ತಮ್ಮ ನಿಲುವನ್ನು ಸ್ಪಷ್ಟ ಮಾಡದಿದ್ದರಿಂದ ಸರ್ವೋಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಏಳುವರೆ ಸಾವಿರ ರೂಪಾಯಿ ದಂಡ !

೯ ರಾಜ್ಯಗಳಲ್ಲಿ ಹಿಂದುಗಳಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಿದ ಪ್ರಕರಣ

ನವದೆಹಲಿ – ದೇಶದ ೯ ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸಮುದಾಯದ ಸ್ಥಾನಮಾನ ನೀಡುವ ಮನವಿಯ ಅರ್ಜಿಯ ಬಗ್ಗೆ ಕೇಂದ್ರ ಸರಕಾರ ತಮ್ಮ ನಿಲುವನ್ನು ಸ್ಪಷ್ಟಪಡಿಸಿದೆ ಇದ್ದರಿಂದ ಸರ್ವೋಚ್ಚ ನ್ಯಾಯಾಲಯವು ಅಸಮಧಾನ ವ್ಯಕ್ತಪಡಿಸುತ್ತಾ ಸರಕಾರಕ್ಕೆ ೭ ಸಾವಿರದ ೫೦೦ ರೂಪಾಯಿ ದಂಡ ವಿಧಿಸಿದೆ. ಈ ಮನವಿಯ ಉತ್ತರ ನೀಡುವುದಕ್ಕಾಗಿ ಕೇಂದ್ರ ಸರಕಾರ ಎರಡು ವಾರದ ಕಾಲಾವಕಾಶ ಕೇಳಿದೆ. ಕಾಶ್ಮೀರ, ಲಡಾಖ, ಪಂಜಾಬ್, ಅರುಣಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯ, ಮಣಿಪೂರ್ ಮತ್ತು ಲಕ್ಷದ್ವೀಪ್ ಈ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಿದ್ದಾರೆ.

೧. ಈ ಮನವಿ ಭಾಜಪದ ನಾಯಕ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಇವರು ದಾಖಲಿಸಿದ್ದರು. ಇವರು ೧೯೯೨ ನೇ ಇಸ್ವಿಯಲ್ಲಿ ಅಲ್ಪಸಂಖ್ಯಾತ ಆಯೋಗ ಕಾಯಿದೆ ಮತ್ತು ೨೦೦೪ ರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಕಾಯಿದೆಗೆ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದರು. ಅವರು ಮನವಿಯಲ್ಲಿ, ೯ ರಾಜ್ಯಗಳಲ್ಲಿ ಹಿಂದೂ ಅಲ್ಪಸಂಖ್ಯಾತರಾಗಿದ್ದಾರೆ ಎಂದರೆ ಅವರ ಜನಸಂಖ್ಯೆ ಕಡಿಮೆ ಇದೆ ಅಲ್ಲಿ ಅವರಿಗೆ ರಾಜ್ಯ ಮಟ್ಟದಲ್ಲಿ ಅಲ್ಪಸಂಖ್ಯಾತ ಇರುವ ಸ್ಥಾನಮಾನ ನೀಡಬೇಕು. ಇದರಿಂದ ಅವರಿಗೂ ಅಲ್ಪಸಂಖ್ಯಾತ ಇರುವ ಲಾಭಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ.

೨. ಈ ಮನವಿಯಲ್ಲಿ, ಈ ೯ ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತ ಇದ್ದರೂ ಲಾಭ ಸಿಗುತ್ತಿಲ್ಲ. ಅವರಿಗೆ ಇದರ ಲಾಭ ಸಿಗಬೇಕು; ಆದರೆ ಅವರಿಗೆ ಸಿಗಬೇಕಾದ ಲಾಭ ಈ ರಾಜ್ಯಗಳಲ್ಲಿ ಬಹುಸಂಖ್ಯಾತರಿಗೆ ಸಿಗುತ್ತಿದೆ. ಮಿಜೋರಾಮ್, ಮೇಘಾಲಯ ಮತ್ತು ನಾಗಾಲ್ಯಾಂಡ್ ಈ ರಾಜ್ಯಗಳಲ್ಲಿ ಕ್ರೈಸ್ತರು ಬಹುಸಂಖ್ಯಾತರಾಗಿದ್ದಾರೆ ಹಾಗೂ ಅರುಣಾಚಲ ಪ್ರದೇಶ, ಗೋವಾ, ಕೇರಳ, ಮಣಿಪೂರ, ತಮಿಳುನಾಡು ಮತ್ತು ಬಂಗಾಲ ಈ ರಾಜ್ಯಗಳಲ್ಲಿ ಕ್ರೈಸ್ತರ ಸಂಖ್ಯೆ ಗಮನರ್ಹವಾಗಿದೆ. ಪಂಜಾಬದಲ್ಲಿ ಸಿಕ್ಖರು ಬಹುಸಂಖ್ಯಾತರಾಗಿದ್ದಾರೆ ಹಾಗೂ ದೆಹಲಿ ಮತ್ತು ಹರಿಯಾನಾ ರಾಜ್ಯಗಳಲ್ಲಿ ಸಿಕ್ಖರ ಜನಸಂಖ್ಯೆ ಗಮನರ್ಹವಾಗಿದೆ. ಆದರೂ ಅವರನ್ನು ಅಲ್ಪಸಂಖ್ಯಾತರೆಂದು ಹೇಳಲಾಗುತ್ತದೆ.