ಚಲನಚಿತ್ರ ವಿಮರ್ಶೆ : ಜಿಹಾದಿಗಳ ಕ್ರೌರ್ಯ ಮತ್ತು ಹಿಂದೂ ಆಕ್ರೋಶ : ‘ದ ಕಾಶ್ಮೀರ ಫೈಲ್ಸ್’

ಚಲಚಿತ್ರದ ಸಮೀಕ್ಷೆ

ಜನವರಿ ೧೯, ೧೯೯೦ ರಂದು ಮತ್ತು ನಂತರ ಕಾಶ್ಮೀರದಲ್ಲಿ ನಿಖರವಾಗಿ ನಡೆದಿದ್ದಾದರು ಏನು ? ಕಾಶ್ಮೀರದಲ್ಲಿ ಹಿಂದೂಗಳ ನರಸಂಹಾರಕ್ಕೆ ಯಾರು ಹೊಣೆ ? ಕಾನೂನು ಮತ್ತು ಸುವ್ಯವಸ್ಥೆ ಹಾಡುಹಗುಲಲ್ಲಿ ಹದಗೆಡುತ್ತಿರುವಾಗ ಪೊಲೀಸರು, ಆಡಳಿತ, ಮಾಧ್ಯಮಗಳು ಏಕೆ ನಿಷ್ಪರಿಣಾಮಕಾರಿಯಾದವು ? ಹಿಂದೂಗಳು ಏಕೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ ? ಅಂದಿನ ಕಾಶ್ಮೀರ ಸರಕಾರ ಈ ನರಸಂಹಾರವನ್ನು ಹೇಗೆ ಬೆಂಬಲಿಸಿತು ? ಇಂದು ಆ ಪರಿಸ್ಥಿತಿಯ ಲಾಭವನ್ನು ಯಾರು ಪಡೆಯುತ್ತಿದ್ದಾರೆ ? ಇದು ಹಾಗೂ ಈ ರೀತಿಯ ಅನೇಕ ಪ್ರಶ್ನೆಗಳ ಉತ್ತರಗಳನ್ನು ಹುಡುಕಲು ಪ್ರೆರೇಪಿಸುವ ‘ದ ಕಾಶ್ಮೀರ್ ಫೈಲ್ಸ್’ ಒಂದು ಅದ್ಭುತ ಚಿತ್ರವಾಗಿದ್ದು, ಶ್ರೀ. ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ಈ ಚಿತ್ರ ಮಾರ್ಚ್ ೧೧ ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ‘ಸನಾತನ ಪ್ರಭಾತ’ ಪತ್ರಿಕೆಯ ವಿಶೇಷ ಪ್ರತಿನಿಧಿ ಶ್ರೀ. ಸಾಗರ ನಿಂಬಾಳ್ಕರ್ ಇವರು ಮಾಡಿದ ಈ ಚಿತ್ರದ ಸಮೀಕ್ಷೆಯನ್ನು ನಾವು ಇಲ್ಲಿ ಕೊಡುತ್ತಿದ್ದೇವೆ.

೧. ಜಿಹಾದಿ ಭಯೋತ್ಪಾದನೆಯ ನೈಜತೆಯನ್ನು ಎದುರಿಸುವ ಅದ್ಭುತ ಚಲನಚಿತ್ರ !

ಅ. ಅತ್ಯುತ್ತಮ ಕಥೆ-ಬರಹ, ಅತ್ಯುತ್ತಮ ಛಾಯಾಚಿತ್ರ, ಕಲಾವಿಧರ ಸೂಕ್ತ ಆಯ್ಕೆ, ಪ್ರಭಾವಶಾಲಿ ನಿರ್ದೇಶನ, ಉತ್ಕೃಷ್ಟ ನಿರ್ಮಾಣ ಮೌಲ್ಯಗಳು ಮತ್ತು ಸ್ಥಳ, ದಿನಾಂಕ ಮತ್ತು ಸಾಕ್ಷ್ಯದೊಂದಿಗೆ ಘಟನೆಗಳ ಉಲ್ಲೇಖ ಇವು ಈ ಚಿತ್ರದ ಶಕ್ತಿಯ ಸ್ಥಾನಗಳಾಗಿದೆ.

