ಪಾಕಿಸ್ತಾನದಲ್ಲಿರುವ ಹಿಂದೂಗಳ ರಕ್ಷಣೆ ಯಾವಾಗ ?

೧. ದೇಶದ ಪ್ರತಿಯೊಂದು ಹಳ್ಳಿಯಲ್ಲಿಯೂ ಗೋಶಾಲೆ ಬೇಕು !

ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಸ್ಥಾಪಿಸಿದರೂ ಸಾಕಾಗುವುದಿಲ್ಲ. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಮಾತ್ರವಲ್ಲದೆ ಗ್ರಾಮ ಮಟ್ಟದಲ್ಲೂ ಗೋಶಾಲೆಗಳನ್ನು ಸ್ಥಾಪಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

೨. ನಿದ್ರಿಸುತ್ತಿರುವ ರೈಲ್ವೆ ಆಡಳಿತ !

ಬೆಂಗಳೂರಿನ ರೈಲು ನಿಲ್ದಾಣದ ಪ್ಲಾಟ್ ಫಾರಂ ನಂ.೫ ರಲ್ಲಿ ಕೂಲಿಗಳ ವಿಶ್ರಾಂತಿ ಕೊಠಡಿಯನ್ನು ಪ್ರಾರ್ಥನಾ ಸ್ಥಳವನ್ನಾಗಿ ಮಾಡಿಕೊಂಡಿರುವುದು ಬಹಿರಂಗವಾಗಿದೆ. ಇದಕ್ಕೆ ಹಿಂದುತ್ವನಿಷ್ಠ ಸಂಘಟನೆಗಳು ವಿರೋಧಿಸಿದ ನಂತರ ಅದನ್ನು ಬದಲಾಯಿಸಲಾಯಿತು.

೩. ಪಾಕಿಸ್ತಾನದಲ್ಲಿರುವ ಹಿಂದೂಗಳ ರಕ್ಷಣೆ ಯಾವಾಗ ?

ಪಾಕಿಸ್ತಾನದ ಡಹಾರಕಿ ನಗರದಿಂದ ೨ ಕಿ.ಮೀ ದೂರದಲ್ಲಿ ಸುತಾನ್ ಲಾಲ್ ದಿವಾನ್ ಎಂಬ ಹಿಂದೂ ವ್ಯಾಪಾರಿಯನ್ನು ಅಜ್ಞಾತರು ಗುಂಡಿಕ್ಕಿ ಕೊಂದಿದ್ದಾರೆ. ‘ಜೀವಂತವಾಗಿರಲು ಬಯಸುತ್ತಿದ್ದರೆ ಭಾರತಕ್ಕೆ ತೆರಳಿ’ ಎಂದು ಸುತಾನ್‌ಗೆ ಬೆದರಿಕೆ ಒಡ್ಡಲಾಗುತ್ತಿತ್ತು.

೪. ಢೋಂಗಿ ಜಾತ್ಯತೀತ ಕಾಂಗ್ರೆಸ್ !

ನಾನು ಹಿಂದೂ ಎಂಬ ಕಾರಣಕ್ಕೆ ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯ ಕಣದಿಂದ ಹೊರಹಾಕಲಾಗಿದೆ ಎಂದು ಪಂಜಾಬ್‌ನ ಕಾಂಗ್ರೆಸ್ ನಾಯಕ ಸುನೀಲ್ ಜಾಖಡ ಹೇಳಿದ್ದಾರೆ. ಪಂಜಾಬ್ ಸಿಕ್ಖ್ ಬಹುಸಂಖ್ಯಾತ ರಾಜ್ಯವಾಗಿದೆ. ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

೫. ಇದು ಪ್ರಜಾಪ್ರಭುತ್ವದ ದುರಂತವಲ್ಲವೇ ?

ಉತ್ತರಪ್ರದೇಶದಲ್ಲಿ ಮೊದಲ ಹಂತದ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಶೇ.೭೫, ರಾಷ್ಟ್ರೀಯ ಲೋಕದಳ ಶೇ. ೫೯, ಭಾಜಪವು ಶೇ.೫೧, ಕಾಂಗ್ರೆಸ್ ಶೇ.೩೬, ಬಿಎಸ್‌ಪಿ ಶೇ.೩೪ ಮತ್ತು ಆಪ್ ಶೇ.೧೫ ರಷ್ಟು ಅಪರಾಧಿ ಹಿನ್ನೆಲೆಯಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

೬. ಭಾರತದ ಜಾತ್ಯತೀತವಾದಿಗಳು ಈ ಬಗ್ಗೆ ಏಕೆ ಮೌನವಾಗಿದ್ದಾರೆ ?

ಫ್ರಾನ್ಸ್‌ನಲ್ಲಿ ಹೆಚ್ಚುತ್ತಿರುವ ಇಸ್ಲಾಮಿ ಮತಾಂಧತೆಯ ಕುರಿತಾದ ಮಾಹಿತಿಯನ್ನು ವಾರ್ತಾವಾಹಿಯಲ್ಲಿ ತೋರಿಸಿದ್ದಕ್ಕಾಗಿ ‘ಕೆನಾಲ್ ಪ್ಲಸ್’ ವಾರ್ತಾವಾಹಿನಿಯ ಮಹಿಳಾ ಪತ್ರಕರ್ತೆ ಒಫೆಲಿ ಮೆಯೂನೀರ್‌ಗೆ ಬೆದರಿಕೆ ಹಾಕಲಾಗಿದೆ.

೭. ಮತಾಂಧರ ಕಾಮವನ್ನು ತಿಳಿಯಿರಿ !

 ೧೯೭೦ ರ ದಶಕದಲ್ಲಿ ಅಪ್ರಾಪ್ತ ಬಾಲಕಿ ಮತ್ತು ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಬ್ರಿಟಿಷ್ ಸಂಸತ್ತಿನ ಜೀವಾವಧಿ ಸದಸ್ಯ ಲಾರ್ಡ್ ನಜೀರ್ ಅಹ್ಮದ್ ಅವರಿಗೆ ಐದೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.

ಹಿಂದೂಗಳಲ್ಲಿ ಕೇವಲ ಅಸ್ತಿತ್ವ ಮತ್ತು ಅರಿವು ಮಾತ್ರ ಉಳಿದುಕೊಂಡಿದೆ; ಆದರೆ ಅವರಲ್ಲಿ ಜಾಗೃತಿಯು ಇಲ್ಲದಿರು ವುದರಿಂದ ಹಿಂದೂ ಧರ್ಮದ ಮೇಲೆ ನಿರಂತರವಾಗಿ ಆಕ್ರಮಣಗಳು ಆಗುತ್ತಿವೆ.

– ಶ್ರೀ ಶ್ರೀ ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಕರ್ನಾಟಕ