಾಡುವುದನ್ನು ಸಹಿಸುವುದಿಲ್ಲ. ಹಿಂದೂಗಳನ್ನು ‘ಮೂಲಭೂತವಾದಿಗಳೆಂದು ಕರೆಯುವ ‘ಪ್ರಗತಿಪರರು’ ಈಗ ಈ ಮತಾಂಧರನ್ನು ‘ಮೂಲಭೂತವಾದಿಗಳು’ ಎಂದು ಕರೆಯುವುದಿಲ್ಲ ಏಕೆ ?