ಆ. ಈ ಚಲನಚಿತ್ರ ಕಾಶ್ಮೀರದ ಅಂದಿನ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ. ನೆರೆಹೊರೆಯವರೆಂದು ಮತಾಂಧರು ಹಿಂದೂಗಳಿಗೆ ಆಘಾತ ನೀಡುವುದು, ಒಳ್ಳೆಯ ಸರಕಾರಿ ಅಧಿಕಾರಿಗಳಿಗೆ ಮತಾಂಧರು ಕೆಲಸ ಮಾಡಲು ಬಿಡದಿರುವುದು, ಪೊಲೀಸ್ ಅಧಿಕಾರಿಗೆ ಮೌನವಾಗಿರಲು ‘ಪದ್ಮಶ್ರೀ’ ನೀಡುವುದು, ವ್ಯವಸ್ಥೆಯಿಂದಾಗಿ ಪತ್ರಕರ್ತರ ಬಾಯಿ ಮುಚ್ಚಿ ಗೂಂಡಾ ವರ್ತನೆ ಸಹಿಸಿಕೊಳ್ಳುವುದು, ನಿರಾಶ್ರಿತರ ಶಿಬಿರಗಳಲ್ಲಿ ಹಿಂದೂಗಳ ಸ್ಥಳಾಂತರ, ಮತಾಂಧರ ದೌರ್ಜನ್ಯಗಳನ್ನು ತಮ್ಮ ಮೊಮ್ಮಕ್ಕಳಿಗೆ ತಿಳಿಸಲಾಗದಿರುವುದು ಇತ್ಯಾದಿ ಹಿಂದೂಗಳು ಸಹಿಸಿಕೊಂಡ ಅನ್ಯಾಯ ಮತ್ತು ಅತ್ಯಾಚಾರಗಳು ಜನಮನದಲ್ಲಿ ಬಿಂಬಿಸುವುದರಲ್ಲಿ ಚಲನಚಿತ್ರ ಯಶಸ್ವಿಯಾಗಿದೆ.

ಇ. ‘ಕಾಶ್ಮೀರಿ ಹಿಂದೂಗಳ ಸಮಸ್ಯೆಗಳನ್ನು ಜಗತ್ತಿನ ಮುಂದಿಡಬೇಕು’ ಎಂಬ ಹಿಮಾಲಯದಂತಹ ಹಂಬಲ ಈ ಚಿತ್ರದಲ್ಲಿ ಎಲ್ಲೆಡೆ ಮೂಡಿದೆ. ಜಿಹಾದಿ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರ ವಿರುದ್ಧ (ಉದಾಹರಣೆಗೆ ರಾಜಕಾರಣಿಗಳು, ನಿಷ್ಕ್ರಿಯ ಅಧಿಕಾರಿಗಳು, ಬುದ್ಧಿಜೀವಿಗಳು, ಸೆಕ್ಯುಲರಿಸ್ಟ್‌ಗಳು) ಅಸಮಾಧಾನವನ್ನು ಸೃಷ್ಟಿಸಲು ಚಲನಚಿತ್ರವು ಯಶಸ್ವಿಯಾಗಿದೆ.

ಈ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕಾಶ್ಮೀರಿ ಪಂಡಿತರ ವಿರುದ್ಧ ಕಾಶ್ಮೀರಿ ಯುವಕರನ್ನು ಮಾತ್ರ ಪ್ರಚೋದಿಸಲಾಗುತ್ತದೆ. ಇಂತಹ ವಿಶ್ವವಿದ್ಯಾಲಯಗಳಿಂದ ‘ಸ್ವಾತಂತ್ರ್ಯ’ದ ನೆಪದಲ್ಲಿ ಪ್ರತ್ಯೇಕತಾವಾದಿ ಶಕ್ತಿಗಳಿಗೆ ಸೊಪ್ಪು ಹಾಕಲಾಗುತ್ತಿರುವುದು ಚಲನಚಿತ್ರದಲ್ಲಿ ಒತ್ತಿ ಹೇಳಲಾಗಿದೆ.

