ಅಲ್ಪಸಂಖ್ಯಾತರು ಬಹುಸಂಖ್ಯಾತರಾದಾಗಿನ ಪರಿಸ್ಥಿತಿಯನ್ನು ತಿಳಿಯಿರಿ !

೧. ಸಮಾಜವಾದಿ ಪಕ್ಷದ ಪಾಕಿಸ್ತಾನದ ಮೇಲಿನ ಪ್ರೀತಿಯನ್ನು ತಿಳಿಯಿರಿ !

ಅಖಿಲೇಶ ಯಾದವ

ಭಾರತದ ನಿಜವಾದ ಶತ್ರು ಪಾಕಿಸ್ತಾನವಲ್ಲ, ಚೀನಾ ಇದೆ. ಆದರೆ ಭಾಜಪವು ನಿರಂತರವಾಗಿ ಪಾಕಿಸ್ತಾನವನ್ನು ಗುರಿಯಾಗಿಸುತ್ತದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ ಯಾದವ ಹೇಳಿದ್ದಾರೆ.

೨. ಕಾಂಗ್ರೆಸ್ಸಿಗರ ಪಾಕಿಸ್ತಾನದ ಮೇಲಿನ ಪ್ರೀತಿಯನ್ನು ತಿಳಿಯಿರಿ !

‘ನವಜೋತ್ ಸಿದ್ಧೂಗೆ ಒಮ್ಮೆ ಸಂಪುಟದಲ್ಲಿ ಸ್ಥಾನ ಕೊಡಿ’ ಎಂದು ಪಾಕಿಸ್ತಾನದಿಂದ ನನಗೆ ಸಂದೇಶ ಬಂದಿತ್ತು ಎಂದು ಪಂಜಾಬನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಇವರು ಹೇಳಿದ್ದಾರೆ.

೩. ಅಲ್ಪಸಂಖ್ಯಾತರು ಬಹುಸಂಖ್ಯಾತರಾದಾಗಿನ ಪರಿಸ್ಥಿತಿಯನ್ನು ತಿಳಿಯಿರಿ !

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮಾಧ್ಯಮ ಸಲಹೆಗಾರರಾದ ಶಲಭಮಣಿ ತ್ರಿಪಾಠಿ ಅವರು ‘ಶಾಮಲಿ ಜಿಲ್ಲೆಯಲ್ಲಿ ನೀವು ಕೇವಲ ೨೪ ಸಾವಿರ ಜಾಟ್ ಜನರಿದ್ದು, ನಾವು ೯೦ ಸಾವಿರದಷ್ಟು ಇದ್ದೇವೆ, ಎಂದು ಬೆದರಿಕೆ ಒಡ್ಡುವ ಮತಾಂಧರ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ.

೪. ಭಾರತದಲ್ಲಿ ಜಿನ್ನಾ ಹೆಸರಿನ ಟವರ್ ಏಕೆ ?

ಗುಂಟೂರಿನಲ್ಲಿ (ಆಂಧ್ರಪ್ರದೇಶ) ಸಂಚಾರ ನಿಷೇಧವನ್ನು ಉಲ್ಲಂಘಿಸಿ ಮಹಮ್ಮದ ಅಲಿ ಜಿನ್ನಾ ಟವರ್‌ದಲ್ಲಿ ಗಣರಾಜ್ಯೋತ್ಸವದಂದು ರಾಷ್ಟ್ರಧ್ವಜವನ್ನು ಹಾರಿಸಲು ಪ್ರಯತ್ನಿಸಿದ ‘ಹಿಂದೂ ವಾಹಿನಿ’ ಸಂಘಟನೆಯ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದೆ.

೫. ಹಿಂದೂಗಳು ಹಿಂದೂ ರಾಷ್ಟ್ರದ ಬೇಡಿಕೆ ಮಾಡಿದರೆ, ಅದರಲ್ಲಿ ತಪ್ಪೇನಿದೆ ?

ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕವನ್ನು ‘ಕ್ರೈಸ್ತ ರಾಷ್ಟ್ರ’ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ ೨೮ ಗವರ್ನರ್‌ಗಳ (ರಾಜ್ಯಗಳ ಮುಖ್ಯಸ್ಥರ) ಬೆಂಬಲವೂ ಸಿಕ್ಕಿದೆ. ಟ್ರಂಪ್ ಅವರನ್ನು ‘ಕ್ರೈಸ್ತ’ ಅಮೆರಿಕನ್ನರ ನಾಯಕ ಎಂದು ಕರೆಯಲಾಗುತ್ತದೆ.

೬. ತಮಿಳುನಾಡು ಸರಕಾರದ ಹಿಂದೂದ್ವೇಷವನ್ನು ತಿಳಿಯಿರಿ !

ತಮಿಳುನಾಡಿನಲ್ಲಿ ಕಾನ್ವೆಂಟ್ ಶಾಲೆಯಲ್ಲಿ ೧೨ ನೇ ತರಗತಿಯ ವಿದ್ಯಾರ್ಥಿನಿ ಲಾವಣ್ಯ ಇವಳನ್ನು ಮತಾಂತರಿಸಲು ಕಿರುಕುಳ ನೀಡಲಾಗಿದ್ದರಿಂದ ಅವಳು ಆತ್ಮಹತ್ಯೆ ಮಾಡಿಕೊಂಡಳು. ಈ ಘಟನೆಯ ತನಿಖೆಗಾಗಿ ರಾಷ್ಟ್ರೀಯ ಮಕ್ಕಳ ಅಧಿಕಾರ ಸಂರಕ್ಷಣಾ ಆಯೋಗಕ್ಕೆ ಸಹಕಾರ ನೀಡಲು ತಮಿಳುನಾಡಿನ ಡಿಎಮ್‌ಕೆ ಸರಕಾರ ನಿರಾಕರಿಸಿದೆ.

೭. ಮತಾಂಧ ಮಾಜಿ ಪೊಲೀಸ್ ಮಹಾನಿರ್ದೇಶಕರ ಹಿಂದೂದ್ವೇಷವನ್ನು ತಿಳಿಯಿರಿ !

ಹಿಂದೂಗಳ ಕಾರ್ಯಕ್ರಮಗಳಿಗೆ ಅನುಮತಿ ನೀಡಿದರೆ ನಿಯಂತ್ರಿಸಲಾಗದಂತಹ ಸ್ಥಿತಿಯನ್ನು ತಂದಿಡುತ್ತೇವೆ ಎಂದು  ಪಂಜಾಬ್‌ನ ಮಾಜಿ ಪೊಲೀಸ್ ಮಹಾನಿರ್ದೇಶಕ ಹಾಗೂ ಕಾಂಗ್ರೆಸ್ ಪ್ರದೇಶಾಧ್ಯಕ್ಷ ನವಜೋತ್ ಸಿಂಗ್ ಸಿದ್ಧೂ ಅವರ ಸಲಹೆಗಾರ ಮಹಮ್ಮದ್ ಮುಸ್ತಫಾ ಎಚ್ಚರಿಕೆ ನೀಡಿದ್ದಾರೆ.