ಎ. ‘ಇಂದು ಕಾಶ್ಮೀರ ಉರಿಯುತ್ತಿದೆ, ನಾಳೆ ಇಡೀ ಭಾರತವೇ ಉರಿಯಲಿದೆ !’, ’ಕಾಶ್ಮೀರಿ ಹಿಂದೂಗಳಿಗೆ ಏಕೆ ನ್ಯಾಯ ಸಿಗುತ್ತಿಲ್ಲ ?’, ‘ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿರುವಾಗ ಏಕೆ ಇಷ್ಟೊಂದು ನಿರ್ಲಕ್ಷಿಸಲಾಯಿತು ?’, ‘ಕಾಶ್ಮೀರಿ ಹಿಂದೂಗಳನ್ನು ತಮ್ಮದೇ ದೇಶದಲ್ಲಿ ಏಕೆ ನಿರಾಶ್ರಿತರಾದರು ?’,
‘ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಹಿಂದೂಗಳನ್ನು ಏಕೆ ಮರು ಸ್ಥಾಪಿಸಲಾಗುತ್ತಿಲ್ಲ ?’, ‘ಕಾಶ್ಮೀರಿ ಹಿಂದೂಗಳ ದುಸ್ಥಿತಿಗೆ ಸಾಮಾನ್ಯ ಹಿಂದೂಗಳೂ ಕಾರಣಕರ್ತರಾಗಿದ್ದಾರೆ’, ಎಂಬಂತಹ ಹಲವು ಸಂವಾದಗಳು ಪ್ರೇಕ್ಷಕರನ್ನು ಆತ್ಮಾವಲೋಕನ ಮಾಡುತ್ತವೆ. ಜೊತೆಗೆ ಪ್ರಮುಖ ಪಾತ್ರಗಳ ಹೊರತಾಗಿ, ಇತರ ಪಾತ್ರಗಳ ಹಿನ್ನೆಲೆಯಲ್ಲಿ ಸಂಭಾಷಣೆಗಳು, ಕಾಶ್ಮೀರಿ ಹಾಡುಗಳು ಚಲನಚಿತ್ರವನ್ನು ಇನ್ನೂ ಹರಿತಗೊಳಿಸುತ್ತದೆ.

೨. ಶ್ರೀ. ಅನುಪಮ್ ಖೇರ್ ಮತ್ತು ಇತರ ನಟರ ಅತ್ಯುತ್ತಮ ಅಭಿನಯ !

ಈ ಚಲನಚಿತ್ರದಲ್ಲಿ ಹಿರಿಯ ನಟ ಅನುಪಮ್ ಖೇರ್ ಅವರ ಅದ್ಭುತ ನಟನೆಯನ್ನು ಗೌರವದಿಂದ ಉಲ್ಲೇಖಿಸಬೇಕು. ಕಾಶ್ಮೀರಿಯಾಗಿರುವ ಶ್ರೀ. ಖೇರ್ ಅವರ ಮುಖದ ಪ್ರತಿಯೊಂದು ಭಾವವು ಕಾಶ್ಮೀರಿ ಹಿಂದೂಗಳ ದುಃಸ್ಥಿತಿಯನ್ನು ನೇರವಾಗಿ ಪ್ರೇಕ್ಷಕರ ಹೃದಯಕ್ಕೆ ಮುಟ್ಟಿಸುತ್ತದೆ. ಅವರು ಇಲ್ಲಿಯವರೆಗೆ ತಮ್ಮ ವೃತ್ತಿಜೀವನದಲ್ಲಿನ ಅತ್ಯುತ್ತಮ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿನ್ಮಯ್ ಮಾಂಡ್ಲೇಕರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪಲ್ಲವಿ ಜೋಶಿ ಸೇರಿದಂತೆ ಎಲ್ಲಾ ನಟರು ತಮ್ಮ ಅತ್ಯುತ್ತಮ ನಟನೆಯ ಮೂಲಕ ಚಲನಚಿತ್ರವನ್ನು ಉನ್ನತ ಶಿಖರಕ್ಕೆ ಕೊಂಡೊಯ್ದಿದ್ದಾರೆ. ಈ ಕಾರಣದಿಂದಾಗಿ, ಪ್ರೇಕ್ಷಕರಿಗೆ ಕೆಲವೊಮ್ಮೆ ಮನಸ್ಸಿಗೆ ನೋವಾಗುವುದು, ಕೆಲವೊಮ್ಮೆ ಅತ್ಯುತ್ತಮ ಸಂಭಾಷಣೆಗಳನ್ನು ಚಪ್ಪಾಳೆ ತಟ್ಟುತ್ತಾರೆ, ಕೆಲವೊಮ್ಮೆ ದೇಶಭಕ್ತಿಯ ಘೋಷಣೆಗಳನ್ನು ಕೂಗುತ್ತಾರೆ ಮತ್ತು ಕೆಲವೊಮ್ಮೆ ಭಯೋತ್ಪಾದಕರನ್ನು ಅವಾಚ್ಯವಾಗಿ ನಿಂದಿಸುತ್ತಾರೆ.

ಶ್ರೀ. ಸಾಗರ ನಿಂಬಾಳ್ಕರ್

೩. ‘ದ ಕಾಶ್ಮೀರ್ ಫೈಲ್ಸ್’ ಇದು ಶ್ರೀ. ವಿವೇಕ್ ರಂಜನ್ ಅಗ್ನಿಹೋತ್ರಿಯವರ ಅಸಾಧಾರಣ ಧೈರ್ಯವೇ ಆಗಿದೆ !

‘ದ ಕಾಶ್ಮೀರ್ ಫೈಲ್ಸ್’ನಂತಹ ಚಲನಚಿತ್ರವನ್ನು ಇಲ್ಲಿಯವರೆಗೆ ಯಾರೂ ಕೂಡ ನಿರ್ಮಿಸುವ ಧೈರ್ಯ ಮಾಡಿಲ್ಲ. ಶ್ರೀ. ವಿವೇಕ್ ರಂಜನ್ ಅಗ್ನಿಹೋತ್ರಿ ಇವರಿಗೆ ಮತಾಂಧರು ಮತ್ತು ಚಿತ್ರರಂಗದ ನಿರ್ಮಾಪಕರಿಂದ ಆದ ತೀವ್ರ ವಿರೋಧದಲ್ಲಿಯೂ ಬಾಗಲಿಲ್ಲ. ಬಹುಶಃ ಇನ್ನು ಮುಂದೆ ಶ್ರೀ. ಅಗ್ನಿಹೋತ್ರಿಯವರ ಮೇಲೆ ಮತಾಂಧರು ದಾಳಿ ಮಾಡಬಹುದು. ಜನಪ್ರಿಯತೆಯ ಸಲುವಾಗಿ ಅವರು ಚಲನಚಿತ್ರದಲ್ಲಿ ಇತ್ತೀಚಿನ ಘಟನೆಗಳು, ಪ್ರೇಮಕಥೆಗಳು ಅಥವಾ ಹಾಡುಗಳನ್ನು ಸೇರಿಸಿಲ್ಲ. ಈ ಚಲನಚಿತ್ರ ‘ಕಾಶ್ಮೀರದಲ್ಲಿ ಹಿಂದೂಗಳ
ನರಸಂಹಾರ ಮಾಡಲಾಯಿತು’, ಎಂಬ ಅಂಶವನ್ನು ಒತ್ತಿಹೇಳುತ್ತದೆ. ಅದು ಈ ಅನ್ಯಾಯವನ್ನು ಬಹಿರಂಗ ಪಡಿಸಿಸುತ್ತದೆ. ಈ ಚಲನಚಿತ್ರವನ್ನು ಕೇವಲ ಹಿಂದೂಗಳಿಗೆ ಮಾತ್ರವಲ್ಲದೇ ಜಗತ್ತಿನಾದ್ಯಂತ ಇರುವ ಮುಸ್ಲಿಮರೇತರಮೇಲೂ ಈ ಸ್ಥಿತಿ ಬರಬಾರದೆಂದು ಪ್ರೇಕ್ಷಕರ ಕಣ್ಣು ತೆರೆಯುತ್ತದೆ.

೪. ಹಿಂದೂಗಳಿಗೆ ಮನವಿ ಮತ್ತು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ !

‘ದ ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ಬಗ್ಗೆ ಶ್ರೀ. ಅಗ್ನಿಹೋತ್ರಿಯನ್ನು ಹೊಗಳುವುದರಲ್ಲಿ ಸೀಮಿತರಾಗದೇ, ಚಿತ್ರರಂಗದಲ್ಲಿ ೧೦೦ ವರ್ಷಗಳಲ್ಲಿ ಒಂದೇ ಸಲ ಈ ರೀತಿಯ ಚಲನಚಿತ್ರ ನಿರ್ಮಾಣವಾಗುತ್ತದೆ. ಸಾವಿರಾರು ಕೋಟಿ ರೂಪಾಯಿ ಪಡೆಯುವ ಯಾವುದೇ ಮನರಂಜನಾತ್ಮಕ ಚಲನಚಿತ್ರಕ್ಕಿಂತ ಈ ಚಲನಚಿತ್ರ ಹಲವು ಪಟ್ಟು ಉತ್ತಮವಾಗಿದೆ. ಈ ಚಲನಚಿತ್ರದ ಮೂಲಕ ವೀಕ್ಷಕರ ಹಣವನ್ನು ಭಯೋತ್ಪಾದನೆಗೆ ಸೊಪ್ಪು ಹಾಕುವ ನಟರರಿಗೆ ಹಣ ಸಿಗುವುದಿಲ್ಲ. ಈ ಚಲನಚಿತ್ರವನ್ನು ನೋಡುವ ಪ್ರತಿಯೊಬ್ಬ ಹಿಂದೂಗಳ ಮನದಲ್ಲಿ ಭಯೋತ್ಪಾದನೆಯ ವಿರುದ್ಧ ಆಕ್ರೋಶ ನಿರ್ಮಾಣವಾಗಬೇಕು ಮತ್ತು ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯಕ್ಕಾಗಿ ಪ್ರೇರೇಪಿಸಬೇಕು, ಎಂದು ಗುರು ಚರಣಗಳಲ್ಲಿ ಪ್ರಾರ್ಥನೆ !

– ಶ್ರೀ. ಸಾಗರ ನಿಂಬಾಳ್ಕರ್, ‘ಸನಾತನ ಪ್ರಭಾತ’ ನಿಯತಕಾಲಿಕೆಯ ವಿಶೇಷ ಪ್ರತಿನಿಧಿ, ಕೊಲ್ಲಾಪುರ.

ಚಲನಚಿತ್ರದಲ್ಲಿ ನಡುಕ ಹುಟ್ಟಿಸುವ ಭಯಾನಕ ದೃಶ್ಯಾವಳಿಗಳು !

೧. ಹಿಂದೂ ಮಹಿಳೆಯು ತನ್ನ ಮಕ್ಕಳು ಮತ್ತು ಮಾವನ ಜೀವ ಕಾಪಾಡಲು ಗಂಡನ ರಕ್ತದಿಂದ ಕಲಸಿದ ಅನ್ನವನ್ನು ತಿನ್ನಲು ನೀಡುವುದು.

೨. ಸರ್ಕಾರಿ ಅಧಿಕಾರಿಗಳನ್ನು ನಡುರಸ್ತೆಯಲ್ಲಿ ಹತ್ಯೆ ಮಾಡುವುದು ಮತ್ತು ತ್ರಿವರ್ಣ ಧ್ವಜ ತೆಗೆಯುವುದು

೩. ಮತಾಂಧ ಮಹಿಳೆಯು ಹಿಂದೂ ಮಹಿಳೆಯರಿಗೆ ಪಡಿತರ ಧಾನ್ಯವನ್ನು ಸಿಗದಿರುವಂತೆ ಮಾಡಿ ಭಯೋತ್ಪಾದಕರಂತೆ ವರ್ತಿಸುವುದು

೪. ಮುಸಲ್ಮಾನರ ಮೇಲೆ ಕವಿತೆ ಬರೆದ ಹಿಂದೂವನ್ನು ಹತ್ಯೆ ಮಾಡಿ ಮರಕ್ಕೆ ನೇತು ಹಾಕುವುದು

೫. ಓಡಿಹೋಗುತ್ತಿದ್ದ ಹಿಂದೂಗಳಲ್ಲಿನ ಓರ್ವ ಯುವತಿಗೆ ತಿಂಡಿಯ ಡಬ್ಬದಲ್ಲಿ ಮೂತ್ರ ವಿಸರ್ಜನೆ ಮಾಡಬೇಕಾಯಿತು.

೬. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ (‘ಜೆಎನ್‌ಯು’ನಿಂದ) ನಡೆಯುತ್ತಿರುವ ಹಿಂದೂ ಯುವಕರ ಭಯಾನಕ ದಾರಿ ತಪ್ಪಿಸುವುದು (ಬ್ರೈನ್‌ವಾಶ್)

೭. ಆಸ್ಪತ್ರೆಯಲ್ಲಿಯೂ ಹಿಂದೂಗಳಿಗೆ ಚಿಕಿತ್ಸೆ ಪಡೆಯಲು ಅವಕಾಶ ನೀಡದಿರುವುದು ಮತ್ತು ಭಯೋತ್ಪಾದಕನಿಗೆ ರಕ್ತದಾನ ಮಾಡಿದ ಹಿಂದೂವಿನ ರಕ್ತದ ಬಾಟಲಿಯನ್ನು ಒಡೆದು ರಕ್ತವನ್ನು ವ್ಯರ್ಥ ಮಾಡುವುದು

೮. ಹಿಂದೂಗಳ ನರಮೇಧದ ಬಗ್ಗೆ ಆಗಿನ ಮುಖ್ಯಮಂತ್ರಿ ಹಾಗೂ ಕೇಂದ್ರಿಯ ಗೃಹ ಸಚಿವ ಗುಲಾಮ ನಬಿ ಆಝಾದ ಪರೋಕ್ಷವಾಗಿ ಬೆಂಬಲ ನೀಡಿದ್ದರು, ಅದೇ ರೀತಿ ಆಗಿನ ಪ್ರಧಾನಿ ರಾಜಿವ ಗಾಂಧಿ ನಿಶ್ಕ್ರೀಯವಾಗಿರುವುದು.

೯. ಎಲ್ಲರ ಸಮ್ಮುಖದಲ್ಲಿ ಹಿಂದೂ ಮಹಿಳೆಯ ಬಟ್ಟೆಯನ್ನು ಹರಿದು ಗೋದಾಮಿನಲ್ಲಿ ಗರಗಸದಿಂದ ಆಕೆಯನ್ನು ಉದ್ದಕ್ಕೆ ಕೊಯ್ಯುವುದು.

೧೦. ಸತತವಾಗಿ ನಿರ್ದಾಕ್ಷಿಣ್ಯವಾಗಿ ೨೫ ಜನರ ಸಾಲಾಗಿ ಹತ್ಯೆ ಮಾಡುವುದು

ಮುಖ್ಯಾಂಶಗಳು

೧. ಇಡೀ ಚಿತ್ರಮಂದಿರವು ವೀಕ್ಷಕರಿಂದ ತುಂಬಿತ್ತು; ಆದರೆ ಅದರಲ್ಲಿ ಒಬ್ಬ ಮತಾಂಧನೂ ಇರಲಿಲ್ಲ.

೨. ನಗರದಲ್ಲಿ ದಿನದಲ್ಲಿ ಕೇವಲ ಎರಡು ಚಿತ್ರಮಂದಿರಗಳಲ್ಲಿ ಪ್ರತಿದಿನ ಈ ಚಲನಚಿತ್ರದ ಕೇವಲ ಮೂರು ಆಟಗಳನ್ನು ಆಯೋಜಿಸಿದೆ; ಆದರೆ ಮೂರು ಆಟಗಳಿಗೆ ಸಂಪೂರ್ಣ ಟಿಕೆಟ್ ಮಾರಾಟವನ್ನು ಮುಂಚಿತವಾಗಿ ಮಾಡಲಾಗಿತ್ತು.

೩. ವೀಕ್ಷಕರಲ್ಲಿ ಯುವಕರು ಹಾಗೂ ಮಧ್ಯವಯಸ್ಕರರು ಹೆಚ್ಚು ಪ್ರಮಾಣದಲ್ಲಿ ಸಹಭಾಗವಿತ್ತು.

– ಶ್ರೀ. ಸಾಗರ ನಿಂಬಾಳ್ಕರ, ಕೊಲ್ಲಾಪುರ

ಕಳೆದ ೧೫ ವರ್ಷಗಳಿಂದ ಕಾಶ್ಮೀರಿ ಹಿಂದೂಗಳಿಗಾಗಿ ಕೆಲಸ ಮಾಡುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ಪ್ರದರ್ಶನದ ನೆನಪಾಗುವುದು !

‘ಹಿಂದೂ ಜನಜಾಗೃತಿ ಸಮಿತಿ’ಯ ವತಿಯಿಂದ ೨೦೦೭ ರಿಂದ ‘ಫೌಂಡೆಶನ್ ಅಗೆನ್ಸ್ಟ ಕಂಟಿನ್ಯುಯಿಂಗ್ ಟೆರರಿಸಂ’ (ಫಾಕ್ಟ) ಸಂಸ್ಥೆಯು ಕಾಶ್ಮೀರಿ ಹಿಂದೂಗಳ ಮೇಲಿನ ಅನ್ಯಾಯವನ್ನು ತೋರಿಸುವ ‘… ಮತ್ತು ಜಗತ್ತು ಶಾಂತವಾಯಿತು !’ ಅದನ್ನು ಜಾಗೃತ ಗೊಳಿಸಲು ಪ್ರದರ್ಶನಗಳನ್ನು ಹಾಕಲಾಗುತ್ತದೆ ! ಈ ಪ್ರದರ್ಶನಗಳ ಹಲವು ದೃಶ್ಯಗಳು ಚಲನಚಿತ್ರದಲ್ಲಿ ನೋಡಿ ನೈಜ ಸ್ಥಿತಿಯ ಭಯಾನಕ ದರ್ಶನವಾಗುತ್ತವೆ.’

– ಶ್ರೀ. ಸಾಗರ ನಿಂಬಾಳ್ಕರ, ಕೊಲ್ಲಾಪುರ

ಪ್ರಸಾರ ಮಾಧ್ಯಮಗಳ ಹಿಂದೂ ದ್ವೇಷ !

ಹಿಂದುದ್ವೇಷಿ ಮತ್ತು ಮತಾಂಧಪ್ರೇಮಿ ಚಲನಚಿತ್ರಗಳು ಬೆಳೆದಿವೆ. ಅಂತಹ ಚಲನಚಿತ್ರಗಳಿಗೆ ಕಥಿತ ಚಲನಚಿತ್ರ ವಿಮರ್ಶಕರು ತಲೆಮೇಲೆ ತೆಗೆದುಕೊಳ್ಳುತ್ತಾರೆ ಮತ್ತು ಅಂತಹ ವಿಮರ್ಶೆಗಳನ್ನು ಅನೇಕ ಪ್ರಮುಖ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತದೆ; ಆದರೆ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಬಹಿರಂಗಪಡಿಸುವ ‘ದ ಕಾಶ್ಮೀರ ಫೈಲ್’ ಕುರಿತು ಪರಿಶೀಲಿಸುವುದನ್ನು ಬಿಟ್ಟುಬಿಡಿ, ಅದರ ಬ್ಗಗೆ ಹೆಚ್ಚಿನ ಮಾಧ್ಯಮಗಳು ಪ್ರತಿಕ್ರಿಯಿಸಲು ಸಿದ್ಧವಾಗಿರಲಿಲ್ಲ. ಹಿಂದೂಗಳು ಅವರನ್ನು ಬಹಿಷ್ಕರಿಸಿದರೆ ತಪ್ಪೇನಿದೆ ? – ಶ್ರೀ. ಸಾಗರ ನಿಂಬಾಳ್ಕರ್

ವೀಕ್ಷಕರಿಂದ ಕೆಲವು ಅಭಿಪ್ರಾಯಗಳು !

೧. ‘ಚಲನಚಿತ್ರದಲ್ಲಿ ವೀಕ್ಷಕರು ಸಹಿಸಿಕೊಳ್ಳುವ ಮತ್ತು ‘ಸೆನ್ಸಾರ್’ ಅನುಮೋದಿಸುವುದು, ಇದೇ ರೀತಿ ಪ್ರಸಂಗಗಳನ್ನೇ ತೆಗೆದುಕೊಂಡಿದೆ. ಆಗಿನ ಪರಿಸ್ಥಿತಿ ಇದಕ್ಕಿಂದ ಹೆಚ್ಚು ಭಯಾನಕವಾಗಿತ್ತು. ಹಿಂದೂ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ, ಗಂಡನ ಮುಂದೆ ಅವರ ಮೇಲೆ ಅತ್ಯಾಚಾರ ಮಾಡುವುದು ಇತ್ಯಾದಿಗಳು ಆಗ ಸೀಮಿತವಾಗಿರಲಿಲ್ಲ.’ – ಓರ್ವ ಸೈನಿಕ, ಭಾರತೀಯ ಸೇನೆ

೨. ‘ನಾವು ಸಿಂಧಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದೇವೆ; ಆದರೆ ಕಾಶ್ಮೀರವನ್ನು ಪಾಕಿಸ್ತಾನ ಮಾಡುವುದಕ್ಕಾಗಿ ಮಾಡಿದ ಪ್ರಯತ್ನಗಳನ್ನು ನೋಡಿ ಹೃದಯ ಹಿಂಡಿದಂತಾಯಿತು. ಅಂದಿನ ರಾಜ್ಯಕರ್ತರನ್ನು ಗಲ್ಲಿಗೇರಿಸಬೇಕು.’ – ಓರ್ವ ಸಿಂಧಿ ನಾಗರಿಕ

೩. ‘ಈ ಚಲನಚಿತ್ರ ನೋಡಿ ಹಿಂದುಗಳು ಪಾಠ ಕಲಿಯಬೇಕು. ಇಂದು, ನಾವು ನಮ್ಮ ಮತಾಂಧ ಸ್ನೇಹಿತರೊಂದಿಗೆ ಎಷ್ಟು ಹತ್ತಿರ ಇಟ್ಟುಕೊಳ್ಳಬೇಕು ಎಂದು ಒಮ್ಮೆ ನಿರ್ಧರಿಸಬೇಕು. ಸದ್ಯ ಹಿಂದೂಗಳ ಅಸ್ತಿತ್ವದ ಪ್ರಶ್ನೆ ನಿರ್ಮಾಣವಾಗಿದೆ. ಅದಕ್ಕೆ ಏನಾದರೂ ಮಾಡಲೇಬೇಕು.’ – ಇಬ್ಬರು ಹಿಂದೂ ಯುವಕರು